*ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಪ್ರಶಂಸೆ*
ಹುಬ್ಬಳ್ಳಿ: ನಗರ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ರಾಷ್ಟ್ರದಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದು, ಇಂದು ಸಿಐಡಿ ತನಿಖೆ ಹಾಗೂ ಕಾಲಮಿತಿಯಲ್ಲಿ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಬೆನ್ನಲ್ಲೇ ಕಾನೂನು ಸಚಿವ ಎಚ್.ಕೆ.ಪಾಟೀಲ ಈ ಬಗ್ಗೆ ಇಂದು ಆದೇಶ ಹೊರಡಿಸಿದ್ದಾರೆ.
ಸಚಿವ ಎಚ್.ಕೆ.ಪಾಟೀಲ ಅವರಿಂದ ಕಾನೂನು, ನ್ಯಾಯ , ಮತ್ತು ಮಾನವ ಹಕ್ಕುಗಳ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಟಿಪ್ಪಣಿ ಕಳುಹಿಸಲಾಗಿದ್ದು ಮಹಿಳೆಯ ವಿರುದ್ಧದ ಅಪರಾದ ಕುರಿತು ವಿಶೇಷ ನ್ಯಾಯಾಲಯ ಸ್ಥಾಪಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸರ್ಕಾರದ ಈ ನಡೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
ಇನ್ನೊಂದೆಡೆ ಹುಬ್ಬಳ್ಳಿ ಸೇರಿದಂತೆ ಬಿಜೆಪಿ ಹುಬ್ಬಳ್ಳಿ ಸೇರಿದಂತೆ ಹಲವೆಡೆ ನೇಹಾ ಪ್ರಕರಣ ಮುಂದಿಟ್ಟು ಪ್ರತಿಭಟನೆ ನಡೆಸಿದ್ದು ಇನ್ನೊಂದೆಡೆ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಅಂಜುಮನ್ ಸಂಸ್ಥೆ ನೇತೃತ್ವದಲ್ಲಿ ಅಧ್ಯಕ್ಷರುಗಳಾದ ಎ.ಎಂ.ಹಿಂಡಸಗೇರಿ, ಇಸ್ಮಾಯಿಲ್ ತಮಟಗಾರ ಇವರ ನೇತೃತ್ವದಲ್ಲಿ ಮೌನ ಮೆರವಣಿಗೆ ಮೂಲಕ ನೇಹಾಗೆ ನ್ಯಾಯಕ್ಕಾಗಿ ಆಗ್ರಹಿಸಿದ್ದು ಇಡಿ ಸಮುದಾಯ ತಮ್ಮ ವಾಣಿಜ್ಯ ಸಂಕೀರ್ಣಗಳನ್ನು ಸಹ ಮುಚ್ಚಿ ಆರೋಪಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿದೆ.
ಇನ್ನೊಂದೆಡೆ ನೇಹಾಳ ಮರಣೋತ್ತರ ವರದಿಯಲ್ಲಿ ಬಿಡುಗಡೆಯಾಗಿದ್ದು ಆರೋಪಿ ಫಯಾಜ್, ನೇಹಾಳಿಗೆ 14 ಬಾರಿ ಚಾಕುವಿನಿಂದ ಇರಿದಿದ್ದಾನೆಂಬ ಸಂಗತಿ ಬೆಳಕಿಗೆ ಬಂದಿದೆ.
ನೇಹಾ ಕುಟುಂಬಸ್ಥರಿಗೆ ಇಂದೂ ಹಲವರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ವಿವಿಧ ಸಮುದಾಯಗಳು ಕಠಿಣ ಶಿಕ್ಷೆಗೆ ಆಗ್ರಹಿಸಿವೆ.