ಹುಬ್ಬಳ್ಳಿ : ಉತ್ತರ ಕರ್ನಾಟಕ ಪ್ರತಿಷ್ಠಿತ NABL ಪ್ರಮಾಣ ಪತ್ರ ಹೊಂದಿದ ( Karnataka material testing and research centre Hubli) 2025-2027 ಸಾಲಿಗೆ ಕೇಂದ್ರದ ನೂತನ ಅಧ್ಯಕ್ಷರಾಗಿ ಜಯಪ್ರಕಾಶ್ ತೆಂಗಿನಕಾಯಿ ಆಯ್ಕೆಯಾಗಿದ್ದಾರೆ .
ಉಪಾಧ್ಯಕ್ಷರಾಗಿ ಮಲ್ಲೇಶ್ ಜಾಡರ್, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ತೋಳನವರ, ಸಹ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ್ ಗೋರನಕೊಳ್ಳ, ಕೋಶಾಧ್ಯಕ್ಷರಾಗಿ ಶಿವರಾಂ ಹೆಗಡೆ, ಕಾರ್ಯಕಾರಿಣಿ ಸದಸ್ಯರಾಗಿ ನಿಂಗಣ್ಣ ಬಿರಾದಾರ್, ವಿಶ್ವನಾಥ್ ಗೌಡರ, ಬಿ ಎಂ ಬೆನಕಪ್ಪದ, ಕಿರಣ್ ಮೊಕರೆ ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆಂದು ಎಂದು ಚುನಾವಣಾ ಅಧಿಕಾರಿ ಸುರೇಶ್ ಟಕ್ಕರ್ ಅವರು ದಿ. 29ರಂದು ಜರುಗಿದ KMTRC ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಚುನಾವಣಾ ಫಲಿತಾಂಶವನ್ನು ಘೋಷಣೆ ಮಾಡಿದರೆಂದು ಪರೀಕ್ಷಣ ಕೇಂದ್ರದ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.