*5 ಸ್ಥಾನಕ್ಕೆ 14 ಪ್ರತಿಷ್ಠಿತರ ಪೈಪೋಟಿ*
ಹುಬ್ಬಳ್ಳಿ : ಪೇಡಾ ನಗರಿಯ ಶತಮಾನದ ಇತಿಹಾಸವಿರುವ ಪ್ರತಿಷ್ಠಿತ ಧಾರವಾಡ ಜಿಮಖಾನಾ ಕ್ಲಬ್ ನೂತನ ಆಡಳಿತ ಮಂಡಳಿಯ ಆಯ್ಕೆಗೆ ನಾಳೆ ಚುನಾವಣೆ ಜರುಗಲಿದೆ.
ಹಿರಿಯ ಅಧಿಕಾರಿಗಳು, ವೈದ್ಯರು, ಸಮಾಜದಲ್ಲಿ ಗಣ್ಯರಾದ ಕೆಲವೇ ಕೆಲವು ಸದಸ್ಯರನ್ನು ಹೊಂದಿರುವ ಕ್ಲಬ್ ಗೆ ಜಿಲ್ಲಾಧಿಕಾರಿಗಳು ಖಾಯಂ ಅಧ್ಯಕ್ಷರಾಗಿರುತ್ತಾರೆ. ಅಪರ ಜಿಲ್ಲಾಧಿಕಾರಿಗಳು ಕೋಶಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿಗಳು,ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಪದಾಧಿಕಾರಿಗಳಾಗಿರುತ್ತಾರೆ.
ಜಿಮಾಖಾನದ ಆಡಳಿತ ಮಂಡಳಿಯ ಎರಡು ವರ್ಷಗಳ ಅವಧಿಗೆ ಐದು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು,
ಮಾಜಿ ಪ್ರಥಮ ಪ್ರಜೆ ಈರೇಶ ಅಂಚಟಗೇರಿ, ಉದ್ಯಮಿ ಸುನೀಲ ಸರೂರ, ಚಂದ್ರಶೇಖರ್, ಜಯದೇವ ಜಿ.ಕೆ., ಡಾ.ಮಹೇಶ ಪಾಟೀಲ, ಜೆ.ಎಲ್.ಜಾಧವ, ಎನ್.ಎಸ್.ಬಿರಾದಾರ, ಪ್ರಮೋದ ದೇಸಾಯಿ, ಎಂ.ಜಿ.ಕಟ್ಟಿ, ಮಹೇಶ ಹಿರೇಮಠ, ಲಕ್ಷ್ಮೀಕಾಂತ ನಾಯ್ಕ, ವೀರಣ್ಣ ಯಳಲ್ಲಿ, ಸುಭಾಸ ಪಾಟೀಲ ಸೇರಿದಂತೆ ಒಟ್ಟು 14 ಜನರು ಚುನಾವಣಾ ಕಣದಲ್ಲಿದ್ದಾರೆ.
ಕೆ ಸಿ ಪಾಕ್೯ ಪಕ್ಕದಲ್ಲಿರುವ ಜಿಮಖಾನ ಕ್ಲಬ್ ಒಂದು ಕಾಲದಲ್ಲಿ ದೇಶದ ಕೆಲವೇ ಕೆಲವು ಪ್ರತಿಷ್ಠಿತ ಜಿಮಖಾನ ಗಳಲ್ಲಿ ಒಂದಾಗಿತ್ತೆಂಬುದನ್ನು ಇಂದಿಗೂ ಹಳೆಯ ಅಧಿಕಾರಿಗಳು ನೆನೆಸಿಕೊಳ್ಳುತ್ತಾರೆ.
ಉತ್ತಮ ಪರಿಸರದಲ್ಲಿ ವಿಶಾಲ ಆವರಣದಲ್ಲಿ ಕಟ್ಟಡ ಹೊಂದಿರುವ ಕ್ಲಬ್ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಅಲ್ಲದೇ ಹೊಸದಾಗಿ ಸದಸ್ಯರ ನೊಂದಣಿ ಕೂಡ ಆಗಿಲ್ಲ. ಹೀಗಾಗಿ ಅನೇಕರು ಸದಸ್ಯತ್ವ ಬಯಸಿದ್ದರೂ ನೊಂದಣಿ ಪ್ರಕ್ರಿಯೆ ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಜಿಮಖಾನ ಕ್ಲಬ್ ನಲ್ಲಿ 233 ಸದಸ್ಯರಿದ್ದಾರೆ. ನಾಳೆ ಬೆಳಗ್ಗೆ 9 ರಿಂದ ಸಂಜೆ 4 ವರೆಗೆ ಮತದಾನ ನಡೆಯಲಿದ್ದು, ನಂತರ ಎಣಿಕೆ ಕಾರ್ಯ ನಡೆಯಲಿದೆ.
*ಗತವೈಭವ ಮರುಕಳಿಸಬೇಕಿದೆ*
ಶತಮಾನಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ
ಧಾರವಾಡ ಜಿಮಖಾನ ಕ್ಲಬ್ ನಗರದಲ್ಲಿರುವ ಹಿರಿಯ ಸಂಸ್ಥೆ.
ದಕ್ಷಿಣ ಭಾರತದ ನಾಲ್ಕು ಕ್ಲಬ್ ಗಳಲ್ಲಿ ಒಂದಾಗಿದ್ದ ಕ್ಲಬ್ ಇನ್ನಷ್ಟು ಅಭಿವೃದ್ಧಿ ಸಾಧಿಸಬೇಕಿದೆ. ಧಾರವಾಡಕ್ಕೆ ಬಂದು ಹೋದ ಅನೇಕ ಅಧಿಕಾರಿಗಳು ಕ್ಲಬ್ ನ ಹಿತಕಾಯಲಿಲ್ಲ. ಇದರಿಂದ ಯಾವುದೇ ಸುಧಾರಣೆ ಆಗಲಿಲ್ಲ.
ಸಮಾಜದಲ್ಲಿ ವೈದ್ಯರು ಸೇರಿದಂತೆ ಗಣ್ಯ ವ್ಯಕ್ತಿಗಳು ಕ್ಲಬ್ ಸದಸ್ಯತ್ವ ಹೊಂದಿದ್ದಾರೆ.
ಸುಸಜ್ಜಿತ ಕಟ್ಟಡ, ಉತ್ತಮ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ
ಸುಧಾರಣೆ ಅಗತ್ಯವಿದೆ.
ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿರುವೆ.
*ಈರೇಶ ಅಂಚಟಗೇರಿ*
ಮಾಜಿ ಮೇಯರ