*ನೂರಕ್ಕೂ ಹೆಚ್ಚು ಅಧಿಕ ಸಂಘಟನೆಗಳಿಂದ ಬೆಂಬಲ*/
*ಮಹಾನಗರ ಸ್ತಬ್ಧ ನಿಶ್ಚಿತ*
ಹುಬ್ಬಳ್ಳಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ಖಂಡಿಸಿ ಹಾಗೂ ಅವರ ರಾಜೀನಾಮೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ದಿ. 9ರಂದು ಗುರುವಾರ ಹುಬ್ಬಳ್ಳಿ ಧಾರವಾಡ ಅವಳಿನಗರ ಬಂದ್ಗೆ ಕರೆ ನೀಡಿವೆ.
ಈ ಬಂದ್ ಗೆ ಸುಮಾರು 100 ಕ್ಕೂ ಅಧಿಕ ಸಕಲ ಸಮಾಜ ದ ಪ್ರಮುಖ ಸಂಘ ಸಂಸ್ಥೆಗಳು ದಿ. 4 ಮತ್ತು 5ರಂದು ನಡೆದ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ್ದು ಅವಳಿನಗರ ಸ್ತಬ್ಧಗಳೊಳ್ಳುವುದು ಖಚಿತವಾಗಿದೆ.
ಅವಳಿ ನಗರದ ಬಂದ್ ನಿಮಿತ್ಯ ಶಾಂತಿ ಸದ್ಬಾವನೆಯೊಂದಿಗೆ ಸಕಲ ಬಡಾವಣೆಗಳಿಂದ ಮೆರವಣಿಗೆ ಮೂಲಕ ತಮ್ಮ ವ್ಯಾಪ್ತಿಯ ಬಂದ್ ನೊಂದಿಗೆ ಹುಬ್ಬಳ್ಳಿಯ ಚನ್ನಮ್ಮ ವ್ರತ್ತ ಮತ್ತು ಧಾರವಾಡ ದ ಜುಬಿಲಿ ವ್ರತ್ತದಲ್ಲಿ ಸಮಾವೇಶಗೊಳ್ಳಲು ನಿರ್ಧರಿಸಲಾಗಿದೆ.
ಬಂದ್ ದಿ. 9ರಂದು ಗುರುವಾರ ಮುಂಜಾನೆ ೦6 ರಿಂದ ಸಂಜೆ ೦6 ರವರೆಗೆ ನಡೆಯಲಿದ್ದು, ಸಾರ್ವಜನಿಕರು ಅಂದಿನ ಬಂದ್ ಬೆಂಬಲಿಸಲು ಮನವಿ ಮಾಡಲಾಗಿದೆ. ಸದರಿ ಬಂದ್ ಗೆ ಸಾರ್ವಜನಿಕರ ಹಿತದ್ರಷ್ಡಿಯಿಂದ ಆಸ್ಪತ್ರೆಗಳು- ಔಷಧ ಮಳಿಗೆಗಳು, ವಾಣಿಜ್ಯ ವ್ಯವಹಾರ ಹೋಟೆಲ್ ಸಿನಿಮಾ ಆಟೋ ,ಶಾಲಾ ಕಾಲೇಜು ,ಸರ್ಕಾರಿ ಕಛೇರಿ/ವಾಹನ ಸಹಿತ ಸಕಲ ಚಟುವಟಿಕೆ ಬಂದ್ ಮಾಡುವ ಮೂಲಕ ಬೆಂಬಲಿಸಲು
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ವಾಭಿಮಾನಿ ಅಭಿಮಾಣಿ ಅನುಯಾಯಿ ಬಳಗದ ಗುರುನಾಥ ಉಳ್ಳಿಕಾಶಿ,ಎಮ್ ಅರವಿಂದ್, ಶ್ಯಾಮ ಜಾಧವ
ಮಾರುತಿ ದೊಡ್ಡಮನಿ, ದೊರೆರಾಜ ಮನಿಕುಂಟ್ಲ,ಸುರೇಶ ಕನ್ನಮಕ್ಕಲ್ಲ,ನಾಗೇಶ ಕತ್ರಿಮಲ್ಲ,
ಪ್ರಭು ಪ್ರಭಾಕರ,ಶ್ರೀನಿವಾಸ ಬೆಳದಡಿ, ದೇವಣ್ಣ ಇಟಗಿ ಮುಂತಾದವರು ಮನವಿ ಮಾಡಿದ್ದಾರೆ.
ಈಗಾಗಲೇ ಶಾ ಹೇಳಿಕೆ ಖಂಡಿಸಿ ಕಲಬುರ್ಗಿ, ವಿಜಯಪುರ,ಗದಗ, ಕೊಪ್ಪಳ ಮುಂತಾದೆಡೆ ಬಂದ್ ಕರೆ ನೀಡಿದ್ದು, ಸಂಪೂರ್ಣವಾಗಿ ಯಶಸ್ವಿಯಾಗಿದೆ.