*ಪಶ್ಚಿಮ ಕ್ಷೇತ್ರದ ಪಾಲಾದ ಪ್ರತಿಷ್ಠಿತ ಹುದ್ದೆ*
ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಸ್ಥಾನ ಅಂತಿಮವಾಗಿ ಪಶ್ಚಿಮ ಕ್ಷೇತ್ರದ ಪಾಲಾಗುವದೆಂಬ ‘ಕನ್ನಡ ಧ್ವನಿ’ ಭವಿಷ್ಯ ನಿಜವಾಗಿದ್ದು, 33ನೇ ವಾರ್ಡಿನ ಸದಸ್ಯ, ಭರವಸೆಯ ಯುವ ಮುಖಂಡ ಇಮಾಮಹುಸೇನ (ಇಮ್ರಾನ) ಎಲಿಗಾರ ನೇಮಕಗೊಂಡಿದ್ದಾರೆ.
ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ನೇಮಕ ಮಾಡಲಾಗಿದೆ ಎಂದು ಮಹಾನಗರ ಅಧ್ಯಕ್ಷ ಅಲ್ತಾಫ್ ಹುಸೇನ್ ಹಳ್ಳೂರ ಇಂದು ನೇಮಕ ಪತ್ರ ನೀಡಿದರು.
ತಮಗೆ ನೀಡಿರುವ ಈ ಜವಾಬ್ದಾರಿಯನ್ನು ವಹಿಸಿಕೊಂಡು ಹುಬ್ಬಳ್ಳಿ-ಧಾರವಾಡ ಮಹಾನಗರದ ಜನತೆಯ ಸಹಕಾರದೊಂದಿಗೆ ಮಹಾನಗರದ ಬಡಜನರ ಧ್ವನಿಯಾಗಿ ಅವಳಿನಗರದ ಜನರ ಜಲ್ವಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಗಟ್ಟಿ ಧ್ವನಿಯಾಗುವುದಾಗಿ, ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಸಮರ್ಥವಾಗಿ ಕೆಲಸ ಮಾಡುವುದಾಗಿ ಯಲಿಗಾರ ಹೇಳಿದ್ದಾರೆ.
ವಿಪಕ್ಷ ನಾಯಕರ ಪಟ್ಟ ಈಗಾಗಲೇ ಪೂರ್ವ, ಪಶ್ಚಿಮ, ಧಾರವಾಡ ಕ್ಷೇತ್ರದವರಿಗೆ ದಕ್ಕಿರುವ ಹಿನ್ನೆಲೆಯಲ್ಲಿ ಪಶ್ಚಿಮ ಕ್ಷೇತ್ರದ ಪಾಲಾಗುವದು ಅಲ್ಲದೆ ಅಲ್ಪಸಂಖ್ಯಾತರ ಪಾಲಾಗುವದೆಂದು ಕನ್ನಡ ಧ್ವನಿ ಪ್ರಕಟಿಸಿತ್ತು. ಇಪ್ಪತ್ತೆರಡನೇ ವಾರ್ಡ್ ಕಾರ್ಪೊರೇಟರ್ ಬಿಲ್ಕಿಶ್ ಬಾನು ಮುಲ್ಲಾ ಅವರು ಹೆಸರೂ ಮುಂಚೂಣಿಗೆ ಬಂದಿತ್ತು. ಇಮ್ರಾನ್ ಮಹಾನಗರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.