*ನಾಳೆ ಹುಬ್ಬಳ್ಳಿ ಇಂದಿರಾ ಗಾಜಿನ ಮನೆಯಲ್ಲಿ ಪ್ರಶಸ್ತಿ ಪ್ರದಾನ*
ಹುಬ್ಬಳ್ಳಿ : ಹುಬ್ಬಳ್ಳಿ – ಧಾರವಾಡ ಮಹಾನಗರಪಾಲಿಕೆ ಕರ್ನಾಟಕ ರಾಜ್ಯೋತ್ಸವದಂಗವಾಗಿ 69 ಸಾಧಕರಿಗೆ ಮತ್ತು ವಿಶೇಷ ಸಾಧನೆ ಮಾಡಿದ 24 ಗಣ್ಯರು ಸೇರಿ 22 ವಿಭಾಗದಲ್ಲಿ ಒಟ್ಟೂ 93 ಜನರಿಗೆ ಧೀಮಂತ ಪ್ರಶಸ್ತಿ ನೀಡಲು ತೀರ್ಮಾನಿಸಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಮಹಾಪೌರರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸಿ ಕೊನೆಗೆ 93 ಜನರಿಗೆ ಧೀಮಂತ ಪ್ರಶಸ್ತಿ ನಾಳೆ ಇಂದಿರಾ ಗಾಜಿನ ಮನೆಯಲ್ಲಿ ನಡೆವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಬೆಳಿಗ್ಗೆಯಿಂದಲೇ ಪಟ್ಟಿ ಹೊರ ಬೀಳುವುದೆಂಬ ಗುಸು ಗುಸು ಹಾಗೇ ಮುಂದುವರಿದು ಸಂಜೆ 6ರ ಸುಮಾರಿಗೆ ಕೊನೆಗೂ ಪಟ್ಟಿ ಬಿಡುಗಡೆಯಾಗಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಪ್ರಕಾಶ ಎನ್ ಶೆಟ್ಟಿ, ಕ್ರೀಡಾ ಕ್ಷೇತ್ರದಲ್ಲಿ ಶಿವಾನಂದ ಗುಂಜಾಳ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ರತ್ನಮಾಲಾ ದೇಸಾಯಿ, ಡಾ. ರಾಜನ್ ದೇಶಪಾಂಡೆ, ಡಾ.ಸಚಿನ್ ಹೊಸಕಟ್ಟಿ, ಡಾ.ಸುನೀಲ ಕರಿ ,ನೃತ್ಯ ಕ್ಷೇತ್ರದಲ್ಲಿ ಸುಜಯ ಶಾನಭಾಗ, ಹೇಮಾ ವಾಘ್ಮೋಡೆ, ಉಪಾದ್ಯೆ ನೃತ್ಯ ವಿಹಾರ, ತಾಂತ್ರಿಕ ಕ್ಷೇತ್ರದಲ್ಲಿ ಡಾ.ಎಂ.ಆರ್.ಪಾಟೀಲ, ದೀಪಾಲಿ ಗೋಟಡಕಿ,ಸಂಗೀತ ಕ್ಷೇತ್ರದಲ್ಲಿ ಉಸ್ತಾದ ಹಪೀಜ ಬಾಲೇಖಾನ, ಡಾ.ಅಶೋಕ ಹುಗ್ಗಣ್ಣವರ, ಹೆಚ್.ಈಶ್ವರಪ್ಪ, ರೇಣುಕಾ ನಾಕೋಡ, ಶಿಕ್ಷಣ ಕ್ಷೇತ್ರದಲ್ಲಿ ಲೂಸಿ ಸಾಲ್ಡಾನಾ, ಡಾ.ರಘು ಅಕಮಂಚಿ, ಕ್ಯೂ.ಎಂ.ನಾಲಬಂದ, ಮಹೇಶ ಹೊರಕೇರಿ, ಮಾಧ್ಯಮ ಕ್ಷೇತ್ರದಲ್ಲಿ ಹಿರಿಯ ಕ್ರೀಡಾ ವರದಿಗಾರ ವಿನಾಯಕ ದೇಶಪಾಂಡೆ, ನರಸಿಂಹ ಪ್ಯಾಟಿ, ಗುರುರಾಜ ಹೂಗಾರ ( ಸುವರ್ಣ ನ್ಯೂಸ್), ಛಾಯಾಗ್ರಾಹಕ ಮಿಲಿಂದ ಪಿಸೆ, ಪ್ರಸನ್ನ ಕರ್ಪೂರ, ಅಬ್ಬಾಸ ಮುಲ್ಲಾ, ಆನಂದ ಅಂಗಡಿ, ಶಿವಶಂಕರ ಕಂಠಿ, ಶಿವಾಜಿ ಲಾತೂರಕರ , ಸೇವಾ ಕ್ಷೇತ್ರದಲ್ಲಿ ಹುಲಿಗೆಮ್ಮಾ ಪೋಸಾ , ವಿಶೇಷ ಸಾಧನೆ ಮಾಡಿದ ಮಿಸ್ ಯುನಿವರ್ಸ ಡಾ.