*ಬೊಮ್ಮಾಯಿ ಬಯಸಿದ್ಧೂ ಹಾಲು ಅನ್ನ, ಕಾಂಗ್ರೇಸ್ ಕರುಣಿಸಿದ್ದೂ ಹಾಲೂ ಅನ್ನ* /
*ಚನ್ನಪಟ್ಟಣದಲ್ಲಿ ಯೋಗೇಶ್ವರಗೆ ಸೆಡ್ಡು ಹೊಡೆಯಲಿರುವ ನಿಖಿಲ್*
ಹುಬ್ಬಳ್ಳಿ : ಕೊನೆಗೂ ಶಿಗ್ಗಾಂವಿ ಕ್ಷೇತ್ರದ ಉಪ ಸಮರಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಲ್ಪಸಂಖ್ಯಾತರಿಗೆ ಮಣೆ ಹಾಕಿದ್ದು ಯಾಸಿರ್ ಖಾನ್ ಪಠಾಣ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿದೆ.
ಅಲ್ಪಸಂಖ್ಯಾತರಿಗೋ ಅಥವಾ ಬಹು ಸಂಖ್ಯಾತರಿಗೋ ಎನ್ನುವ ಲೆಕ್ಕಾಚಾರದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಟಿಕೆಟ್ ಲೆಕ್ಕಾಚಾರದಲ್ಲಿ ಕೊನೆಗೂ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿಯಾಗಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಎದುರು ಪರಾಭವಗೊಂಡಿದ್ದ ಪಠಾಣ ಅವರನ್ನೇ ಅಭ್ಯರ್ಥಿಯಾಗಿಸುವಲ್ಲಿ ಹಾವೇರಿ ಜಿಲ್ಲಾ ಕಾಂಗ್ರೆಸ್ ಶಾಸಕರ ಗ್ಯಾಂಗ್ ಯಶಸ್ವಿಯಾಗಿದೆ.
ಮುಸ್ಲಿಂ ಕೋಟಾದಲ್ಲಿ ಅಜ್ಜಂ ಫೀರ ಖಾದ್ರಿ, ಪಂಚಮಸಾಲಿ ಕೋಟಾದಲ್ಲಿ ರಾಜು ಕುನ್ನೂರ, ಸೋಮಣ್ಣ ಬೇವಿನಮರದ, ಅಲ್ಲದೇ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಪುತ್ರಿ ಹೆಸರು ಇತ್ತಾದರೂ ಅಂತಿಮವಾಗಿ ಪಠಾಣ ಮೇಲುಗೈ ಸಾಧಿಸಿದ್ದಾರೆ.
ಮಗ ಭರತನಿಗೆ ಟಿಕೆಟ್ ಕೊಡಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಯಸಿದ್ದೂ ಹಾಲು ಅನ್ನ, ಕಾಂಗ್ರೆಸ್ ನೀಡಿದ್ದು ಹಾಲು ಅನ್ನ ಎಂಬಂತಾಗಿದೆ. ಯಾವುದೇ ಕಾರಣಕ್ಕೂ ಖಾದ್ರಿಯವರಿಗೆ ಟಿಕೆಟ್ ಸಿಗಬಾರದು ಎಂಬ ತಂತ್ರಗಾರಿಕೆ ಮಾಡಿದ್ದು ಫಲ ಕೊಟ್ಟಿದೆ. ಎರಡೂ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳೂ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.
ಇನ್ನೊಂದೆಡೆ ಅಸಮಾಧಾನಗೊಂಡಿರುವ ಬಿಜೆಪಿಯ ಶ್ರೀಕಾಂತ ದುಂಡಿಗೌಡರ ನಿರ್ಧಾರ ಇಷ್ಟರಲ್ಲೇ ಹೊರಬೀಳಲಿದೆ.
ಇನ್ನೊಂದೆಡೆ ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಚನ್ನಪಟ್ಟಣದಲ್ಲಿ ನಿಖಿಲ ಕುಮಾರ ಸ್ವಾಮಿ ಮೂರನೇ ಬಾರಿಗೆ ಯೋಗೇಶ್ವರ ವಿರುದ್ದ ತೊಡೆ ತಟ್ಟಲಿದ್ದಾರೆ. ಅವರು ಸಹ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.