*ಪುರಾತನ ಕಟ್ಟಿಮಠದಲ್ಲಿ ಸಂಭ್ರಮದ ಶರನ್ನವರಾತ್ರಿ*
ಧಾರವಾಡ : ಕಾನ್ಪುರ ಐಐಟಿಯಲ್ಲಿ ಶಿಕ್ಷಣ ಪೂರೈಸಿದ ಆತ ಮುಂಬೈನಲ್ಲಿ ಪ್ರತಿಷ್ಠಿತ ರಿಲಯನ್ಸ್ ಕಂಪನಿಯಲ್ಲಿ ಡಿಸೈನಿಂಗ್ ಇಂಜನೀಯರ್.ಆದರೆ ತನ್ನ ಕುಟುಂಬವು ಪಾರಂಪರಿಕವಾಗಿ ಆರಾಧಿಸಿಕೊಂಡು ಬರುತ್ತಿರುವ ದಸರಾದ ನವ ದೇವಿಯರ ಆರಾಧನೆಗೆ ಪೇಡೆನಗರಿಗೆ ಬಂದು ದೇವಿ ಆರಾಧನೆಯನ್ನು ನಿಷ್ಕಳಂಕವಾಗಿ ಮಾಡಿಕೊಂಡು ಬರುತ್ತಿದ್ದಾನೆ.
ಹೌದು, ಇಲ್ಲಿನ ಮಂಗಳವಾರ ಪೇಟೆಯ ಕಾರ್ತೀಕ ಕಟ್ಟಿಮಠ ಕಳೆದ 16 ವರ್ಷಗಳಿಂದ ನವರಾತ್ರಿಯಲ್ಲಿ ತನ್ನೂರಿಗೆ ಬಂದು ತನ್ನ ಕಲ್ಪನೆಯಲ್ಲಿ ಮೂಡಿದ ದೇವಿಗೆ ವಿಶೇಷ ಅಲಂಕಾರ ಮಾಡಿ ಧಾರವಾಡದ ಜನತೆ ಕಣ್ತುಂಬಿಕೊಳ್ಳುವಂತೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಅದರಲ್ಲೂ ಉನ್ನತ ಶಿಕ್ಷಣ ಪಡೆದ ಇಂದಿನ ಪೀಳಿಗೆಯವರಿಗೆ ದೇವರು, ಪೂಜೆ-ಪುನಸ್ಕಾರದಲ್ಲಿ ಆಸಕ್ತಿಗಿಂತ ನಿರಾಸಕ್ತಿಯೇ ಜಾಸ್ತಿ ಎನ್ನುವಂತಹ ವಾತಾವರಣದಲ್ಲಿ ಕಾರ್ತೀಕ ನವರಾತ್ರಿ ಉತ್ಸವದಲ್ಲಿ ಪ್ರತಿಷ್ಠಾಪಿಸುವ ದೇವಿ ಮೂರ್ತಿ, ಅಲಂಕಾರಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ಹಲವು ತಿಂಗಳಿಂದ ಸ್ವತಃ ಸಿದ್ಧಪಡಿಸುತ್ತಾನಲ್ಲದೇ ಒಂಭತ್ತು ದಿನಗಳ ಕಾಲ ದೇವಿಯ ಅವತಾರ, ದೀಪದ ವ್ಯವಸ್ಥೆಯನ್ನು ಮಾಡಿ ತಾನೇ ಸಂಗೀತ ಕಾರ್ಯಕ್ರಮ ಸಹ ನಡೆಸಿಕೊಡುತ್ತಾನೆ.
ಈಗಾಗಲೇ ತೀರ್ಥ, ನವರಸ, ವಾರಣಾಸಿ ಎಂಬ ವಿಷಯಗಳನ್ನು ಆಧರಿಸಿ ಅಲಂಕಾರ ಮಾಡುತ್ತಿದ್ದು ಈ ಬಾರಿ 3ರಂದು ಕನ್ಯಾಕುಮಾರಿ, 4ರಂದು ಕನ್ಯಾಕುಮಾರಿ (ಭಗವತಿ) 5ರಂದು ಕಾಶ್ಮೀರ ಶಾರದಾ, 6ರಂದು ಕಾಶ್ಮೀರ ಶಾರದಾ (ಜ್ಞಾನದಾ), 7ರಂದು ಕಾಮಕ್ಯಾ, 8ರಂದು ಕಾಮಕ್ಯಾ (ಕಾಮರೂಪ), 9 ರಂದು ಕಂಚಿ ಕಾಮಾಕ್ಷಿ, 10ರಂದು ಕಂಚಿ ಕಾಮಾಕ್ಷಿ (ವೀಣಾ ಕಾಮಾಕ್ಷಿ), 11 ಹಾಗೂ 12ರಂದು ವಿಂದ್ಯಾವಾಸಿನಿ ಅವತಾರದಲ್ಲಿ ದೇವಿ ಅಲಂಕೃತಗೊಳ್ಳಲಿದ್ದಾಳೆ.
