ಹುಬ್ಬಳ್ಳಿ : ತೀವ್ರ ಪೈಪೋಟಿಯಿಂದ ಕೂಡಿದ ಹುಬ್ಬಳ್ಳಿ ಅರ್ಬನ್ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಪ್ರಸಕ್ತ ಆಡಳಿತದಲ್ಲಿ ಇದ್ದ ಗುಂಪು ಹಾಗೂ ಬ್ಯಾಂಕ್ ಗ್ರಾಹಕರ ಒಕ್ಕೂಟ ಮಧ್ಯೆ ಜಿದ್ದಾ ಜಿದ್ದಿನ ಪೈಪೋಟಿ ನಡೆದು ಕೂತೂಹಲಕಾರಿ ಮಿಶ್ರ ಫಲಿತಾಂಶ ಬಂದಿದೆ.
ಇಂದು ಮತದಾನ ನಡೆದು ಸಂಜೆ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ರಾತ್ರಿ ವೇಳೆಗೆ ಫಲಿತಾಂಶ ಪ್ರಕಟವಾಗಿದೆ. ಕೆಲವು ಘಟಾನುಘಟಿಗಳು ಪರಾಭವಗೊಂಡಿದ್ದಾರೆ.
ಅಜಿತ್ ಜೋಶಿ 554, ವಿಕ್ರಂ ಶಿರೂರು 450, ಆನಂದ ಮನಗೂಳಿ423, ಮಲ್ಲಿಕಾರ್ಜುನ ಸಾವಕಾರ369,ಸದಾಶಿವ ಕಾರಡಗಿ350 , ಗಿರೀಶ್ ಉಪಾಧ್ಯಾಯ337, ಚಂದ್ರಶೇಖರ ಕಮಡೊಳ್ಳಿ319 ಮತ ಪಡೆದು ಸಾಮಾನ್ಯ ವಿಭಾಗದಲ್ಲಿ ಆಯ್ಕೆ ಆಗಿದ್ದಾರೆ.
ಬಸವರಾಜ ತೇರದಾಳ(sc)348, ರವೀಂದ್ರ ಬೆಂತೂರ(st)479, ಮಹಿಳಾ ಕೋಟಾದಲ್ಲಿ ಪ್ರೀಯಾ ಸಂಬಾಜಿ ಕಲಾಲ್554, ಸ್ಮೃತಿ ಕೊರಲಹಳ್ಳಿ465 ಮತ ಗಳಿಸಿ ವಿಜಯಿಯಾಗಿ ಹೊರ ಹೊಮ್ಮಿದ್ದಾರೆ.
ವೆಂಕಟೇಶ್ ಉಪ್ಪಾರ, ಮಹೇಶ್ ಬುರಲಿ ಅವಿರೋಧವಾಗಿ ಆಯ್ಕೆಯಾಗಿದ್ದರು.