*ಅಭಿವೃದ್ಧಿಪಡಿಸಿದ ಇಜಿ ಪಗಾರ್ -ಪೆರೋಲ್ ಸಾಫ್ಟ್ ವೇರ್ ಗೆ ಪ್ರಶಸ್ತಿ*
ಹುಬ್ಬಳ್ಳಿ: ಅಕ್ಕಿ , ಬೇಳೆ ಕಾಳು ಸಹಿತ ಆಹಾರ ಧಾನ್ಯಗಳ ವ್ಯಾಪಾರ ಕ್ಷೇತ್ರದಲ್ಲಿ ಕರ್ನಾಟಕ ಸಹಿತ ದಕ್ಷಿಣ ರಾಜ್ಯಗಳಲ್ಲಿ ಭರವಸೆಗೆ ಮತ್ತೊಂದು ಹೆಸರಾದ ಎಂಡಬ್ಲೂಬಿ ಗ್ರುಪ್ ತಂತ್ರಜ್ಞಾನ ಕ್ಷೇತ್ರದಲ್ಲೂ ಅತ್ಯುತ್ತಮ ಸಾಧನೆ ಮಾಡಿದ್ದು, ಎಂಡಬ್ಲೂಬಿ ಟೆಕ್ನಾಲಜೀಸ್ ಗೆ ಅಂತರಾಷ್ಟ್ರೀಯ ಮಟ್ಟದ ಐಜಿಎ-ಇಂಟರ್ ನ್ಯಾಷನಲ್ ಗ್ಲೋರಿ ಅವಾರ್ಡ್-2025 ಪ್ರಶಸ್ತಿಯಾರನ್ನು ಮುಡಿಗೇರಿಸಿಕೊಂಡಿದೆ.
ಸಂಸ್ಥೆಯ ಮುಖ್ಯಸ್ಥ ರಮೇಶ ಬಾಫಣಾ ಇಂದು ಮಾಧ್ಯಮ ಗೋಷ್ಟಿಯಲ್ಲಿ ವಿವರ ನೀಡಿ, ಜೂನ್ 30 ರಂದು ಮುಂಬೈನ ಖಾಸಗಿ ಹೊಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಎಮ್ ಡಬ್ಲೂ ಬಿ ಟೆಕ್ನಾಲಜೀಸ್ ಘಟಕದಿಂದ ಅಭಿವೃದ್ಧಿ ಪಡಿಸಲಾದ ಇಜಿ ಪಗಾರ್ -ಪೆರೋಲ್ ಸಾಫ್ಟವೇರ್ ಅನ್ನು ಅತ್ಯುತ್ತಮ ಪೆರೋಲ್ ಸಾಫ್ಟ್ವೇರ್ ಎಂದು ಗುರುತಿಸಿ ಪ್ರತಿಷ್ಟಿತ ಇಂಟರ್ನ್ಯಾಷನಲ್ ಗ್ಲೋರಿ ಅವಾರ್ಡ್ – 2025 ನ್ನು ನೀಡಲಾಯಿತೆಂದರು.
ಪ್ರಶಸ್ತಿಯನ್ನು ಎಮ್ ಡಬ್ಲೂ ಬಿ ಗ್ರೂಪ್ ನಿರ್ದೇಶಕ ಗೌತಮ್ ಬಾಫ್ನಾ ಅವರು ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರಿಂದ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ಇದು ಉತ್ತರ ಕರ್ನಾಟಕ ಮತ್ತು ಇಡೀ ಎಮ್ ಡಬ್ಲೂ ಬಿ ಸಮೂಹ್ಕೆ ಹಿರಿಮೆ ಆಗಿದೆ ಎಂದರು.
ಇಜಿ ಪಗಾರ್ -ಪೆರೋಲ್ ಸಾಪ್ಟ್ ವೇರ್ ದೇಶದಾದ್ಯಂತ ಪೆರೋಲ್ ಮತ್ತು ಮಾನವ ಸಂಪನ್ಮೂಲದ ಎಲ್ಲ ಕಾರ್ಯಗಳನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಸಹಕಾರಿ ಎಂದು ವಿವರಿಸಿದರು.ಈಗಾಗಲೇ MWB ಸಮೂಹಕ್ಕೆ ನೂರಾರು ಪ್ರತಿಷ್ಠಿತ ಪ್ರಶಸ್ತಿಗಳು ಅರಸಿ ಬಂದಿವೆ.
ಗೋಷ್ಠಿಯಲ್ಲಿ MWB ಟೆಕ್ನಾಲಜಿಸ್ ನ ಗೌತಮ್ ಬಾಪಣಾ,ದಿನೇಶ ಜೈನ್, ಮುಖೇಶ್ ಬಾಪಣಾ ಇದ್ದರು.