*ಕ್ಲೀನ್ ಸ್ವೀಪ್ ಮಾಡಿದ ಹಾಲಿ ತಂಡ / ತಲೆಕೆಳಗಾದ ಲಿಂಬಿಕಾಯಿ – ಉಡಕೇರಿ ಗುಂಪಿನ ಲೆಕ್ಕಾಚಾರ*
ಧಾರವಾಡ : ಕನ್ನಡ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಶತಮಾನದ ಹಿರಿಮೆಯ ಧಾರವಾಡ ವಿದ್ಯಾವರ್ಧಕ ಸಂಘದ ನೂತನ ಆಡಳಿತ ಮಂಡಳಿ ಚುನಾವಣೆಯಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡಿ ಹಾಲಿ ಅಧಿಕಾರದಲ್ಲಿ ಇರುವ ಚಂದ್ರಕಾಂತ ಬೆಲ್ಲದ ಗುಂಪು ಭರ್ಜರಿ ಜಯಭೇರಿ ಬಾರಿಸಿದೆ.
ಅಧ್ಯಕ್ಷ ಸ್ಥಾನಕ್ಕೆ ಇದುವರೆಗಿನ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ ನಡುವಣ ಹಣಾಹಣಿಯಲ್ಲಿ ಬೆಲ್ಲದ 512 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಮಹತ್ವದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇರ ಪೈಪೋಟಿಯಲ್ಲಿ ತೀವ್ರ ಜಿದ್ದಾಜಿದ್ದಿ ನಡೆದು ಶಂಕರ್ ಹಲಗತ್ತಿ ಪ್ರಕಾಶ್ ಉಡಕೇರಿ ಅವರನ್ನು 559 ಮತಗಳ ಅಂತರದಿಂದ ಸೋಲಿಸಿದ್ದಾರೆ. ಬೆಲ್ಲದ ಬಣದ ಹದಿನೈದು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಗೆಲುವು ಸಾಧಿಸಿದ ಬೆಲ್ಲದ ಬಣದ ಅಭ್ಯರ್ಥಿಗಳ ವಿವರ ಇಂತಿದೆ
*ಉಪಾಧ್ಯಕ್ಷ* ಡಾ.ಸಂಜೀವ ಕುಲಕರ್ಣಿ
*ಕಾರ್ಯಾಧ್ಯಕ್ಷ* ಬಸವ ಪ್ರಭು ಹೊಸಕೇರಿ
*ಕೋಶಾಧ್ಯಕ್ಷ* ಸತೀಶ ತುರಮರಿ
*ಸಹ ಕಾರ್ಯದರ್ಶಿ* ಶಂಕರ ಕುಂಬಿ
*ಕಾರ್ಯಕಾರಿ ಸಮಿತಿ ಮಹಿಳಾ ಮೀಸಲು* ಶ್ರೀಮತಿ ವಿಶ್ವೇಶ್ವರಿ ಹಿರೇಮಠ
ಪ ಜಾ ಪ ಪಂ ಮೀಸಲು ಡಾ. ಧನವಂತ ಹಾಜವಗೋಳ
*ಕಾರ್ಯಕಾರಿ ಸಮಿತಿ ಸಾಮಾನ್ಯ ಸದಸ್ಯರು*
೧) ಶ್ರೀಮತಿ ಶೈಲಜಾ ಅಮರ ಶೆಟ್ಟಿ
೨) ವೀರಣ್ಣ ಒಡ್ಡೀನ
೩) ಗುರು ಹಿರೇಮಠ
೪) ಮಹೇಶ್ ಹೊರಕೇರಿ
೫) ಜನದತ್ತ ಹಡಗಲಿ
೬) ಪ್ರೋ ಶಶಿಧರ್ ತೋಡಕರ
೭) ಶಿವಾನಂದ ಭಾವಿಕಟ್ಟಿ
ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಮತ್ತೆ ಆಯ್ಕೆಯಾದ ಬೆಲ್ಲದ ಮಾಧ್ಯಮಗಳ ಜೊತೆ ಮಾತನಾಡುತ್ತಾ ನಾಡು ನುಡಿಗಾಗಿ ಶ್ರಮಿಸುತ್ತ, ಕನ್ನಡ ಕಟ್ಟಿದ ಸಂಸ್ಥೆ. ಇಂತಹ ಸಂಸ್ಥೆಗೆ ರಾಜ್ಯ ಸರ್ಕಾರ ಆದ್ಯತೆಯ ಮೇಲೆ ಅನುದಾನ ದೊರಕಿಸಿ ಕನ್ನಡಪರ ಚಟುವಟಿಕೆಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರದಿಂದ ಅನುದಾನ ತರುವ ಪ್ರಯತ್ನ ಸಂಘ ನಿರಂತರವಾಗಿ ಮಾಡಿಕೊಂಡು ಬಂದಿದೆ. ಆದರೆ, ಸರ್ಕಾರ ಪೂರಕವಾಗಿ ಸ್ಪಂದಿಸಬೇಕು. ಕೇಳುವುದಕ್ಕಿಂತ ಮುಂಚೆಯೇ ಕರ್ನಾಟಕದ ಹೆಮ್ಮೆಯ ಸಂಸ್ಥೆಗೆ ತಾನೇ ಅನುದಾನ ದೊರಕಿಸಬೇಕು ಸಂಘಕ್ಕೆ ಪುನರಾಯ್ಕೆಯಾಗುವಲ್ಲಿ ಮಹತ್ವದ ಪಾತ್ರವಹಿಸಿದೆ. ಬೆಂಬಲಿಸಿ ಗೆಲುವಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.