*ಬೆಂಗೇರಿ ಗೋಪನಕೊಪ್ಪದಲ್ಲಿ ಮಹಾನವಮಿ ದಿನವೇ ಹರಿದು ನೆತ್ತರು*
ಹುಬ್ಬಳ್ಳಿ: ದಸರಾ ಖಂಡೇ ಪೂಜೆಯ ದಿನವೇ ಹಳೇ ದ್ವೇಷ, ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಆತನ ಗೆಳೆಯರೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗೇರಿ ಗೋಪನಕೊಪ್ಪದಲ್ಲಿ ನಡೆದಿದ್ದು ,ಅಲ್ಲದೇ ಅರೋಪಿಗಳಿಬ್ಬರನ್ನು ಪೊಲೀಸರು ಫೈರಿಂಗ್ ಮಾಡಿ ವಶಕ್ಕೆ ಪಡೆದಿದ್ದಾರೆ.
ಗೋಪನಕೊಪ್ಪದ ಗೌಡರ ಓಣಿಯ ಶಿವರಾಜ ಕಮ್ಮಾರ(22) ಎಂಬಾತನೇ ಕೊಲೆಯಾದ ಯುವಕನಾಗಿದ್ದಾನೆ. ಕದಗುರುವಾರ ಕರಿಯಮ್ಮ ದೇವಸ್ಥಾನದ ಭಂಡಾರ ಜಾತ್ರೆ ವೇಳೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಶಿವರಾಜ ಹಾಗೂ ಸಂದೀಪ್ ರಾಯಾಪುರ ನಡುವೆ ಜಗಳ ನಡೆದು ಪರಿಸ್ಥಿತಿ ಕೈ ಮಿಲಾಯಿಸುವ ಹಂತದಲ್ಲಿ ಹಿರಿಯರು ಇಬ್ಬರಿಗೂ ಬುದ್ದಿ ಹೇಳಿ ಕಳುಹಿಸಿದ್ದರು.
ಆದರೆ ನಿನ್ನೆ ಶಿವರಾಜ ಮನೆಯಲ್ಲಿ ಹಬ್ಬದ ನಿಮಿತ್ತ ಕುರಿಯನ್ನು ಕಡಿದು ಭೋಜನ ಮಾಡಲಾಗಿತ್ತು.
ಮಧ್ಯಾಹ್ನದವರೆಗೂ ತನ್ನ ಸ್ನೇಹಿತರ ಜೊತೆ ಸೇರಿ ದೇವರಿಗೆ ನೈವೇದ್ಯ ಅರ್ಪಣೆ ಮಾಡಿ ಶಿವರಾಜ ತನ್ನ ಗೆಳೆಯರಿಗೆ ಊಟವನ್ನು ಮಾಡಿಸಿದ್ದಾನೆ. ರಾತ್ರಿ 10 ಗಂಟೆಗೆ ಊಟವನ್ನು ಮಾಡಿ ಹೊರಗಡೆ ಹೋಗಿ ಬರುವುದಾಗಿ ಹೋದ ಕೆಲ ನಿಮಿಷಗಳಲ್ಲಿ ಭೀಕರವಾಗಿ ಕೊಲೆಗೀಡಾಗಿದ್ದಾನೆ. ನಾಳೆ ನೋಡ್ಕೊತೀನಿ..’ ಅಂತಾ ಶಿವರಾಜಗೆ ಧಮ್ಮಿ ಹಾಕಿದ್ದ ಸಂದೀಪ್ ಹಾಗೂ ತಂಡ ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಿದೆ ಎನ್ನಲಾಗುತ್ತಿದೆ.
ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿ ಕೊಲೆ ಆರೋಪಿಗಳಿಗೆ ತಕ್ಷಣ ಜಾಲ ಬೀಸಲಾಗಿದೆ. ಕೊಲೆ ಮಾಡಿರುವ ಆರೋಪದಡಿ ಸುದೀಪ ರಾಯಾಪುರ ಮತ್ತು ಕಿರಣ ಜಟ್ಟೆಪ್ಪನವರ ಎಂಬುವವರನ್ನು ವಶಕ್ಕೆ ಪಡೆದು ಉಳಿದವರ ಮಾಹಿತಿ ನೀಡುವುದಾಗಿ ಹೇಳಿದ್ದ ಹಿನ್ನೆಲೆಯಲ್ಲಿ ಅರವಿಂದ ನಗರದ ರೈಲ್ವೆ ಕ್ವಾಟ್ರಸ್ ಬಳಿ ಕರೆದೊಯ್ಯಲಾಗಿತ್ತು.ಈ ಹಂತದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ ಆಗಲು ಯತ್ನಿಸಿದ ಇಬ್ಬರು ಆರೋಪಿಗಳ ಕಾಲಿಗೆ ಫೈರಿಂಗ್ ಮಾಡಿ ಪುನಃ ವಶಪಡಿಸಿಕೊಂಡಿದ್ದಾರೆ. ಈ ಘಟನೆಯಲ್ಲಿ ಆರು ಜನ ಪೊಲೀಸರು ಗಾಯಗೊಂಡಿದ್ದು ಎಲ್ಲರನ್ನೂ ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಆಸ್ಪತ್ರೆಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿದ್ದಾರೆ.