*ಹಾವೇರಿಯಿಂದ ಬರುವಾಗ ಅವಘಡ : ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ*
ಹುಬ್ಬಳ್ಳಿ: ನಗರದ ಹೊರವಲಯದ ನೂಲ್ವಿ ಕ್ರಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಹುಬ್ಬಳ್ಳಿ ಲಿಂಗರಾಜ ನಗರದ ಒಂದೇ ಕುಟುಂಬದ ನಾಲ್ವರು ವೃದ್ಧೆಯರು ಸಾವ್ನಪ್ಪಿದ್ದಾರೆ.
ಹಾವೇರಿಯಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ, ನೂಲವಿ ಕ್ರಾಸ್ ಬಳಿಯ ಪುಣಾ-ಬೆಂಗಳೂರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಪಕ್ಕದ ಡಿವೈಡರ್’ಗೆ ಡಿಕ್ಕಿ ಹೊಡೆದಿದ್ದು,. ಮೂವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅವರಲ್ಲಿ
ಒಬ್ಬರು ಅಸು ನೀಗಿದ್ದಾರೆ.
ಸುಜಾತಾ ಹಿರೇಮಠ (60) ಗಾಯತ್ರಿ ಹಿರೇಮಠ (65), ಶಕುಂತಲಾ ಹಿರೇಮಠ (75 ಹಾಗೂ ಸಂಪತಕುಮಾರಿ (60) ಮೃತಪಟ್ಟಿರುವವರು.ವಿರೇಶ ಹಿರೇಮಠ (65) ಗಂಭೀರವಾಗಿ ಗಾಯಗೊಂಡಿದ್ದು ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ . ಕೆಎಂಸಿ ಆಸ್ಪತ್ರೆಯ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.