ಹುಬ್ಬಳ್ಳಿ : ಮುಂಬೈನಿಂದ ಹಾವೇರಿ ಕಡೆಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಸಬಾಪೇಟ ಪೊಲೀಸರು ಬಂಧಿಸಿದ್ದಾರೆ.

ಪರೀಜ್ ಖಾನ್, ಸಲ್ಮಾನ್ ಖಾನ್ ಎಂಬಿಬ್ಬರನ್ನು
ಬಂಧಿಸಿದ ಕಸಬಾಪೇಟ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೇತೃತ್ವದ ತಂಡವು ಬಂಧಿತ ಆರೋಪಿತರಿಂದ 15.4 ಕೆಜಿ ಗಾಂಜಾ, 3 ಮೊಬೈಲ್ ಫೋನ್ ಗಳು, ಕೃತಕ್ಕೆ ಬಳಸಿದ ಒಂದು ಕಾರ್ ವಶಪಡಿಸಿಕೊಂಡಿದ್ದು, ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.




