*ಉಪ ಗುತ್ತಿಗೆದಾರರಿಗೆ ಹಣ ನೀಡದ ಕಾರಣ ಕಿಡ್ನಾಪ್ *
ಹುಬ್ಬಳ್ಳಿ : ನಗರದ ರೈಲ್ವೆ ಗುತ್ತಿಗೆದಾರರ ಮೋಹನ್ ಚವ್ಹಾಣ ಎಂಬುವವರನ್ನು ಇಂದು ಮಧ್ಯಾಹ್ನ ಅಪಹರಿಸಲಾಗಿದೆ ಎಂದು ತಿಳಿದುಬಂದಿದೆ.
ತೋಳನಕೆರೆ ಬಳಿಯ ಕಚೇರಿಗೆ ಕಾರು ಹಾಗೂ ಕ್ರೂಸರ್ ವಾಹನಗಳಲ್ಲಿ 1-30ರ ಸುಮಾರಿಗೆ ಬಂದ ಗೋಕಾಕ್ ಮೂಲದ ತಂಡ ಚವ್ಹಾಣ ಅವರನ್ನು ಅಪಹರಿಸಿದೆ.
ರೈಲ್ವೆ ಕೆಲಸದ ಉಪ ಗುತ್ತಿಗೆ ನೀಡಿದವರಿಗೆ ಹಣ ನೀಡದೇ ಸತಾಯಿಸಿದ ಹಿನ್ನೆಲೆಯಲ್ಲಿ ಅಪಹರಿಸಲಾಗಿದೆ ಎನ್ನಲಾಗುತ್ತಿದೆ.
ಈ ಕುರಿತು ಗೋಕುಲ ರೋಡ್ ಠಾಣೆಯಲ್ಲಿ ದೂರು ನೀಡಿದ್ದಾರೆಂದು ಹೇಳಲಾಗಿದೆ.
ಕಾರ್ಯಾಚರಣೆ ನಡೆಸಿರುವ ಗೋಕುಲ ರೋಡ್ ಪೊಲೀಸರು ಕ್ರೂಸರ್ ವಾಹನ ಸವದತ್ತಿ ರಸ್ತೆಯಲ್ಲಿ ಪತ್ತೆ ಹಚ್ಚಿದ್ದರೂ ಮೋಹನ್ ಚವ್ಹಾಣ ಪತ್ತೆಯಾಗಿಲ್ಲ ಎನ್ನಲಾಗಿದೆ. ಇದೇ ರೀತಿ ಹಣಕಾಸು ವ್ಯವಹಾರದಲ್ಲಿ ವಿದ್ಯಾನಗರ ಠಾಣೆಯಲ್ಲಿಯೂ ಕೆಲವು ವರ್ಷಗಳ ಹಿಂದೆ ಚವ್ಹಾಣ ವಿರುದ್ಧ ಪ್ರಕರಣ ದಾಖಲಾಗಿತ್ತು.