ರಾಜಗುರು ಮನೆತನ : ಕಟ್ಟಿಮಠವು ಕಿತ್ತೂರು ಸಂಸ್ಥಾನದ ರಾಜಗುರು ಮನೆತನ. ಈ ಮಠದ ಮೂಲಪುರುಷ ಸದ್ಗುರು ರಾಚೋಟೆಶ್ವರ ಮಹಾಸ್ವಾಮಿಗಳು ( ಹುಚ್ಚಪ್ಪಜ್ಜನವರು) ದೊರೆ ಮಲ್ಲಸರ್ಜನಿಗೆ ಶಾಪಕೊಟ್ಟು ಧಾರವಾಡ ದಾರಿಯನ್ನು ಹಿಡಿದು ಮಾರ್ಗ ಮಧ್ಯದಲ್ಲಿಯ ನಿರ್ವಿಕಲ್ಪ ಸಮಾಧಿಸ್ಥರಾಗಿ ಇಂದಿಗೂ ಭಕ್ತರ ಪಾಲಿಗೆ ಬೇಡಿದ ವರವನ್ನು ನೀಡುತ್ತಿರುವುದು ಅನುಭವ ವೇದ್ಯ. ದೇವಿಯನ್ನು ಸಾಕ್ಷಾತ್ಕರಿಸಿಕೊಂಡ ಅಜ್ಜನವರು ತಮ್ಮೊಂದಿಗೆ ಕರೆತಂದರೆಂಬ ಪ್ರತೀತಿಯಿದೆ. ಸುಮಾರು 200 ವರ್ಷಗಳ ಪುರಾತನ ನಿವಾಸದಲ್ಲಿ ದಸರಾ ವೈಭವ ಅನೇಕ ವರ್ಷಗಳಿಂದ ಮನೆಯಲ್ಲೇ ಶಾಸ್ತ್ರೋಕ್ತವಾಗಿ ದೇವಿ ಆರಾಧನೆ, ಒಂಬತ್ತು ದಿನಗಳ ಕಾಲ ದೇವಿಗೆ ವಿವಿಧ ಅಲಂಕಾರ, ಕಲಾವಿದರಿಗೆ ಗೌರವ ನಡೆಯುತ್ತಿದೆ ಎಂದು ಕಟ್ಟಿಮಠದ ವ್ಯವಸ್ಥಾಪಕರಾದ ವಿರೇಶ ಕಟ್ಟಿಮಠ, ಪ್ರೋ.ವಿಜಯಲಕ್ಷ್ಮಿ ಕಟ್ಟಿಮಠ, ವೀರಣ್ಣ ಯಳಲ್ಲಿ ಅಲ್ಲದೇ ನವರಾತ್ರಿ ಉತ್ಸವ ಮುನ್ನಡೆಸುವ ಕಾರ್ತೀಕ ಹೇಳುತ್ತಾರೆ.
*ಇಂದಿನ ಪ್ರಮುಖ ಸುದ್ದಿ*
*ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧಿ ಭಾರತದ ಪ್ರಜ್ಞೆ, ಅವರ ದೇಹ ಕೊಂದರೂ ವಿಚಾರ ಕೊಲ್ಲಲು ಅಸಾಧ್ಯ ಗೋಡ್ಸೆ ಭಾರತ ಮಾಡುವ ಬಿಜೆಪಿ ಷಡ್ಯಂತ ಸೋಲಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ*
*ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಲುಕಿಸಲು ಕಮಲ ಪಡೆ ವ್ಯವಸ್ಥಿತ ಕುತಂತ್ರ ಎಂದು ಧಾರವಾಡದಲ್ಲಿ ಉಸ್ತುವಾರಿ ಸಚಿವ ಸಂತೋಷ ಲಾಡ ಹೇಳಿಕೆ*
*ಮುಡಾ ರಾಜಕೀಯ ಕಾರ್ಮೋಡದ ಮಧ್ಯೆಯೆ ನಾಳೆ ವಿಶ್ವವಿಖ್ಯಾತ ಮೈಸೂರು ದಸರಕ್ಕಾ ವಿದ್ಯುಕ್ತ ಚಾಲನೆ*
*ಬೆಂಗಳೂರಿನ ವಾರ್ತಾಸೌಧದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಟಿಎಸ್ಆರ್ ಮತ್ತು ಮೊಹರೆ ಹನುಮಂತರಾವ ಪ್ರಶಸ್ತಿ ಪ್ರದಾನ*