ಹುಬ್ಬಳ್ಳಿ :ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ನಗದ ರಾಣಿ ಚೆನ್ನಮ್ಮ ಮೈದಾನದಲ್ಲಿ (ಈದ್ಗಾ ಮೈದಾನ) ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಆಶ್ರಯದಲ್ಲಿ ಇಂದು ನಾಲ್ಕನೇ ವರ್ಷದ ಕೃಷ್ಣಾವತಾರಿ ವೈಭವದಿಂದ ಗಣೇಶ ಪ್ರತಿಷ್ಠಾಪನೆಗೊಂಡಿದ್ದಾನೆ.
ಕೃಷ್ಣನ ವೇಷಭೂಷಣದಲ್ಲಿ ವಿರಾಜಮಾನನಾದ ಗಣೇಶನ ಮೂರ್ತಿಯನ್ನು ಮೂರುಸಾವಿರ ಮಠದಿಂದ ಮೆರವಣಿಗೆ ಮೂಲಕ ಕರೆ ತಂದು ಪ್ರತಿಷ್ಠಾಪನೆ ಮಾಡಲಾಯಿತು.ಮಂಡಳಿ ಅಧ್ಯಕ್ಷ ಸಂಜೀವ ಬಡಸ್ಕರ್, ಶಾಸಕ ಮಹೇಶ್ ಟೆಂಗಿನಕಾಯಿ, ಸ್ವಾಗತ ಸಮಿತಿ ಅಧ್ಯಕ್ಷ ಡಾ. ಚಿಗುರುಪಾಟಿ ವಿ.ಎಸ್.ವಿ.ಪ್ರಸಾದ್, ಜನಪದ ಕಲಾತಂಡಗಳ ನೇತೃತ್ವದಲ್ಲಿ ಮೆರವಣಿಗೆ ಬಂದಿತು.
ಜಯತೀರ್ಥ ಕಟ್ಟಿ, ಸುಭಾಷ್ ಸಿಂಗ್ ಜಮಾದಾರ, ರಮೇಶ ಕದಂ, ರಘು ಯಲ್ಲಕ್ಕನವರ, ಮನೀಷ್ ನಾಯಕ. ಮಹಾದೇವ ಕರಮರಿ , ಮಹೇಂದ್ರ ಕೌತಾಳ, ಜಯತೀರ್ಥ ಕಟ್ಟಿ, ಸಂಗಮ ಶೆಟ್ಟರ್ , ಅನೂಪ್ ಬಿಜವಾಡ, ಉಮೇಶ್ ದುಶಿ, ರಮಾನಂದ ಶೆಟ್ಟಿ,ಸಹಿತ ಅನೇಕರು ಇದ್ದರು.
ಪಾಲಿಕೆ ವತಿಯಿಂದ ರಾಣಿಚೆನ್ನಮ್ಮ ಮೈದಾನದಲ್ಲಿ ತ್ಯಾಜ್ಯ ಪ್ಲಾಸ್ಟಿಕನಿಂದ ನಿರ್ಮಿತ ಮೂಷಕ ವಾಹನವನ್ನು ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವ ಅಂಗವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಹಾಪೌರ ಜ್ಯೋತಿ ಪಾಟೀಲ, ಪಾಲಿಕೆ ಸಭಾನಾಯಕ ಈರೇಶ ಅಂಚಟಗೇರಿ ಅವರ ನೇತ್ರತ್ವದಲ್ಲಿ ಇಂದು ಅನಾವರಣಗೊಳಿಸಲಾಯಿತು.
ಮೈದಾನದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು,ನಾಡಿದ್ದು ಮಧ್ಯಾಹ್ನ 12ಗಂಟೆಗೆ ಅದ್ಧೂರಿಯಾಗಿ ವಿಸರ್ಜನೆ ಮೆರವಣಿಗೆ ಆರಂಭಗೊಳ್ಳಲಿದೆ.
ಹೃದಯ ಪೂರ್ವಕ ಶುಭಾಶಯಗಳು
ವಿಘ್ನನಿವಾರಕ ಶ್ರೀ ಗಣೇಶನು ಸರ್ವರಿಗೂ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ತರಲಿ. ಕನ್ನಡ ಧ್ವನಿಯ ಓದುಗರು, ಜಾಹೀರಾತುದಾರರು, ಹಾಗೂ ಹಿತೈಷಿಗಳಿಗೆಲ್ಲಾ ಗಣೇಶ ಚತುರ್ಥಿಯ ಹೃತ್ಪೂರ್ವಕ ಶುಭಾಶಯಗಳು.