*ಮಹಿಳೆಯರ ಮೂಲಕ ಸಲುಗೆ ಬೆಳೆಸಿ ಪೊಲೀಸರಂತೆ ದಾಳಿ ನಡೆಸಿ ಸುಲಿಗೆ* / *ಸ್ಕೋಡಾ ಕಾರು ಸಹಿತ 14.73 ಲಕ್ಷ ಮೌಲ್ಯದ ಚಿನ್ನಾಭರಣ ವಶ*
ಹುಬ್ಬಳ್ಳಿ : ಮೂರ್ನಾಲ್ಕು ದಿನಗಳ ಹಿಂದಷ್ಟೇ ವ್ಯಾಪಾರಿಯೊಬ್ಬರ ಸುಲಿದಿದ್ದ ಐವರು ಹನಿ ಟ್ರಾಪ್ ತಂಡದ ಸದಸ್ಯರ ಬಂಧಿಸಿದ್ದ ಹುಬ್ಬಳ್ಳಿ ಧಾರವಾಡ ಪೊಲೀಸರು ರಾಯಚೂರು ಮೂಲದ ರೈತರೊಬ್ಬರನ್ನು ಖೆಡ್ಡಾಕ್ಕೆ ಕೆಡವಿದ ಮತ್ತೊಂದು ನಾಲ್ವರ ಗ್ಯಾಂಗ್ ನ್ನು ಅರೆಸ್ಟ್ ಮಾಡಿದೆ.
ಧಾರವಾಡದ ವಿದ್ಯಾಗಿರಿಯ ಪೊಲೀಸರು ಧಾರವಾಡದವನೇ ಆದ ಆಕಾಶ ರವಿ ಉಪ್ಪಾರ, ರೇಣುಕಾ ಉರ್ಪ್ ರಿಯಾನಾ ಉಪ್ಪಾರ, ಗಜಾನಾಬಾನು ಉರ್ಪ್ ಅಂಜು ಹಾಗೂ ಮಲಿಕ್ ಜಾನ್ ನದಾಫ ಎಂಬ ನಾಲ್ವರ ಬಂಧಿಸಿ ಸ್ಕೋಡಾ ಕಾರು, ಆಭರಣ, ನಗದು ಸೇರಿದಂತೆ 14 ಲಕ್ಷ 73ಸಾವಿರ ರೂಂ ಮೌಲ್ಯದ ವಸ್ತುಗಳನ್ನು
ವಶಪಡಿಸಿಕೊಂಡಿದ್ದಾರೆ.
ಮೊದಲು ರಾಯಚೂರು ವ್ಯಕ್ತಿಯ ಸಲಿಗೆ ಬೆಳೆಸಿ ಮಹಿಳೆಯರನ್ನು ಬಿಟ್ಟು ಅವರನ್ನು ತಮ್ಮ ಮನೆಗೆ ಕರೆಸಿ ಅವರೊಂದಿಗಿನ ವಿಡಿಯೋ ಮಾಡಿ ಆ ವೇಳೆ ಪೊಲೀಸ್ ರಂತೆ ದಾಳಿ ನಡೆಸಿ ಹಣ ಸುಲಿಗೆ ಮಾಡುತ್ತಿದ್ದ ತಂಡ ಇದಾಗಿತ್ತು.
*ದಿನದ ಮಹತ್ವದ ಸುದ್ದಿ*
*ಟಾಟಾ ಸಮೂಹದ ನೂತನ ಅಧ್ಯಕ್ಷರಾಗಿ ನೋಯೆಲ್ ಟಾಟಾ*
*ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ಇದೆ : ಸಿಎಂ ಸಿದ್ದರಾಮಯ್ಯ*
*ಹಳೇ ಹುಬ್ಬಳ್ಳಿಯಲ್ಲಿ 2022ರ ಏಪ್ರಿಲ್ ನಲ್ಲಿ ನಡೆದ ಗಲಭೆ ಪ್ರಕರಣ ಸೇರಿದಂತೆ ಒಟ್ಟು 43 ಪ್ರಕರಣಗಳನ್ನು ರದ್ದು ಮಾಡಲು ಸಚಿವ ಸಂಪುಟ ಕೈಗೊಂಡ ತೀರ್ಮಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ವಿರೋಧ ಪಕ್ಷದ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ ಖಂಡನೆ*
*ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನಕ್ಕೆ ಹೀನಾಯ ಸೋಲು. ಮುಲ್ತಾನ ಟೆಸ್ಟ್ನಲ್ಲಿ ಆಂಗ್ಲ ತಂಡಕ್ಕೆ ಇನ್ನಿಂಗ್ಸ್ ಹಾಗೂ 47 ರನ್ ಗಳಿಂದ ಜಯ, ಪಾಕಿಸ್ತಾನದ 556ಗೆ ಉತ್ತರವಾಗಿ ಇಂಗ್ಲೆಂಡನ ಜೊ ರೂಟ್ (262), ಹ್ಯಾರಿ ಬ್ರೂಕ್ (317) ತ್ರಿಶತಕ ಹಾಗೂಜೆ. ಲೀಚ್ ದಾಳಿಗೆ ಪಾಕ್ 220ಕ್ಕೆ ಸರ್ವ ಪತನ*.
*ನಾಳೆ ನಾಡಹಬ್ಬ ದಸರಾದ ವೈಭವದ ಜಂಬೂಸವಾರಿ*,