ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬರುವ ಪ್ರವಾಸಿಗರ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಕೋಯಿನ್ ರಸ್ತೆಯ ಲಕ್ಷ್ಮಿ ಮಾಲ್ ನಲ್ಲಿ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಸುಸಜ್ಜಿತ 46 ರೂಂ ಗಳನ್ನೂ ಹೊಂದಿರುವ ” ಹೋಟೆಲ್ ಆಶ್ರಯ ಇನ್” ಗ್ರಾಹಕರ ಸೇವೆಗೆ ಸಜ್ಜಾಗಿದೆ.
ಪ್ರಶಸ್ತವಾದ 300 ಚದರ ಅಡಿ ಕೊಠಡಿಗಳು, ಐಷಾರಾಮಿ ವಾಸ್ತವ್ಯವನ್ನು ಬಯಸುವವರಿಗಾಗಿ ವಿನ್ಯಾಸಗೊಳಿಸಲಾದ 600 ಚದರ ಅಡಿ ವಿಸ್ತೀರ್ಣದ ಸೂಟ್ಗಳು ಗ್ರಾಹಕ ಸ್ನೇಹಿಯಾಗಿ ವಿನ್ಯಾಸಗೊಳಿಸಲಾಗಿದೆ. ಗ್ರಾಹಕರ ವಾಹನಗಳಿಗಾಗಿಯೇ ಎರಡು ಮಹಡಿಗಳ ವಿಶಾಲ ಪಾರ್ಕಿಂಗ ವ್ಯವಸ್ಥೆಯನ್ನು “ಹೊಟೇಲ್ ಆಶ್ರಯ ಇನ್” ಹೊಂದಿದೆ.
ಸ್ವಾದಿಷ್ಟ ಮತ್ತು ರುಚಿಕರ ಭೋಜನದ ಅನುಭವವನ್ನು ಅನುಭವಿಸಲು ನುರಿತ ಬಾಣಸಿಗರಿಂದ ತಯಾರಿಸಲಾಗುವ ಆಯ್ದ ಸ್ಥಳೀಯ ಮತ್ತು ಜಾಗತಿಕ ರುಚಿಗಳು, ಕ್ಯುರೇಟೆಡ್ ವಿಶೇಷ ಭಕ್ಷ್ಯಗಳು ಮತ್ತು ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳಿಗೆ ಪ್ರತ್ಯೇಕ ಅಡುಗೆ ಮನೆಗಳೊಂದಿಗೆ ಗ್ರಾಹಕರ ಮನ ತಣಿಸಲು ಅತ್ಯಾಧುನಿಕ ವಾತಾವರಣದೊಂದಿಗೆ “ಫೈನ್ ಡೈನ್ ಮತ್ತು ಬಾರ” ಸಿದ್ಧವಾಗಿದೆ.
ಮೇಲ್ಮಳಿಗೆಯಲ್ಲಿ ಹಗಲು ಹಾಗೂ ರಾತ್ರಿ ಎರಡು ಸಮಯದಲ್ಲಿ
ನಗರದ ವಿಹಂಗಮ ನೋಟವನ್ನು ಅನುಭವಿಸುತ್ತ ” ಲಖನೌವೀ ಗೆಹಲೋಟಿ ಕಬಾಬ್” ” ಮಟನ್ ಯಾಕ್ನಿ ಶೋರ್ಬಾ”, “ಚಿಕನ್ ದಂ ಬಿರಿಯಾನಿ” ” ಮಟನ್ ದಂ ಬಿರಿಯಾನಿ ” ” ಸ್ಮೋಕ್ ವೆಜ್ ಸಲಾಡ್ ” ” ಚೀಜಿ ಕರ್ರಮ್ ಕುರ್ರೆ ” ಮುಂತಾದ ವೈವಿಧ್ಯಮಯ
ಆಹಾರ ಮತ್ತು ಪಾನೀಯಗಳನ್ನು ಸರ್ವ ಋತುಗಳಲ್ಲಿ ಸವಿಯಲು ವಿನೂತನವಾಗಿ ನಿರ್ಮಿಸಿರುವ ವಿಶಾಲವಾದ “ಸ್ಕೈ ಲೌಂಜ್” ಬಾರ ಕೌಂಟರ ರೂಪಿಸಲಾಗಿದೆ.
ಅತಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಸಮಾರಂಭಗಳನ್ನು ಆಯೋಜಿಸಲು ಮೂರೂ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಹವಾನಿಯಂತ್ರಿತ ” ಔರಾ” ಮತ್ತು ” ಅಮ್ರೀತ ”
ಸಭಾಂಗಣ ಅಲ್ಲದೆ “ಅಭಿನಂದನ್” ಎಂಬ ಮದುವೆಗಳು, ಕಾರ್ಪೊರೇಟ್ ಕಾರ್ಯಕ್ರಮಗಳು ಮತ್ತು ಅದ್ಧೂರಿ ಆಚರಣೆಗಳನ್ನು ಆಯೋಜಿಸಲು ವಿನ್ಯಾಸಗೊಳಿಸಲಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಮಾಲಿಕ ಅಮರನಾಥ್ ಚಾಟ್ನಿ ತಮ್ಮ ಹೊಟೆಲ್ ವಿಶೇಷತೆ ವಿವರ ನೀಡಿದರು. ವಿಜಯ್ ಚಾಟ್ನಿ , ಅಮಿತ ಚಾಟ್ನಿ, ವಿನೀತ್ ಚಾಟ್ನಿ, ಸತೀಶ ಹೆಗಡೆ, ಹಾಗೂ ಅರುಣ ಸವದತ್ತಿ ಉಪಸ್ತಿತರಿದ್ದರು.