*ಮಣಿಪಾಲದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗಲೆ ಹೃದಯಾಘಾತ*
ಹುಬ್ಬಳ್ಳಿ: ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ಹಾಸ್ಯ ನಟ, ರಂಗಭೂಮಿ ಕಲಾವಿದ ,ರಂಗಕರ್ಮಿ ರಾಜು ತಾಳಿಕೋಟಿ (62) ಅವರು ಇಂದು (ಅ.13) ಸಂಜೆ ಮಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ತೀವ್ರ ಹೃದಯಘಾತದಿಂದ ನಿಧನರಾದರು.

ಚಲನಚಿತ್ರದ ಚಿತ್ರೀಕರಣಕ್ಕಾಗಿ ಮಂಗಳೂರಿನಲ್ಲಿದ್ದ ರಾಜು ತಾಳಿಕೋಟಿ ಅವರಿಗೆ ನಿನ್ನೆ ರಾತ್ರಿ ತೀವ್ರ ಹೃಯಾಘಾತ ಆಗಿತ್ತು. ತಕ್ಷಣ ಅವರನ್ನು ಮಂಗಳೂರು ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಸಂಜೆ ಆಸ್ತತ್ರೆಯಲ್ಲಿ ಅವರು ನಿಧನರಾದರು.
ನಾಳೆ ದಿನ ಅವರ (ಸ್ವಂತ ಊರು ತಾಳಿಕೋಟಿ) ಈಗಿನ ಊರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಅವರ ಪುತ್ರ ಭರತ ತಾಳಿಕೋಟಿ ಅವರು ತಿಳಿಸಿದ್ದಾರೆ.
ಕೇವಲ ಏಳು ವರ್ಷದವನಾಗಿದ್ದಾಗಲೇ ತಂದೆಯವರ ಖಾಸಗತೇಶ್ವರ ನಾಟಕ ಕಂಪನಿಯಲ್ಲಿ ಸತ್ಯ ಹರಿಶ್ಚಂದ್ರ ನಾಟಕದ ಲೋಹಿತಾಶ್ವನಾಗಿ ಬಣ್ಣ ಹಚ್ಚಿದ ರಾಜೇಸಾಬ ಯಂಕಂಚಿ ಉರ್ಫ್ ರಾಜು ತಾಳಿಕೋಟಿ ನಂತರ ಖಾಸಗತೇಶ್ವರ ನಾಟಕ ಕಂಪನಿ ಮತ್ತೆ ಸಕ್ರೀಯವಾಗಿಸಿ ಕಲಿಯುಗ ಕುಡುಕ ಧ್ವನಿ ಸುರುಳಿ ಭಾರೀ ಹೆಸರು ಮಾಡಿತಲ್ಲದೇ ನಾಟಕ ಸಹ ನಾಲ್ಕು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಪಂಚರಂಗಿ, ಮನಸಾರೆ, ಭೀಮಾ ತೀರದಲ್ಲಿ ಸೇರಿದಂತೆ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ನಗೆಯ ಸಂತ ಯಶವಂತ ಸರದೇಶಪಾಂಡೆ ನಿಧನವಾಗಿ ತಿಂಗಳ ಮುಂಚೆಯೇ ಮತ್ತೊಬ್ಬ.ಹಾಸ್ಯ ನಟ ಉಸಿರು ನಿಲ್ಲಿಸಿದ್ದಾರೆ.




