ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 23ನೇ ಅವಧಿಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ನಿರೀಕ್ಷೆಯಂತೆಯೇ ಇಂದು ನಡೆದ ಚುನಾವಣೆಯಲ್ಲಿ ಹಿರಿಯ ಸದಸ್ಯರಾದ ರಾಜಣ್ಣ ಕೊರವಿ, ಚಂದ್ರಶೇಖರ ಮನಗುಂಡಿ, ಶಂಕರ ಶೇಳಕೆ ಮತ್ತು ಉಮಾ ಮುಕುಂದ ಇವರುಗಳು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ರಾಜಣ್ಣ ಕೊರವಿ, ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳು ಸ್ಥಾಯಿ ಸಮಿತಿಗೆ ಚಂದ್ರಶೇಖರ ಮನಗುಂಡಿ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ಶಂಕರ ಶೇಳಕೆ ಮತ್ತು ಲೆಕ್ಕ ಸ್ಥಾಯಿ ಸಮಿತಿಗೆ ಉಮಾ ಮುಕುಂದ ಇವರುಗಳು ಆಯ್ಕೆಯಾದರು.
ಎಲ್ಲ ಸಮಿತಿಗಳಿಗೂ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ನೂತನ ಅಧ್ಯಕ್ಷರುಗಳನ್ನು ಮೇಯರ್ ರಾಮಣ್ಣ ಬಡಿಗೇರ, ಆಯುಕ್ತ ಈಶ್ವರ ಉಳ್ಳಾಗಡ್ಡಿ, ಉಪ ಮೇಯರ್ ದುರ್ಗಮ್ಮ ಬಿಜವಾಡ, ಸಭಾ ನಾಯಕ ವೀರಣ್ಣ ಸವಡಿ ಅಭಿನಂದಿಸಿದರು.
ಮೇಯರ್ ಸ್ಥಾನ ವಂಚಿತರಾಗಿದ್ದ ರಾಜಣ್ಣ ಕೊರವಿಗೆ ಆರೋಗ್ಯ ದೊರೆತಿದ್ದು, ಬಜೆಟ್ ಮಂಡಿಸುವ ಅವಕಾಶವಿರುವ ಹಣಕಾಸು ಸಮಿತಿಗೆ ಮನಗುಂಡಿ ಅಲ್ಲದೇ ಧಾರವಾಡದ ಶಂಕರ ಶೇಳಕೆಗೆ ನಗರಯೋಜನೆ ದೊರೆತಿದೆ. ಲೆಕ್ಕ ಸಮಿತಿ ಲೆಕ್ಕಕ್ಕಷ್ಟೆ.ಒಟ್ಟಿನಲ್ಲಿ ಬಿಜೆಪಿ ಹಳಬರಿಗೆ ಪಟ್ಟ ಕಟ್ಟುವ ಮೂಲಕ ಯಾವುದೇ ಅಸಮಾಧಾನಕ್ಕೆ ಅವಕಾಶವಿಲ್ಲದಂತೆ ಮಾಡಿದೆ.
ಕಳೆದ ದಿ. 3ರಂದು ಸ್ಥಾಯಿ ಸಮಿತಿಗೆ ಚುನಾವಣೆ ನಡೆದು
ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿ ನಿರ್ಧಾರದಂತೆ ಏಳು ಸದಸ್ಯರ ಪೈಕಿ ನಾಲ್ಕು ಕಮಲ ಪಡೆಗೆ ಹಾಗೂ ಮೂರು ವಿಪಕ್ಷ ಕಾಂಗ್ರೆಸ್ ಪಾಲಾಗಿತ್ತು.