ಒಂಬತ್ತು ಮಹಡಿಗಳ ಕಟ್ಟಡದಲ್ಲಿ ಐದು ನೂರು ವೃದ್ಧರಿಗೆ ವಸತಿ ಸೌಲಭ್ಯ
ಹುಬ್ಬಳ್ಳಿ: ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಅತ್ಯಾಧುನಿಕ ವೃದ್ಧಾಶ್ರಮ ನಿರ್ಮಾಣಕ್ಕೆ ಹುಬ್ಬಳ್ಳಿಯ ಹಳೇ ಕೋರ್ಟ್ ಸರ್ಕಲ್ ಬಳಿ ಇರುವ ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ ಮುಂದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಡಳಿ ಅಧ್ಯಕ್ಷ ಮಹಾದೇವ ಮಾಶ್ಯಾಳ ಕಲಘಟಗಿಯ ಕುರುವಿನಕೊಪ್ಪ ಗ್ರಾಮದಲ್ಲಿ ಅತ್ಯಾಧುನಿಕ ಮಾದರಿ ವೃದ್ಧಾಶ್ರಮ ನಿರ್ಮಾಣಕ್ಕೆ ಆಡಳಿತ ಮಂಡಳಿ ನಿರ್ಧರಿಸಿದ್ದು, ಇದಕ್ಕಾಗಿ 16 ಜನರನ್ನು ಒಳಗೊಂಡ ವೃದ್ಧಾಶ್ರಮ ಅಭಿವೃದ್ಧಿ ಸಮಿತಿಯನ್ನು ರಚಿಸಲಾಗಿದೆ ಎಂದರು. ಸಮಿತಿಯಲ್ಲಿ ತಾವೂ ಸೇರಿದಂತೆ ಮೋಹನ ಗಿರಡ್ಡಿ, ಬ್ರಜ್ ಮೋಹನ ಭುತಡಾ, ನೀಪಾ ಬಿಮಲ್ ಮೆಹ್ತಾ, ಬಿ. ಮಹೇಶ, ಮಹೇಂದ್ರ ವಿಕಂಷಿಸ್, ಸಂದೀಪ ಬಿದಾಸಾರಿಯಾ, ಜಯರಾಮ ಶೆಟ್ಟಿ, ಸುರೇಶ ಅಗರವಾಲ್, ಪ್ರಕಾಶ ಬಾಫನಾ, ಗಿರೀಶ ಮಾನೆ, ಕೇವಲ್ ಲೂಂಕರ, ವೀರಣ್ಣ ಸಜ್ಜನರ, ಸಂಜಯ ಶೆಟ್ಟಿ, ರಾಹುಲ್ ಕೋಟಿ ಮತ್ತು ಅರವಿಂದ ಪಾಟೀಲ ಇದ್ದಾರೆಂದರು.
ಸುಮಾರು 500 ಜನರ ವಸತಿಯ ವೃದ್ಧಾಶ್ರಮದಲ್ಲಿ ಹಿರಿಯ ಜೀವಿಗಳು ಆನಂದದಾಯಕ ಜೀವನ ಕಳೆಯಲಿದ್ದಾರೆ. ಮನೆಯಿಂದ ಹೊರಗೆ ಹಾಕಿದವರನ್ನು ಇಲ್ಲಿ ಸೇರಿಸಿಕೊಳ್ಳಲಾಗುವುದು. ಜತೆಗೆ ಏಕಾಂಗಿ ಜೀವನ ನಡೆಸುತ್ತಿರುವ ಹಿರಿಯರು ಇಲ್ಲಿಗೆ ಬರಬಹುದಾಗಿದೆ. ತಮ್ಮ ಸಮವಯಸ್ಕ ವ್ಯಕ್ತಿಗಳೊಂದಿಗೆ ಇಲ್ಲಿ ಸಂತಸದ ಕ್ಷಣಗಳನ್ನು ಕಳೆಯಬಹುದು. ಇದರಿಂದ ಅವರ ಮನಸ್ಸು ಸಂತಸಗೊಳ್ಳುವುದು ಜತೆಗೆ ಆರೋಗ್ಯ ಸುಧಾರಿಸಲು ಸಹಕಾರಿಯಾಗಲಿದೆ. ವೃದ್ಧಾಶ್ರಮ ನಿರ್ಮಾಣದಿಂದಾಗಿ ಸುಮಾರು 500 ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದರು.
