ಧಾರವಾಡ: ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರೊಬ್ಬರ ಹಣ ಪಾವತಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಧಾರವಾಡ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ನನ್ನು ಜಿಲ್ಲಾ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.
30 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಾಹಕ ಇಂಜಿನಿಯರ್ ದೇವರಾಜ ಶಿಗ್ಗಾಂವಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾರೆ.
ಹುಬ್ಬಳ್ಳಿಯ ಗುತ್ತಿಗೆದಾರ ಆರ್.ಎನ್. ನಾಯಕ ಎಂಬುವರು ಸಣ್ಣ ನೀರಾವರಿ ಇಲಾಖೆಯ ಕಾಮಗಾರಿ ಮಾಡಿದ್ದರು. 30 ವರ್ಷಗಳಿಂದ ಇಲಾಖೆಯ ಅಧಿಕಾರಿಗಳು ಕಾಮಗಾರಿಯ 18 ಲಕ್ಷ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಅದರೆ ಈಗ ಆ ಮೊತ್ತದ ಬಡ್ಡಿ ಬೆಳೆದು 3 ಕೋಟಿ 34 ಲಕ್ಷ ರೂಪಾಯಿ ಆಗಿತ್ತು. ಈ ಸಂಬಂಧ ನಾಯಕ ಅವರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಾದ- ಪ್ರತಿವಾದ ನಡೆದು ಇಂಜಿನಿಯರ್ ಪರ ವಕೀಲರು ಹಣ ಪಾವತಿಗೆ 15 ದಿನಗಳ ಕಾಲಾವಕಾಶ ಕೋರಿದರು.
ಮನವಿಗೆ ಒಪ್ಪದ ನ್ಯಾಯಾಧೀಶರು, ಇಂಜಿನಿಯರ್ಗೆ ಬಾಡಿ ವಾರಂಟ್ ಜಾರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಇಲಾಖೆಯಲ್ಲಿ ದೇವರಾಜ ಶಿಗ್ಗಾಂವಿ
ಭ್ರಷ್ಟ ಅಧಿಕಾರಿ ಮಾತುಗಳಿದ್ದು, ಗುತ್ತಿಗೆದಾರರಿಗೆ ಹಣ ಪಾವತಿಯಲ್ಲಿ ಪೀಡಕ ಎನ್ನಲಾಗುತ್ತಿದೆ.ಗುತ್ತಿಗೆದಾರರಿಗೆ
ಅನವಶ್ಯಕವಾಗಿ ಪಾವತಿ ವಿಳಂಬ ಮಾಡುವ ಪ್ರವೃತ್ತಿ ರೂಢಿಸಿಕೊಂಡಿರುವ ದೇವರಾಜ, ಈ ಹಿಂದೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದೂ ಇದೆ.