*ವಿಪಕ್ಷ ವಿರೋಧದ ಮಧ್ಯೆ ಸ್ಥಾಯಿ ಸಮಿತಿ ಅಧ್ಯಕ್ಷ ಮನಗುಂಡಿ ಮಂಡನೆ*
ಹುಬ್ಬಳ್ಳಿ : ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆ ಹಿರಿಮೆಯ ಹುಬ್ಬಳ್ಳಿ ಧಾರವಾಡದ 2025-26ನೇ ಸಾಲಿನ ಆಯವ್ಯಯವನ್ನು ಇಂದು(ದಿ.20) ತೆರಿಗೆ ನಿರ್ವಹಣೆ, ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಮನಗುಂಡಿ ಮಂಡಿಸಿದರು.
ಪಾಲಿಕೆ ಸಭಾಭವನದಲ್ಲಿ ಮೇಯರ್ ರಾಮಣ್ಣ ಬಡಿಗೇರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗುರುವಾರ 20.92 ಕೋಟಿ ರೂ. ಉಳಿತಾಯ ಮುಂಗಡಪತ್ರ ಮಂಡನೆ ಮಾಡಿದರು .
2025-26ನೇ ಸಾಲಿನ ಒಟ್ಟು ಬಜೆಟ್ ಗಾತ್ರ 1512.67 ಕೋಟಿ ರೂ. ಆಗಿದ್ದು, ಕಳೆದ ಸಾಲಿಗೆ 1491.75 ಕೋಟಿ ರೂ. ಆಯವ್ಯಯ ಮಂಡಿಸಲಾಗಿತ್ತು. ಈ ಬಾರಿ ಕಳೆದ ಬಾರಿಗಿಂತ 21 ಕೋಟಿ ರೂ. ಬಜೆಟ್ ಗಾತ್ರ ಹೆಚ್ಚಾಗಿದೆ ಎಂದು .ಹೇಳಿದರು.
ಪಾಲಿಕೆ ಬಜೆಟ್ ಮಂಡನೆ ಆರಂಭಕ್ಕೆ ಕೋರಂ ಇಲ್ಲದ್ದರಿಂದ ಮಂಡನಾ ಪ್ರಕ್ರಿಯೆಯನ್ನು 1 ಗಂಟೆ ಮುಂದೂಡಲಾಗಿ, ತದನಂತರ ವಿಪಕ್ಷದ ಸದಸ್ಯರ ತೀವ್ರ ವಿರೋಧದ ಮಧ್ಯೆಯೇ ಮಂಡಿಸಲಾಯಿತು.
ಆಯುಕ್ತ ರುದ್ರೇಶ್ ಗಾಳಿ, ಹಿರಿಯ ಸದಸ್ಯರಾದ ವೀರಣ್ಣ ಸವಡಿ, ಶಿವು ಹಿರೇಮಠ, ತಿಪ್ಪಣ್ಣ ಮಜ್ಜಗಿ ಇನ್ನತರರು ಇದ್ದರು.