ಎಂಜಿನಿಯರ್ ಬಿ. ಮಹೇಶ ಮಾತನಾಡಿ, ಒಟ್ಟು 9 ಮಹಡಿಗಳನ್ನು ಹೊಂದಿರಲಿದ್ದು, ಅತ್ಯಾಧುನಿಕ ಮಾದರಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ವೈದ್ಯರ ಜತೆ ಐಸಿಯು, ಆಂಬ್ಯುಲೆನ್ಸ್ ಸೇವೆಯನ್ನು ಒಳಗೊಂಡಿರುತ್ತದೆ. ಎನ್ ಎ ಮತ್ತು ಡಿ ಬ್ಲಾಕ್ ಎಂಬ ಎರಡ ಕಟ್ಟಡಗಳು ತಲೆ ಎತ್ತಲಿದ್ದು, ಎರಡು ಕಟ್ಟಡಗಳು ಜಿ+9 ಮಹಡಿಗಳನ್ನು ಹೊಂದಿವೆ. ಈಗಾಗಲೇ ವೃದ್ಧಾಶ್ರಮ ನಿರ್ಮಾಣಕ್ಕೆ ಬೇಕಾದ ಜಾಗದ ಎನ್ಮಾಡಿಸಲಾಗಿದೆ. ಜತೆಗೆ 24×7 ವಿದ್ಯುತ್ ಸೌಲಭ್ಯ ಸೇರಿದಂತೆ ಕಟ್ಟಡ ನಿರ್ಮಾಣದ ಪೂರ್ವದಲ್ಲಿನ ಕೆಲಸಗಳು ನಡೆದಿವೆ. ಒಟ್ಟಾರೆ 20 ಕೋಟಿ ರೂ.ಗಳ ವೆಚ್ಚದಲ್ಲಿ ಈ ವೃದ್ಧಾಶ್ರಮ ನಿರ್ಮಾಣವಾಗುವುದೆಂದರು.
ಸಮಿತಿಯ ಮಹೇಂದ್ರ ವಿಕಂಷಿ, ಗಿರೀಶ ಮಾನೆ , ಸಂದೀಪ ಬಿದಾಸಾರಿಯಾ ,ಬ್ರಜ್ ಮೋಹನ ಭುತಡಾ ಮುಂತಾದವರು ಇದು ರಾಜ್ಯದಲ್ಲಿಯೇ ಮಾದರಿ ವೃದ್ಧಾಶ್ರಮವಾಗಲಿದ್ದು,
ನಿರ್ಮಾಣಕ್ಕೆ ದಾನಿಗಳಿಂದ ಹಣವನ್ನು ಸಂಗ್ರಹಿಸಲಾಗುತ್ತಿದೆ. ಈ ದೇಣಿಗೆಗೆ ತೆರಿಗೆ ವಿನಾಯಿತಿ ಇದೆ. shrisaitemplehubli.com ವೆಬ್ಸೈಟ್ ಮೂಲಕವೂ ದೇಣಿಗೆ ಬಗ್ಗೆನೀಡಬಹುದು ಎಂದು ತಿಳಿಸಿದರು.ಗೋಷ್ಠಿಯಲ್ಲಿ ಅಭಿವೃದ್ಧಿ ಸಮಿತಿಯ ಸದಸ್ಯರು ಸೇರಿದಂತೆ ಇತರರಿದ್ದರು.