*ಮುಸ್ಲಿಮ್ ಬಾಂಧವರಿಂದ*
*ಸಾಮೂಹಿಕ ವಿಶೇಷ ಪ್ರಾರ್ಥನೆ*
*ಮೇರೆ ಮೀರಿದ ಸಡಗರ/ ಪರಸ್ಪರ ಶುಭಾಶಯ ವಿನಿಮಯ*
ಹುಬ್ಬಳ್ಳಿ : ವಾಣಿಜ್ಯ ರಾಜಧಾನಿ ಹುಬ್ಬಳ್ಳಿ, ಪೇಡೆ ನಗರಿ ಧಾರವಾಡ ಒಳಗೊಂಡು ರಾಜ್ಯದಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಈದಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಸಂಭ್ರಮದಿಂದ ಆಚರಿಸಿದರು.
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಸಹಸ್ರಾರು ಮುಸ್ಲಿಂ ಬಾಂಧವರು ಮಾಲಾನಾ ಜಹಿರುದ್ದೀನ ಖಾಜಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಅಂಜುಮನ್ ಅಧ್ಯಕ್ಷ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಮುಖಂಡರಾದ ಅಲ್ತಾಫ್ ಹಳ್ಳೂರ, ಮಹ್ಮದ ಯೂಸೂಫ್ ಸವಣೂರ,ದಾದಾಹಯಾತ್ ಖೈರಾತಿ, ಶಿರಾಜ ಅಹ್ಮದ ಕುಡಚಿವಾಲೆ, ಅನ್ವರ ಮುಧೋಳ, ಬಾಬಾಜಾನ ಮುಧೋಳ, ಫಾರೂಕ ಅಬ್ಬೂನವರ, ಶಫೀ ಮುದ್ದೇಬಿಹಾಳ ರಾಜೇಸಾಬ ಸಿಕಂದರ, ಹಾಷ್ಯಂ ಹಿಂಡಸಗೇರಿ, ಬಶೀರ ಗೂಡಮಾಲ್,ಶಫಿ ಯಾದಗಿರಿ, ಮೊಹ್ಮದ ಕೋಳೂರ, ರಾಜೇಸಾ ಸಿಕಂದರ್ ಸೇರಿದಂತೆ ಸಹಸ್ರಾರು ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಶಾಸಕ ಪ್ರಸಾದ ಅಬ್ಬಯ್ಯ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್,ಸದಾನಂದ ಡಂಗನವರ ಮುಂತಾದವರು ಮುಸ್ಲಿಮ ಮುಖಂಡರನ್ನು ಬಾಂಧವರನ್ನು ಭೇಟಿಯಾಗಿ ಶುಭಾಶಯ ಕೋರಿದರು.
ಹಳೇ ಹುಬ್ಬಳ್ಳಿ ಈದಗಾ ಮೈದಾದಲ್ಲಿ ಮೌಲಾನಾ ನಯೀಮುದ್ದೀನ ಅಶ್ರಫಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಅಂಜುಮನ್ ಮಾಜಿ ಉಪಾಧ್ಯಕ್ಷ ಅಲ್ತಾಫ್ ನವಾಜ್ ಕಿತ್ತೂರ, ವಕ್ಫ್ ಮಂಡಳಿ ಉಪಾಧ್ಯಕ್ಷ ಅಹಮದ್ ರಾಜಾ ಕಿತ್ತೂರ, ಅಂಜುಮನ್ ಗೌರವ ಕಾರ್ಯದರ್ಶಿ ಬಶೀರ ಹಳ್ಳೂರ, ರಫೀಕ ಬಂಕಾಪುರ,ಇಮಾಮ ಹುಸೇನ ಮಡಕಿ, ಅಶ್ಪಾಕ್ ವಿಜಾಪುರ, ರಿಯಾಜ ಖತೀಬ, ನವೀದ್ ಮುಲ್ಲಾ,ಸಲೀಂ ಸುಂಡಕೆ, ಎಮ್.ಎ.ಪಠಾಣ, ಮೊಹ್ಮದ ಯೂಸೂಪ್ ಬಂಗ್ಲೆವಾಲೆ, ಮೊಹಮ್ಮದ್ ರೆಹಾನ ಕಿತ್ತೂರ, ಮಹಮದ್ ತೆಹಾನ ಮುಂತಾದವರಿದ್ದರು.
ಧಾರವಾಡದ ಗುಲಗಂಜಿಕೊಪ್ಪದ ಈದ್ಗಾ ಮೈದಾನದಲ್ಲಿ
ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಸೇರಿ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅಮರಗೋಳದಲ್ಲೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
*ಕಪ್ಪು ಪಟ್ಟಿ ಧರಿಸಿ ನಮಾಜ್*:
ಈದ್ಗಾ ಮೈದಾನ ಟಿಂಬರ್ ಯಾರ್ಡ್ ರೇಲ್ವೆ ಸ್ಟೇಷನ್ ಹತ್ತಿರ ಉಣಕಲ್ ಹುಬ್ಬಳ್ಳಿ ಯಲ್ಲಿ ಇಂದು
ಕೇಂದ್ರ ಸರ್ಕಾರವು ವಕ್ಫ ಕಾನೂನು ತಿದ್ದುಪಡಿ ಮಾಡುತ್ತಿರುವದನ್ನು ವಿರೋಧಿಸಿ ಕಪ್ಪು ಪಟ್ಟಿ ಕಟ್ಟಿಕೊಂಡು ಸಾವಿರಾರು ಮುಸ್ಲಿಂ ಬಾಂಧವರು ಈದ್ ಉಲ್ ಫಿತರ್
ಪ್ರಾರ್ಥನೆ ಸಾಮೂಹಿಕವಾಗಿ ಸಲ್ಲಿಸಿದರು.ಹುಡಾ ಅಧ್ಯಕ್ಷ ಶಾಕೀರ ಸನದಿ ಮಾಜಿ ಲೋಕಸಭಾ ಸದಸ್ಯ ಪ್ರೊ. ಐ ಜಿ ಸನದಿ, ಮಾಜಿ ಪಾಲಿಕೆ ಸದಸ್ಯ ಹಜರತ್ಅಲಿ ಎಮ್ ದೂಡ್ಡಮನಿ, ಹಾಗೂ ಅಹಲೆ ಸುನ್ನತ ಮುಸ್ಲಿಂ ಜಮಾಅತ ಪ್ಯಾಟಿಸಾಲ್ ಉಣಕಲ್ ಜಮಾಅತ್ ಅಧ್ಯಕ್ಷ ಶರಿಫ್ ಗರಗದ,ಸುನ್ನಿ ನೂರಾನಿ ಜುಮ್ಮಾ ಮಸೀದಿಯ ಅಧ್ಯಕ್ಷ ರಫೀಕ್ ಅಹ್ಮದ್ ದೂಡ್ಡಮನಿ ದಾವಲಸಾಬ ಬಿ ನದಾಫ್ ಖಾದರಬಾಷಾ ಶಿಬಾರಗಟ್ಟಿ
ಇತರರು ಇದ್ದರು.