ಶೃತಿ ಹೆಗಡೆ ,ಹರ್ಷ ಡಂಬಳ, ಅರವಿಂದ ಕುಲಕರ್ಣಿ ಮುಂತಾದವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
*ದಿನದ ಮಹತ್ವದ ಸುದ್ದಿಗಳು* :
**ಕಾರ್ ಪಾರ್ಕಿಂಗ್ ವಿಚಾರಕ್ಕೆ ಧಾರವಾಡದಲ್ಲಿ ಮದ್ಯರಾತ್ರಿ ಪೊಲೀಸ್ ಪೇದೆ ಬಸವರಾಜ ಕಮತರ ಎಂಬವರ ಮೇಲೆ ಬ್ಲೇಡ್ನಿಂದ ಹಲ್ಲೆ ಮಾಡಿದ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಸಹೋದರ ಇಕ್ಬಾಲ್ ತಮಟಗಾರ, ಅಮೀರ ತಮಟಗಾರ, ಅಜ್ಮತ್ ಅಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
**ಜಿ.ಪಂ.ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದ ಸಾಕ್ಷಿ ಆಗಿರುವ ಬಸವರಾಜ ಮುತ್ತಗಿ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸ ಆಯುಕ್ತರ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವಾಲಯ, ಸಿಆರ್ಪಿಎಫ್, ಐಬಿಯ ಅಧಿಕಾರಿಗಳು ಮಹತ್ವದ ಸಭೆ ನಡೆಸಿದ್ದಾರೆನ್ನಲಾಗಿದೆ.
**ಮೊಬೈಲ್ ವಾಹನದಲ್ಲಿ ಕಡಿಮೆ ಬೆಲೆಯಲ್ಲಿ ಭಾರತ್ ಬ್ರ್ಯಾಂಡ್ ಉತ್ಪನ್ನಗಳ ಮಾರಾಟ ಮಾಡುವ ವಾಹನಕ್ಕೆ ಇಂದು ಬೆಳಿಗ್ಗೆ ಮೂರುಸಾವಿರಮಠ ಮೈದಾನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು.
**ಮೂರು ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸಂಜೆ ತೆರೆ ಬಿದ್ದಿದೆ.
**ಅತ್ಯಾಚಾರ ಪ್ರಕರಣದಲ್ಲಿ ಬಂಧನದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿ ಸುಪ್ರೀಂ ಕೋರ್ಟನಲ್ಲಿ ಇಂದು ತಿರಸ್ಕೃತಗೊಂಡಿದ್ದು ಹಿನ್ನೆಡೆಯಾದಂತಾಗಿದೆ.
**ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಜಸ್ಟೀಸ್ ಸಂಜೀವ ಖನ್ನಾ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.