*ಸಚಿವ ಎಚ್.ಕೆ. ನಿಕಟವರ್ತಿಗೆ ಮಹತ್ವದ ಹುದ್ದೆ*
ಹುಬ್ಬಳ್ಳಿ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಉಪಾಧ್ಯಕ್ಷರಾಗಿ ಗದುಗಿನ ಹಿರಿಯ ಕಾಂಗ್ರೆಸ್ ಮುಖಂಡ ಪೀರಸಾಬ ಕೌತಾಳ ಸರ್ಕಾರದಿಂದ ನೇಮಕಗೊಂಡಿದ್ದಾರೆ.
ಅವಿಭಾಜ್ಯ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಹೊಣೆ ನಿರ್ವಹಿಸಿದ್ದಾರಲ್ಲದೆ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷರಾಗಿಯೂ ಅತ್ಯುತ್ತಮವಾಗಿ ಕಾರ್ಯ ಮಾಡಿದ್ದಾರೆ.
ಸಚಿವ ಎಚ್.ಕೆ.ಪಾಟೀಲರ ನಿಕಟವರ್ತಿಯಾದ ಇವರುಗದುಗಿನಲ್ಲಿ ಪ್ರತಿ ವರ್ಷ ಭಾವೈಕ್ಯತೆ ಉತ್ಸವ ಹಮ್ಮಿಕೊಳ್ಳುತ್ತಾ ಮಾದರಿ ಸಮಾರಂಭ, ಸಾಮೂಹಿಕ ವಿವಾಹ ಏರ್ಪಡಿಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ.