*ಚದುರಿದ ಚಿತ್ರಗಳಾದ ಡಿಬಾಸ್ ಗ್ಯಾಂಗ್ – ನೆಚ್ಚಿನ ನಟನ ನೋಡಲು ನೂಕು ನುಗ್ಗಲು*
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ಗೆ ರಾಜ್ಯಾತಿಥ್ಯ ಕೊಡಲಾಗುತ್ತಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಿಗಿಭದ್ರತೆಯಲ್ಲಿ ಇಂದು ಪೊಲೀಸರು ಬಳ್ಳಾರಿ ಕಾರಾಗ್ರಹಕ್ಕೆ ಸ್ಥಳಾಂತರಿಸಿದ್ದು ಅವರ ಬದಲಾದ ಸಂಖ್ಯೆ ಕೈದಿ ನಂಬರ್ 511 ಆಗಿದೆ.
ಬೆಳಗಿನ ಜಾವ 4-15 ಕ್ಕೆ ಬೆಂಗಳೂರಿನಿಂದ ಹೊರಟ ದರ್ಶನ್ 10 ರ ಸುಮಾರಿಗೆ ಬಳ್ಳಾರಿ ತಲುಪಿದ್ದು ಜೈಲಿಗೆ ಪ್ರವೇಶಿಸುತ್ತಿದ್ದಂತೆ ದರ್ಶನ್ ಹೆಸರು, ತಂದೆಯ ಹೆಸರು ಹಾಗೂ ವಿಳಾಸವನ್ನು ಜೈಲಿನ ಡೈರಿಯೊಳಗೆ ಬರೆದುಕೊಂಡು ಕತ್ತಿನೊಳಗಿನ ಸರ,ಕೈಯಲ್ಲಿನ ಬೆಳ್ಳಿ ಕಡಗ ತೆಗೆಸಿ ಒಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ದರ್ಶನ್ ತಂದಿದ್ದ ಎರಡು ಬ್ಯಾಗ್ ಪರಿಶೀಲನೆ ಮಾಡಿ ಒಳಗೆ ಕಳುಹಿಸಿದ್ದಾರೆ. ಕಪ್ಪು ಬಣ್ಣದ ಟಿ-ಶರ್ಟ್, ಕೂಲಿಂಗ್ ಗ್ಲಾಸ್ ಜತೆ ಹೊಸ ಲುಕ್ನಲ್ಲಿ ’ಸಾರಥಿ’ ಸೆಂಟ್ರಲ್ ಜೈಲ್ಗೆ ಪ್ರವೇಶಿಸಿದ್ದಾರೆ.
ಬ್ರಾಂಡೆಡ್ ಟೀರ್ಟ್, ಕೂಲಿಂಗ್ ಗ್ಲಾಸ್, ಕೈ ಕಡಗ, ಧರಿಸಿ ಸ್ಟೈಲಿಶ್ ಆಗಿ ನಟ ದರ್ಶನ್ ಅವರನ್ನು ಕರೆತಂದ ಹಿನ್ನೆಲೆ ಬೆಂಗಾವಲು ಸಿಬ್ಬಂದಿಗೆ ನೋಟಿಸ್ ನೀಡಿ ಕಾರಣ ಕೇಳಲಾಗಿದೆ.ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಅಭಿಮಾನಿಗಳು ಸೇರಿದ್ದು ಅವರನ್ನು ಖಾಕಿ ಪಡೆ ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದೆ. ಇನ್ನೊಂದೆಡೆ ಇದೆ ಆರೋಪದಲ್ಲಿ 9ನೇ ಆರೋಪಿಯಾಗಿರುವ ಧನರಾಜ್ನನ್ನು ಬೆಂಗಳೂರು ಪರಪ್ಪನ ಅಗ್ರಹಾರದಿಂದ ನಗರದ ಕೇಂದ್ರ ಕಾರಾಗೃಹಕ್ಕೆ ಇಂದು ಕರೆ ತರಲಾಗಿದೆ.
ಬೆಂಗಳೂರು ಪೊಲೀಸರು ಭದ್ರತೆ ಮಧ್ಯೆ ನಗರದ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಿದರು.
ಇನ್ನೊರ್ವ 14ನೇ ಆರೋಪಿ ಪ್ರದೂಷ್ನನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಮೊದಲಿಗೆ ಧನರಾಜ್ನನ್ನು ಇಲ್ಲಿನ ಕಾರಾಗೃಹಕ್ಕೆ ಬಿಟ್ಟು ಅದೇ ವಾಹನದಲ್ಲಿ ಬೆಳಗಾವಿಗೆ ಒಯ್ದರು.