ಹುಬ್ಬಳ್ಳಿ : ಬೆಂಗಳೂರಿನಲ್ಲಿರುವ ಕರ್ನಾಟಕದ ಪ್ರತಿಷ್ಠಿತ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (KASSIA) 2025ರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಹುಬ್ಬಳ್ಳಿಯ ನಿಂಗಣ್ಣ ಎಸ್. ಬಿರಾದಾರ (2026 ಸಾಲಿಗೆ) 2093 ಮತವನ್ನು ಪಡೆದು ಆಯ್ಕೆಯಾಗಿದ್ದಾರೆ.
ದಿನಾಂಕ 29ರಂದು ರವಿವಾರ ಬೆಂಗಳೂರಿನಲ್ಲಿ ಜರುಗಿದ ಚುನಾವಣೆಯಲ್ಲಿ 10800 ಅರ್ಹ ಮತದಾರರ ಪೈಕಿ 2712 ಮತದಾರರು ಮತದಾನ ಮಾಡಿದ್ದು ,ಅದರಲ್ಲಿ 2093 ಮತ ಪಡೆದ ಬಿರಾದಾರ ಜಯಭೇರಿ ಬಾರಿಸಿದ್ದಾರೆ. ಇವರ ಎದುರು ಸ್ಪರ್ಧೆ ಮಾಡಿದ್ದ ಕೋಲಾರ ಜಿಲ್ಲೆಯ ಮಾಲೂರು ಮೂಲದ ಶ್ರೀಪ್ರಕಾಶ್ 619 ಮಾತು ಪಡೆದರು. ಹುಬ್ಬಳ್ಳಿ ಉದ್ಯಮಿಯೊಬ್ಬರು ಕಾಸಿಯಾ ಬೆಂಗಳೂರಿಗೆ ಅಧ್ಯಕ್ಷರಾಗಿರುವುದು ಇದೇ ಮೊದಲ ಬಾರಿಗೆ. ಕಾರ್ಯಕಾರಿಣಿ ಸದಸ್ಯರಾಗಿ ಹುಬ್ಬಳ್ಳಿಯ ಉದ್ಯಮಿಗಳಾದ ಮಲ್ಲೇಶ ಜಾಡರ, ಗಿರೀಶ ನಲವಡಿ, ನಾಗರಾಜ ಯಲಿಗಾರ ಅವರು ಆಯ್ಕೆ ಆಗಿದ್ದಾರೆ.
ರಾಜ್ಯದ ಸಣ್ಣ ಕೈಗಾರಿಕೆಗಳ ಬೇಡಿಕೆಗಳನ್ನು ರಾಜ್ಯ ಸರಕಾರದ ನೆರವಿನಿಂದ ಪ್ರಾಮಾಣಿಕವಾಗಿ ಪರಿಹರಿಸಲು ಶ್ರಮಿಸುವುದಾಗಿ ಬಿರಾದಾರ ‘ಕನ್ನಡ ಧ್ವನಿ’ ವೆಬ್ ಪೋರ್ಟಲ್ ಗೆ ಹೇಳಿದರು.
ಗಾಮನಗಟ್ಟಿ ಕೈಗಾರಿಕಾ ವಸಾಹತುವಿನಲ್ಲಿ ಎಲೆಕ್ಟ್ರಿಕ್ ಹಾರ್ಡ್ವೇರ್ ಲೈನ್ ಉಪಕರಣಗಳ ತಯಾರಿಕೆ ಮಾಡುವ ಮೆ. ಬನಶಂಕರಿ ಇಂಜಿನಿಯರ್ಸ್ ಪಾಲುದಾರರಾಗಿದ್ದು , ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾಗಿ, KMTRC ಉಪಾಧ್ಯಕ್ಷರಾಗಿ, ಕಾಸಿಯಾ ಕೌನ್ಸಿಲ್ ಸದಸ್ಯರಾಗಿ ಆರು ಸಲ ಆಯ್ಕೆಯಾಗಿದ್ದಲ್ಲದೇ ವಿವಿಧ ಸಂಘ ಸಂಸ್ಥೆಗಳಲ್ಲೂ ಸಕ್ರೀಯ ರಾಗಿದ್ದಾರೆ.
*ಸನ್ಮಾನ* :ಕಾಸಿಯಾ ಅಧ್ಯಕ್ಷರಾಗಿ ಆಯ್ಕೆಯಾದ ಬಿರಾದಾರ್ ಇವರನ್ನು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ. ಧಾರವಾಡ ಜಿಲ್ಲಾ ಘಟಕದ ಪರವಾಗಿ ಶಾಸಕರಾದ ಅರವಿಂದ ಬೆಲ್ಲದ, ಜಿಲ್ಲಾಧ್ಯಕ್ಷರಾದ ಡಾ ಎಮ್ ಎಮ್ ನುಚ್ಚಿ ಪ್ರಧಾನ ಕಾರ್ಯದರ್ಶಿಯಾದ ಜಿ ಜಿ ದ್ಯಾವನಗೌಡ್ರ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಕಿಚಡಿ ಕೊಟ್ರೇಶ್, ರಾಜಶೇಖರ್ ಕರ್ಕಂಣ್ಣವರ , ನಾಗರಾಜ್ ಗಂಜಿಗಟ್ಟಿ, ಮಂಜುನಾಥ ಮಾಲಿಪಾಟೀಲ, ವೀರೇಶ ಮಾಲಿಪಾಟೀಲ, ಲಿಂಗರಾಜ್ ಪಾಟೀಲ ಚಿಂತಾಮಣಿ ಸಿಂದಗಿ ಮುಂತಾದವರು ಸನ್ಮಾನಿಸಿದರು.