ಬಂಗಾರದ ಮನುಷ್ಯ ‘ಡಿ.ಟಿ.ಪಾಟೀಲರಿಗೆ’ ರಾಜ್ಯೋತ್ಸವ ಪ್ರಶಸ್ತಿ
ಜಿಲ್ಲೆಯ ನಾಲ್ಕು ಜನ ಸಾಧಕರಿಗೆ ಗೌರವ
ಹುಬ್ಬಳ್ಳಿ : 68ನೇ ರಾಜ್ಯೋತ್ಸವ ಆಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ ಕರ್ನಾಟಕ ರಾಜ್ಯ ಸರಕಾರವು ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಧಾರವಾಡ ಜಿಲ್ಲೆಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಲ್ಕು ಜನ ಸಾಧಕರು ಆಯ್ಕೆ ಆಗಿದ್ದಾರೆ.
ಕೃಷಿ ಮತ್ತು ಪರಿಸರ ಕ್ಷೇತ್ರದಲ್ಲಿ ಪ್ರಗತಿಪರ ರೈತ, ಕೃಷಿ ಸಾಧಕ, ಗುಡ್ಡ ಕರಗಿಸಿ ತೋಟವಾಗಿಸಿದ ದ್ಯಾವನಗೌಡ ಟಿ. ಪಾಟೀಲ, ಸಂಗೀತ , ನೃತ್ಯ ಸಾಧಕಿ ನೀಲಾ ಕೊಡಲಿ,ಕ್ರೀಡಾ ಕ್ಷೇತ್ರದಲ್ಲಿ ಕ್ರೀಡಾಪಟು ಅಶೋಕ ಗದಿಗೆಪ್ಪ ಏಣಗಿ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಹಿರಿಯ ಕಲಾವಿದೆ ಎಚ್.ಬಿ. ಸರೋಜಮ್ಮ ಆಯ್ಕೆ ಆಗಿದ್ದಾರೆ.
ಕರ್ನಾಟಕ ರಾಜ್ಯಸರ್ಕಾರವು 68 ನೇ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯದ ವಿವಿಧ ಜಿಲ್ಲೆಗಳ 68 ಜನ ಗಣ್ಯರಿಗೆ ಹಾಗೂ 10 ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ. ಇದರಲ್ಲಿ ಧಾರವಾಡ ಜಿಲ್ಲೆಯ 4 ಜನ ಸಾಧಕರು ಸೇರಿದ್ದಾರೆ.
ಪ್ರಶಸ್ತಿ ಪುರಸ್ಕøತರಿಗೆ ನಾಳೆ ಸಂಜೆ ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಫಲಕ, ಹಣ್ಣು, ಶಾಲು, ನೆನಪಿನ ಕಾಣಿಕೆ ನೀಡಿ ಗೌರವಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಧೀನ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ಕಟಣೆಯಲ್ಲಿ ತಿಳಿಸಿದ್ದಾರೆ.
ಯಲ್ಲಾಪುರ ಓಣಿಯ ಡಿ.ಟಿ.ಪಾಟೀಲರು ಗಬ್ಬೂರ,ಮಾವನೂರು, ಬೆಳಗಲಿ ಗಳಲ್ಲಿ ಮಾಡಿರುವ ಕೃಷಿ ಸಾಧನೆ ಬಂಗಾರದ ಮನುಷ್ಯನನ್ನು ನೆನಪಿಸುವುದು.