*ಖಾತಾ ಬದಲಾವಣೆಗೆ 45 ಸಾವಿರ ಪಡೆವಾಗಲೇ ವಶಕ್ಕೆ*
ಹುಬ್ಬಳ್ಳಿ : ಖಾತಾ ಬದಲಾವಣೆಗೆ ಲಂಚದ ಬೇಡಿಕೆ ಇಟ್ಟ ಕಲಘಟಗಿ ತಾಲೂಕಿನ ತಹಶೀಲ್ದಾರ ಕಚೇರಿಯ ಶಿರಸ್ತೇದಾರ ಒಬ್ಬರು ಇಂದು ಮಧ್ಯಾಹ್ನ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶಿರಸ್ತೆದಾರ ಸುರೇಶ ಅಡವಿ ಎಂಬುವವರೆ ಖಾತಾ ಬದಲಾವಣೆಗೆ 45ಸಾವಿರ ಪಡೆಯುತ್ತಿರುವಾಗಲೇ ಇಂದು ಲೋಕಾಯುಕ್ತ ಡಿವೈಎಸ್ ಪಿ ಶಂಕರಗೌಡ ಪಾಟೀಲ ಮತ್ತು ಸಿಬ್ಬಂದಿಗಳ ಬಲೆಗೆ ಬಿದ್ದಿದ್ದು ಅವರಬ್ಬಯ ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಕೂಡಲಗಿಯ ರೈತ ಮಲ್ಲಿಕಾರ್ಜುನ ಕುರುಬರ ತಮ್ಮ ಖಾತಾ ಬದಲಾವಣೆಗೆ ಲಂಚದ ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಭೂ ನ್ಯಾಯ ಮಂಡಳಿ ಆದೇಶದಂತೆ ಖಾತೆ ಬದಲಾಯಿಸಲು ಅಡವಿ ಲಂಚ ನೀಡಬೇಕೆಂದು ಕೇಳಿದ್ದರು.
ಲೋಕಾಯುಕ್ತ ಎಸ್ ಪಿ ಶಂಕರ ರಾಗಿ ಮಾರ್ಗದರ್ಶನದಲ್ಲಿ ತಂಡ ಇಂದು ಕಾರ್ಯಾಚರಣೆ ನಡೆಸಿತು. ಅಧಿಕಾರಿಗಳಾದ ಬಸಗೌಡ ಪಾಟೀಲ, ಪ್ರಭುಲಿಂಗಯ್ಯ ಹಿರೇಮಠ, ಸೊಪ್ಪಿ, ದೇಸಾಯಿಗೌಡ್ರ, ಲಕ್ಕಮ್ಮನವರ, ಶಿವನಾಯ್ಕರ ಇನ್ನಿತರರು ದಾಳಿಯಲ್ಲಿದ್ದರು.