ಹುಬ್ಬಳ್ಳಿ : ಬೈಕ್ ಸವಾರರಿಗೆ ಚಾಕು ತೋರಿಸಿ ದೋಚುವ ಯತ್ನ ಮತ್ತು ಮನೆಗಳ್ಳತನಕ್ಕೆ ಹೊಂಚು ಹಾಕಿದ್ದ ಇಬ್ಬರು ಗುಜರಾತ್ ಮೂಲದವರ ಮೇಲೆ ಬೆಂಡಿಗೇರಿ ಪೊಲೀಸರು ಗುಂಡು ಹಾರಿಸಿದ್ದಾರೆ.
ಬೆಳಗಿನ ಜಾವ 3-45 ಸುಮಾರಿಗೆ ಪೇಪರ್ ಹಾಕುವ ರವಿ ಸಹಿತ ಕೆಲವು ಬೈಕ್ ಸವಾರರಿಗೆ ಇರಿದು ಹಣ ದೋಚಲು ಯತ್ನಿಸಿದ ಬಗ್ಗೆ ಬೆಂಡಿಗೇರಿ ಪೊಲೀಸರಿಗೆ ತಿಳಿದು ಕಾರ್ಯಾಚರಣೆಗೆ ಮುಂದಾಗಿದೆ.ಗಬ್ಬೂರ ಮೆಟ್ರೊ ಮಳಿಗೆ ಬಳಿ
ಪೊಲೀಸರ ಮೇಲೆ ಹಲ್ಲೆ ನಡೆಸಿದಾಗ ಗುಂಡು ಹಾರಿಸಿ ಗುಜರಾತ್ ಮೂಲದ ದಿಲೀಪ್ ಮತ್ತು ನಿಲೇಶ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.
ಘಟನೆಯಲ್ಲಿ ಪಿಎಸ್ಐ ಅಶೋಕ್ ಮತ್ತು ಸಿಬ್ಬಂದಿ ಶರಣು ಇಬ್ಬರಿಗೂ ಗಾಯಗೊಂಡಿದ್ದು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಐವರು ತಂಡ
ಪೇಪರ್ ಬಾಯ್ ರವಿ ಅವರ ಬೈಕ್ ಕುಸಿದು ಪರಾರಿಯಾಗಿದ್ದು, ದೂರು ದಾಖಲಾಗಿದೆ. ಪೊಲೀಸ್
ಆಯುಕ್ತ ಶಶಿಕುಮಾರ್ ಕೆಎಂಸಿ ಗೆ ಭೇಟಿ ನೀಡಿದ್ದಾರೆ.