*ಪರಿಷತ್ ಸಭಾಧ್ಯಕ್ಷ ಹೊರಟ್ಟಿಯವರಿಗೆ ಯೋಗೇಶ್ವರ್ RESIGNATION LETTER ಸಲ್ಲಿಕೆ*
ಹುಬ್ಬಳ್ಳಿ : ಭಾರತೀಯ ಜನತಾ ಪಕ್ಷದ ವಿಧಾನ ಪರಿಷತ್ ಸದಸ್ಯ ಹಾಗೂ ಸೈನಿಕ ಚಿತ್ರ ಖ್ಯಾತಿಯ ನಟ ಸಿ.ಪಿ.ಯೋಗೇಶ್ವರ ಅವರು ಇಂದು ಹುಬ್ಬಳ್ಳಿಗೆ ಆಗಮಿಸಿ ತಮ್ಮ ಪರಿಷತ್ ಸ್ಥಾನಕ್ಕೆ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ಮಧ್ಯಾಹ್ನ ನಾಲ್ಕರ ಸುಮಾರಿಗೆ ನೇರವಾಗಿ ದೇಸಾಯಿ ಕ್ರಾಸ್ ಬಳಿಯ ಹೊರಟ್ಟಿಯವರ ನಿವಾಸಕ್ಕೆ ಆಗಮಿಸಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.
ಬಿಜೆಪಿಯಿಂದಲೇ ನಿಲ್ಲಬೇಕು ಎಂಬ ಆಸೆ ಇದೆ. ಈ ಕ್ಷಣಕ್ಕೂ ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುವೆ. ಇನ್ನೂ ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ಇಲ್ಲದಿದ್ದರೆ ಯಾವುದೇ ಪಕ್ಷ ಸೇರುವುದಿಲ್ಲ.ಪಕ್ಷೇತರನಾಗಿ ಸ್ಪರ್ಧೆ ಮಾಡುವೆ ಸ್ವ ಇಚ್ಚೆಯಿಂದ ರಾಜೀನಾಮೆ ನೀಡಿರುವೆ ಎಂದು ಹೇಳಿದರು.
ಕುಮಾರ ಸ್ವಾಮಿಯವರು, ನಮ್ಮ ಪಕ್ಷದ ವರಿಷ್ಠರು ನನಗೆ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕು ಎಂದರು.
ಕಾಂಗ್ರೆಸ್ನಿಂದ ಸ್ಪರ್ಧಿಸುವಿರೆ ಎಂದು ಕೇಳಿದ ಪ್ರಶ್ನೆಗೆ ಮುಂದೇನು ಎಂಬ ಬಗ್ಗೆ ನಾಳೆ ಕ್ಷೇತ್ರದ ಎಲ್ಲ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಭಾಧ್ಯಕ್ಷ ಹೊರಟ್ಟಿ,ಇದು ತಮ್ಮ ಅವಧಿಯಲ್ಲಿ ಸ್ವೀಕರಿಸುತ್ತಿರುವ 13ನೇ ರಾಜೀನಾಮೆಯಾಗಿದೆ ಎಂದು ಅಂಕಿ ಅಂಶ ಬಿಚ್ಚಿಟ್ಟರು.
*ದಿನದ ಮಹತ್ವದ ಸುದ್ದಿ*
1) *ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಮನವಿ ಮೇರೆಗೆ ಸ್ಪಂದಿಸಿದ ಪರಿಣಾಮ ದಿ. 23ಕ್ಕೆ ವೀರ ವನಿತೆ ಕಿತ್ತೂರ ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧ ಸಾರಿದ ಸಂಗ್ರಾಮದ 200ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಐತಿಹಾಸಿಕ ವಿಜಯದ ಜ್ಞಾಪಕಾರ್ಥ ಕೇಂದ್ರ ಸರ್ಕಾರ ರಾಣಿ ಚೆನ್ನಮ್ಮನವರ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಿದೆ.
2) ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬುದು ಇನ್ನೂ ನಿಗೂಢವಾಗಿದ್ದು ಅಜಂ ಫೀರ ಖಾದ್ರಿ, ಯಾಸೀರ ಖಾನ ಪಠಾಣ, ಆರ್.ಶಂಕರ, ಸೋಮಣ್ಣ ಬೇವಿನಮರದ, ರಾಜು ಕುನ್ನೂರ ಪೈಕಿ ನಿಶ್ಚಿತ ಎನ್ನಲಾಗುತ್ತಿದೆ.
3) ಸಂಡೂರಿನಿಂದ ಕಾಂಗ್ರೆಸ್ನಿಂದ ಹಾಲಿ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣಗೆ ಟಿಕೆಟ್ ಪಕ್ಕಾ ಎನ್ನಲಾಗುತ್ತಿದೆ.