*ಲೂಟಿ ಮಾಡಿ ಹಣ ಹಂಚಲು ಬರುತ್ತಿದ್ದಾರೆ : ಸಿಎಂ*
ಹುಬ್ಬಳ್ಳಿ : ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಬಸವರಾಜ ಬೊಮ್ಮಾಯಿ ಸಂಚು ಮಾಡಿದ್ದರು. ಅದಕ್ಕೆ ಜತೆಯಲ್ಲಿದ್ದೇ ಯಡಿಯೂರಪ್ಪಗೆ ಟಾಂಗ್ ಕೊಟ್ಟರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಚಂದಾಪುರ, ಹಿರೇಬೆಂಡಿಗೇರಿ, ಚೀಲೂರ ಬಡ್ನಿ ಮುಂತಾದೆಡೆ ದಿನವಿಡಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ ಪಠಾಣ ಪರ ಪ್ರಚಾರ ಸಭೆ ನಡೆಸಿ ಬೊಮ್ಮಾಯಿಯವರ ಜಾತಕ ಬಿಚ್ಚಿಟ್ಟು ಮತ ಯಾಚಿಸಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಮನವಿ ಮಾಡಿದರು.
ಮುಖ್ಯಮಂತ್ರಿಯಾಗಿ ವಿಪರೀತ ಭ್ರಷ್ಟಾಚಾರ ಮಾಡಿ ಅಧಿಕಾರ ಕಳೆದುಕೊಂಡಿದ್ದ ಬೊಮ್ಮಾಯಿ ಮೋದಿ ಹೆಸರಲ್ಲಿ ಲೋಕಸಭೆಗೆ ಆಯ್ಕೆ ಯಾಗಿದ್ದಾರೆ ಬೊಮ್ಮಾಯಿ ಸಿಕ್ಕಾಪಟ್ಟೆ ಲೂಟಿ ಮಾಡಿ ಹಣ ತುಂಬಿಕೊಂಡಿದ್ದಾರಲ್ಲಾ ಅದನ್ನು ಹಂಚೋಕೆ ಬರ್ತಾರೆ. ಹಂಚಲಿ ಬಿಡಿ ಎಂದರು.
ರೈತರ ಕಷ್ಟ ಸುಖ ಗೊತ್ತಿಲ್ಲದ, ಹಳ್ಳಿ ಬದುಕು ಹೇಗಿರತ್ತೆ ಎನ್ನುವುದೇ ಗೊತ್ತಿಲ್ಲದ ಬೊಮ್ಮಾಯಿ ಅವರ ಪುತ್ರ ಗೆದ್ದರೆ ಅವರು ನಿಮ್ಮ ಕೈಗೆ ಸಿಗ್ತಾರಾ? ನಿಮ್ಮ ಕಷ್ಟ ಕೇಳಿಸಿಕೊಳ್ತಾರಾ? ಬಡ ಜನರ ಬದುಕಿನ ಕಷ್ಟಗಳೇ ಗೊತ್ತಿಲ್ಲದ ಶ್ರೀಮಂತಿಕೆಯ ಮಗನನ್ನು ಗೆಲ್ಲಿಸಿದರೆ ಕ್ಷೇತ್ರಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.
ಮೋದಿ ಮಹಾನ ಸುಳ್ಳುಗಾರ ಎಂದು ಕುಮಾರ ಸ್ವಾಮಿ ಹೇಳಿದ್ದರು ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಡುವುದಾಗಿ ದೇವೆಗೌಡರು ಹೇಳಿದ್ದರು. ಈಗ ಇಬ್ಬರೂ ಬಾಯಿ ಬಾಯಿ ಆಗಿದ್ದಾರೆ. ಮೋದಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಆದರೆ ಇಲ್ಲಿ ಮಾಜಿ ಸಿಎಂ ಮಗನಿಗೆ ಮಣೆ ಹಾಕಿದ್ದಾರೆ. ಇದು ಕುಟುಂಬ ರಾಜಕಾರಣ ಅಲ್ಲವೇ ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ಅತ್ಯಂತ ಶ್ರೀಮಂತರ 16ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ರೈತರ ಸಾಲ ಮನ್ನಾ ಮಾಡಲಿಲ್ಲ. ಕಾಂಗ್ರೆಸ್ಸಿನ ಮನ ಮೋಹನ್ ಸಿಂಗ್ ಅವರು ಪ್ರಧಾನಿ ಆಗಿ ರೈತರ ಸಾಲ ಮನ್ನಾ ಮಾಡಿದ್ದರು. ಕಾಂಗ್ರೆಸ್ ಮಾತ್ರ ರೈತರ ಸಾಲ ಮನ್ನಾ ಮಾಡುವ ಚರಿತ್ರೆ ಹೊಂದಿದೆ ಎಂದು ಮುಖ್ಯಮಂತ್ರಿಗಳು ವಿವರವಾಗಿ ಬಿಚ್ಚಿಟ್ಟರು
ಸಿದ್ದರಾಮಯ್ಯ ಸರ್ಕಾರ ಬಡವರಿಗೆ ಶಕ್ತಿ ಕೊಡ್ತಾ ಇದೆ ಅಂತ ಅವರಿಗೆ ಹೊಟ್ಟೆಕಿಚ್ಚು ಶುರುವಾಗಿದೆ
ನಾಡಿನ ಜನರ ಶಕ್ತಿ, ಸಹಕಾರ ಇರುವವರೆಗೂ ನಾನು ಬೊಮ್ಮಾಯಿ ಪಿತೂರಿಗೆ, ಕುಮಾರಸ್ವಾಮಿ ಮತ್ತು ಬಿಜೆಪಿ ಪರಿವಾರದ ಷಡ್ಯಂತ್ರಗಳಿಗೆ ಬಗ್ಗೋದೂ ಇಲ್ಲ, ಜಗ್ಗೋದೂ ಇಲ್ಲ ಎಂದರಲ್ಲದೇ ಈ ಬಾರಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಗ್ಯಾರಂಟಿ ಎಂದರು.
ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದ ತಡಸದ ತಾಯಮ್ಮ ದೇವಿ ಜಾತ್ರೋತ್ಸವಕ್ಕೆ ತೆರಳಿ ಸಿಎಂ ಸಿದ್ದರಾಮಯ್ಯ ದೇವಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಕಳೆದ ಎರಡು ದಿನಗಳಿಂದ ಶಿಗ್ಗಾಂವಿ ಕ್ಷೇತ್ರದ ಪ್ರಮುಖ ಹಳ್ಳಿಗಳಲ್ಲಿ ಪ್ರಚಾರ ಸಭೆ ನಡೆಸಿ ಸಿದ್ದರಾಮಯ್ಯ ಮತ ಯಾಚಿಸಿದ್ದಾರೆ.
*ದಿನದ ಮಹತ್ವದ ಸುದ್ದಿಗಳು*
u
1)ನಾಳೆ ಬೆಳಿಗ್ಗೆ 10 ಗಂಟೆಗೆ ಮೈಸೂರು ಲೋಕಾಯುಕ್ತ ಕಚೇರಿಗೆ ತೆರಳಿ ಸಿಎಂ ವಿಚಾರಣೆಗೆ ಹಾಜರಾಗಲಿದ್ದಾರೆ.
2)ಬೆಂಗಳೂರಿನ ಸಂಜಯ ನಗರ ಠಾಣೆಯಲ್ಲಿ 42ನೇ ಜೆಎಂಎಫ್ಸಿ ನ್ಯಾಯಾಲಯದ ಆದೇಶದ ಮೇರೆಗೆ ಲೋಕಾ ಎಡಿಜಿಪಿ ಚಂದ್ರಶೇಖರ ದೂರಿನನ್ವಯ ಕೇಂದ್ರ ಸಚಿವ ಕುಮಾರಸ್ವಾಮಿ, ನಿಖಿಲ್, ಶಾಸಕಾಂಗ ನಾಯಕ ಸುರೇಶ ಬಾಬು ವಿರುದ್ದ ಎಫ್ ಐಆರ್ ದಾಖಲಾಗಿದೆ.
3)ರಾಜಕಾರಣ ಬಿಡುವ ಮೊದಲು ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟು ತನಿಖೆ ಎದುರಿಸಲಿ ಎಂದು ಕೆಂದ್ರ ಸಚಿವ ಪ್ರಹ್ಲಾದ ಜೋಶಿ ಟಾಂಗ್ ನೀಡಿದ್ದಾರಲ್ಲದೇ ಕೇಂದ್ರದಿಂದ ರಾಜ್ಯಕ್ಕೆ ಯಾವ ಅನುದಾನವೂ ಬಾಕಿ ಇಲ್ಲ ಎಂದಿದ್ದಾರೆ.
4)ಮುಡಾ ಹಗರಣದಲ್ಲಿ ಸಿಬಿಐ ತನಿಖೆ ಕೋರಿದ್ದ ಸ್ನೇಹಮಯಿ ಕೃಷ್ಣ ಅರ್ಜಿ ವಿಚಾರಣೆ ದಿ. 26ಕ್ಕೆ ಮುಂದೂಡಲ್ಪಟ್ಟಿದೆ.
5)ಅಬಕಾರಿ ಇಲಾಖೆಯಲ್ಲಿ ಭೃಷ್ಟಾಚಾರದ ವಿರುದ್ಧ ದಿ. 20ರಂದು ರಾಜ್ಯದಾದ್ಯಂತ ಮದ್ಯದಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲು ಕರ್ನಾಟಕ ವೈನ್ ಮರ್ಚಂಟ್ ಅಸೋಸಿಯೇಶನ್ದವರು ನಿರ್ಧರಿಸಿದ್ದಾರೆ.
6)ಶಿಗ್ಗಾಂವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಭರತ್ ಬೊಮ್ಮಾಯಿ ಗೆಲುವು ಶತಃ ಸಿದ್ದ ಎಂದಿದ್ದಾರೆ.
7)ಹುಬ್ಬಳ್ಳಿ ಧಾರವಾಡದ ಪ್ರಥಮ ಪ್ರಜೆ ರಾಮಣ್ಣ ಬಡಿಗೇರ ಅವರು ರಷ್ಯಾ ದೇಶದಲ್ಲಿ ನಡೆಯುತ್ತಿರುವ ಜಗತ್ತಿನ ಮಹಾಪೌರರ ಸಮ್ಮೇಳನದಲ್ಲಿ ಭಾಗಿಯಾಗಿದ್ದು, ಬೆಳೆಯತ್ತಿರುವ ಮಹಾನಗರಗಳ ಜನರ ಸ್ಥಿತಿಗತಿ ಮತ್ತು ಪರಿಹಾರ ಕಾರ್ಯಾಗಾರದಲ್ಲಿ ಪಾಲ್ಗೊಂಡರು.