*ನವಲಗುಂದದ ಜಾನಪದ ಗಾಯಕ ವಲ್ಲೆಪ್ಪನವರಗೂ ಪ್ರಶಸ್ತಿ*
ಹುಬ್ಬಳ್ಳಿ : 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 69ಜನರಿಗೆ ಘೋಷಣೆ ಆಗಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ನಾಗನೂರು ಗ್ರಾಮದ ಜಾನಪದ ಗಾಯಕ ಇಮಾಮ್ ಸಾಬ್ ವಲ್ಲೆಪ್ಪನವರ, ಸಾಹಿತ್ಯ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಬಿ.ಟಿ ಲಲಿತಾ ನಾಯಕ್, ಬಾಳಾಸಾಹೇಬ ಲೋಕಾಪುರ,
ಪತ್ರಿಕೋದ್ಯಮ ವಿಭಾಗದಲ್ಲಿ ಹಿರಿಯ ಪತ್ರಕರ್ತರಾದ
ಸನತ್ ಕುಮಾರ ಬೆಳಗಲಿ, ಎನ್.ಎಸ್.ಶಂಕರ್, ರಾಮಕೃಷ್ಣ ಬಡಶೇಶಿ, ಎ.ಜಿ.ಕಾರಟಗಿ
ಅವರುಗಳಿಗೆ ಪ್ರಶಸ್ತಿ ಬಂದಿದೆ.
ನಾಗನೂರು ಗ್ರಾಮದ ವಲ್ಲೆಪ್ಪನವರ ಈ ಹಿಂದೆ ಜಾನಪದ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಮ್ಮ ಜಾನಪದ ಗಾಯನ, ತತ್ವ ಪದಗಳ ಮೂಲಕ ಹೆಸರುವಾಸಿಯಾಗಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ಹೆಸರಾಂತ ಭಾಗವತರಾದ ಕೇಶವ ಹೆಗಡೆ, ವೈದ್ಯಕೀಯದಲ್ಲಿ ಗದುಗಿನ ಡಾ. ಜಿ.ಬಿ.ಬಿಡಿನಹಾಳ, ಹಾವೇರಿಯ ವಿರೂಪಾಕ್ಷಪ್ಪ ಹಾವನೂರು, ಅಯೋಧ್ಯೆಯ ಬಾಲರಾಮನ ಶಿಲ್ಪಿ ಅರುಣ್ ಯೋಗಿರಾಜ ಸಹ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಲ್ಲದೆ 50 ಮಹಿಳಾ ಸಾಧಕಿಯರು, 50ಪುರುಷ ಸಾಧಕರನ್ನು ಈ ಬಾರಿ ಸಹ ಸನ್ಮಾನ ಮಾಡಲು ಸರ್ಕಾರ ನಿರ್ಧರಿಸಿದೆ.