*ಅದ್ಧೂರಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಕೇಂದ್ರ ಸಚಿವ, ಶಾಸಕರು*
ಹುಬ್ಬಳ್ಳಿ : ಚೆನ್ನಮ್ಮ ವರ್ತುಳದ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿರುವ ಶ್ರೀ ಗಣೇಶೋತ್ಸವ ಹಿನ್ನೆಲೆಯಲ್ಲಿ ಇಂದು ಮೂರುಸಾವಿರ ಮಠದಿಂದ ಗಣಪತಿ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಲಾಗಿದೆ.
ಚೆನ್ನಮ್ಮ ಮೈದಾನದಲ್ಲಿ ಪ್ರತಿಷ್ಠಾಪಿಸಲ್ಪಡುವ ಗಣೇಶನಿಗೆ ವಿಶೇಷ ಪೂಜೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾವಿರಾರು ಭಕ್ತರು ದರ್ಶನ ಪಡೆದಿದ್ದು, ನಿರಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಮೆರವಣಿಗೆಯಲ್ಲಿ ಭಕ್ತಿ ಗೀತೆಗಳ ಹಾಡಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕರಾದ ಅರವಿಂದ್ ಬೆಲ್ಲದ, ಮಹೇಶ್ ಟೆಂಗಿನಕಾಯಿ, ಮುಂತಾದವರು ಹೆಜ್ಜೆ ಹಾಕಿದರು.ಮೈದಾನದ ಮಹಾಮಂಡಳದ ಅಧ್ಯಕ್ಷ ಸಂಜಯ ಬಡಸ್ಕರ, ಸ್ವಾಗತ ಸಮಿತಿ ಅಧ್ಯಕ್ಷ ಡಾ ಚಿಗರುಪಾಟಿ ವಿ.ಎಸ್.ವಿ ಪ್ರಸಾದ್, ಲಿಂಗರಾಜ ಪಾಟೀಲ, ಗೋವರ್ಧನ ರಾವ್, ಕಿರಣ್ ಗುಡ್ಡದಕೇರಿ , ಸಂದೀಪ್ ಬೂದಿಹಾಳ, ಸುಭಾಷಸಿಂಗ್ ಜಮಾದಾರ, ರಮೇಶ ಕದಂ, ರಘು ಯಲ್ಲಕ್ಕನವರ, ಸಂತೋಷ್ ಚವ್ಹಾಣ,ಮಹೇಂದ್ರ ಕೌತಾಳ, ಪ್ರವೀಣ ಪವಾರ, ಸಂಗಮ ಶೆಟ್ಟರ ಹಾಗೂ ಇತರರು ಉಪಸ್ಥಿತರಿದ್ದರು .
ನಾಡಿದ್ದು ಈದ್ಗಾ ಮೈದಾನದಲ್ಲಿ ಕೂಡ್ರಿಸಿದ ಗಣೇಶ ವಿಸರ್ಜನೆ ಮಾಡಲಾಗುತ್ತದೆ.
ಮೂರನೇ ವರ್ಷದಲ್ಲಿ ಈ ಬಾರಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಯುತ್ತಿದ್ದು, ಸ್ವತಃ ಪೊಲೀಸ್ ಆಯುಕ್ತ ಶಶಿಕುಮಾರ್ ಉಸ್ತುವಾರಿಯಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಡಿಸಿಪಿ ಗಳಾದ ಮಹಾಲಿಂಗ ನಂದಗಾವಿ, ಸಿ.ಆರ್.ರವೀಶ, ಎಸಿಪಿ ಶಿವಪ್ರಕಾಶ್ ನಾಯಕ ಸೇರಿದಂತೆ ಹಲವು ಅಧಿಕಾರಿಗಳು ಇದ್ದಾರೆ.