*ಗಂಗಾವತಿ ತಹಶೀಲ್ದಾರ್ ಅಮಾನತಿಗೆ ಆಗ್ರಹ*
ಧಾರವಾಡ: ರಾಜ್ಯದ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಗೆ ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ.
ಹನುಮ ಜನಿಸಿದ ನಾಡಲ್ಲಿ ತ್ರಿಶೂಲ, ತಿಲಕದ ಆಕಾರವಿರುವ ವಿದ್ಯುತ್ ದೀಪಗಳು ಧಾರ್ಮಿಕ ಸೌಹಾರ್ದತೆಗೆ ಧಕ್ಕೆಯೆಂದು ತೆರವುಗೊಳಿಸಲು ಸರಕಾರವು ತಹಶೀಲ್ದಾರರ ಮೂಲಕ ಸೂಚಿಸಿರುವುದು ಹಿಂದೂ ವಿರೋಧಿ ಕ್ರಮವಾಗಿದೆ ಎಂದಿದ್ದಾರೆ.
ಹಿಂದೂ ವಿರೋಧಿ ಸರ್ಕಾರ ಎಂಬುದನ್ನು ಸಾಬೀತುಪಡಿಸಲು ಪದೇ ಪದೇ ಹಿಂದೂ ವಿರೋಧಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ.
ಹನುಮ ಜನಿಸಿದ ನಾಡಲ್ಲಿ ತ್ರಿಶೂಲ, ತಿಲಕದ ಆಕಾರವಿರುವ ವಿದ್ಯುತ್ ದೀಪಗಳು ಧಾರ್ಮಿಕ ಸೌಹಾರ್ದತೆಗೆ ಧಕ್ಕೆಯೆಂದು ತೆರವುಗೊಳಿಸಲು ಸರಕಾರ ಮುಂದಾಗಿದೆ.ಮೈಸೂರು ದಸರಾ ದೀಪಾಲಂಕಾರದಲ್ಲಿ ಮಸೀದಿ ಮಾದರಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿಲ್ಲವೇ ?.
ತಮ್ಮ ಬಾಂಧವರು ಮೈಕ್ ಹಿಡಿದು ಇಡೀ ಊರಿಗೇ ಕೇಳುವಂತೆ ಕೂಗಿ ತೊಂದರೆ ಕೊಡುವುದು ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವುದಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಸರಕಾರದ ಈ ನಡೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬಂತಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತುಷ್ಟೀಕರಣದ ರಾಜಕೀಯಕ್ಕೆ ನಿದರ್ಶನವಾಗಿದೆ.
ಸರಕಾರ ಕೂಡಲೇ ಈ ಆದೇಶ ಹೊರಡಿಸಿದ ಗಂಗಾವತಿಯ ತಹಶೀಲ್ದಾರರನ್ನು ಅಮಾನತುಗೊಳಿಸಬೇಕು.
ಒಂದು ವೇಳೆ ಅವರ ಆದೇಶದಂತೆ ವಿದ್ಯುತ್ ದೀಪಗಳನ್ನು ತೆರವುಗೊಳಿಸಿದ್ದೇ ಆದಲ್ಲಿ ಹಿಂದೂಗಳು ಒಗ್ಗಟ್ಟಾಗಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯ ವಾಗಲಿದೆ ಎಂದು ಬೆಲ್ಲದ ಎಚ್ಚರಿಸಿದ್ದಾರೆ.