ಹುಬ್ಬಳ್ಳಿ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮದ (HESCOM) ನೂತನ ಅಧ್ಯಕ್ಷರಾಗಿ ಮಾಜಿ ಶಾಸಕ ಸೈಯದ್ ಅಜ್ಜಂಫೀರ್ ಖಾದ್ರಿ ನೇಮಕಗೊಂಡಿದ್ದಾರೆ.
ಶಿಗ್ಗಾಂವಿ ಕ್ಷೇತ್ರದ ಕೈ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಖಾದ್ರಿಯವರು ನಾಮಪತ್ರ ಸಲ್ಲಿಸಿದ ನಂತರ ಸೂಕ್ತ ಸ್ಥಾನಮಾನದ ಭರವಸೆಯ ನೀಡಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹಮದ್ ಯಶಸ್ವಿಯಾಗಿದ್ದರು.
ತದನಂತರ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಯಾಸೀರ್ ಪಠಾಣ್ ಪರ ಪ್ರಚಾರ ಕೈಗೊಂಡು
ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಬೊಮ್ಮಾಯಿ ಸಾಮ್ರಾಜ್ಯ ಕೊನೆಗೊಳಿಸಿ,
ಕೈ ಅಭ್ಯರ್ಥಿ ಪ್ರಚಂಡ ಗೆಲುವಿನ ಬೆನ್ನಲ್ಲೇ ಖಾದ್ರಿ ಮಹತ್ವದ ಹೆಸ್ಕಾಂ ಅಧ್ಯಕ್ಷರಾಗಿ ಇಂದು ನಿಯುಕ್ತಿ ಗೊಂಡಿದ್ದು ಆದೇಶ ಹೊರಬಿದ್ದಿದೆ.