*ಧಾರವಾಡದ ಸಾವಜಿ ಹೊಟೆಲ್ಲಿನಲ್ಲಿ ಖಾಕಿ ಫೈಟಿಂಗ್*
ಹುಬ್ಬಳ್ಳಿ : ಧಾರವಾಡದ ಸಾವಜಿ ಹೊಟೆಲ್ ವೊಂದರಲ್ಲಿ ಕರ್ತವ್ಯದ ಮೇಲಿದ್ದ ಖಾಕಿ ಧರಿಸಿದ ಅಧಿಕಾರಿಗಳಿಬ್ಬರೂ ಡಿಶುಂ ಡಿಶುಂ ಮಾಡಿಕೊಂಡ ಘಟನೆ ಕಳೆದ ರಾತ್ರಿ ನಡೆದಿದೆ.
ಸಂಗಮ ಸರ್ಕಲ್ ಬಳಿಯ ಸಾವಜಿ ಹೊಟೆಲ್ಲಿನಲ್ಲಿ ಈ ಹೊಡೆದಾಟ ನಡೆದಿದ್ದು,
ಧಾರವಾಡ ಉಪನಗರ ಠಾಣೆಯ ಪಿ . ಎಸ್.ಐ ಮಹೇಶ ಕುರ್ತಕೋಟಿ ಹಾಗೂ ಕಾಯ್ದಿಟ್ಟ ಮೀಸಲು ಪಡೆಯ ಆರ್ ಎಸ್ ಐ ಗಿರೀಶ್ ಹದ್ದಣ್ಣವರ ಅವರೇ ಹೊಡೆದಾಡಿಕೊಂಡ ಅಧಿಕಾರಿಗಳಾಗಿದ್ದಾರೆ.
ಜಗಳದಲ್ಲಿ ಗಿರೀಶ್ ಬಾಟಲಿಯಿಂದ ಪಿ ಎಸ್ ಐ ಮಹೇಶ ಅವರ ತಲೆಗೆ ಹೊಡೆದಿದ್ದು, ಗಾಯವಾಗಿದೆ.
ಆದರೂ ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ. ಗಿರೀಶ್ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಸಂಬಂಧಿ ಎನ್ನಲಾಗಿದೆ.
ಈ ಕುರಿತು ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲವಾದರೂ ಕರ್ತವ್ಯದಲ್ಲಿ ಇದ್ದಾಗ ಹೊಡೆದಾಡಿಕೊಂಡ ಘಟನೆ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.
ಹೊಡೆತ ತಿಂದ ಅಧಿಕಾರಿ ಹುಬ್ಬಳ್ಳಿ ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಂದರೆ, ಆರ್ ಎಸ್ ಐ ಗ್ರಾಮೀಣ ವ್ಯಾಪ್ತಿಗೆ ಬರಲಿದ್ದಾರೆ. ಈ ಘಟನೆ ಖಾಕಿ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.