*ಬೆಳದಡಿ, ಅರ್ಜುನ್ ಪಾಟೀಲ್, ಆರೀಫ್ ದೊಡ್ಡಮನಿ, ಪೂಜಾರಿ, ಘಾಟಗೆ ನಿಯುಕ್ತಿ*
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಸರ್ಕಾರ ಐವರನ್ನು ನಾಮನಿರ್ದೇಶನ ಮಾಡಿದೆ.
ಹುಬ್ಬಳ್ಳಿಯ ಮೂವರಿಗೆ, ಧಾರವಾಡದ ಇಬ್ಬರಿಗೆ ಮಣೆ ಹಾಕಲಾಗಿದೆ.
ಪೂರ್ವ ಕ್ಷೇತ್ರದ ಶ್ರೀನಿವಾಸ ಬೆಳದಡಿ, ಮಹಮದ್ ಆರೀಫ್ ದೊಡ್ಡಮನಿ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ , ಮಾಜಿ ಮೇಯರ್ ಅನಿಲಕುಮಾರ ಪಾಟೀಲರ ಪುತ್ರ ಅರ್ಜುನ್ ಪಾಟೀಲ್, ಧಾರವಾಡದ ತುಳಜಪ್ಪ ಪೂಜಾರಿ, ಮಾಜಿ ಪಾಲಿಕೆ ಸದಸ್ಯ ಪ್ರಕಾಶ್ ಘಾಟಗೆ ನಿಯುಕ್ತಿ ಗೊಂಡಿದ್ದಾರೆ.
ಕಳೆದ ಅನೇಕ ದಿನಗಳಿಂದ ನೇಮಕದ ಗುಸುಗುಸು ಇದ್ದುದು ಇಂದು ಅಧಿಕೃತವಾಗಿ ಪ್ರಕಟಗೊಂಡಿದೆ.