*ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ / ಮತ್ತೆ 11 ವಿದ್ಯಾರ್ಥಿಗಳ ಉತ್ತಮ ಸಾಧನೆ*
ಹುಬ್ಬಳ್ಳಿ: ನಗರದ ಭೈರಿದೇವರಕೊಪ್ಪದಲ್ಲಿರುವ ಪ್ರತಿಷ್ಠಿತ ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎ.ವಿದ್ಯಾಲಕ್ಷ್ಮೀ ಇಡೀ ರಾಜ್ಯಕ್ಕೇ ವಿಜ್ಞಾನ ವಿಭಾಗದಲ್ಲಿ ಟಾಪರ್ ಅಗುವ ಮೂಲಕ ಕಾಲೇಜಿನ ಪ್ರತಿಷ್ಠೆಯ ಕಿರೀಟಕ್ಕೆ ದೊಡ್ಡ ಗರಿ ಸಿಕ್ಕಿಸಿದ್ಧಾರೆ.
ವಿಜ್ಞಾನ ವಿಷಯದ ಒಟ್ಟು 600 ಅಂಕಗಳಿಗೆ ಹಿಂದಿ ವಿಷಯ ಒಂದನ್ನು ಹೊರತುಪಡಿಸಿ ಉಳಿದ ಎಲ್ಲ ವಿಷಯಗಳಿಗೆ 100ಕ್ಕೆ 100 ಅಂಕಗಳೊಂದಿಗೆ 598 ಅಂಕಗಳನ್ನು ಪಡೆದು ಈ ಅಪರೂಪದ ಸಾಧನೆ ಮಾಡಿದ್ದಾಳೆ.
2019 ರಿಂದ ಕಾಲೇಜು ಪ್ರತಿಶತ 100 ರಷ್ಟು ಫಲಿತಾಂಶವನ್ನು ಪಡೆಯುತ್ತಾ ಬಂದಿದ್ದು
ಕಾಲೇಜಿನ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ವಿದ್ಯಾಲಕ್ಷ್ಮೀಗೆ ಕಾಲೇಜಿನ ವತಿಯಿಂದ ಒಂದು ಲಕ್ಷ ರೂ ಚೆಕ್ ಮೂಲಕ ನೀಡಲಾಗಿದೆ.
ಕಾಲೇಜಿನ ಆದಿತ್ಯಾ ಅವಸೇರಕರ (594) ಮತ್ತು ಸಹನಾ ಈಳಗೇರ (594) 5ನೇ ರ್ಯಾಂಕ್, ಕೃಪಾ ವಡೊನಿ (593) ಹಾಗೂ ಸಂಕಲ್ಪ ಕುಂತೆ (593) 6ನೇ ರ್ಯಾಂಕ್, ಅನಿರುದ್ಧ ಕುಲಕರ್ಣಿ (591), ಶ್ರೇಯಾ ಗೌಡರ್ (591) ಹಾಗೂ ವೈಷ್ಣವಿ ಕುರಿ (591) 8ನೇ ರ್ಯಾಂಕ್. ಕಿರಣ ತೊಳೆ (590) ಮತ್ತು ಸಮೀದ್ ಟಕ್ಕೆ (590) 9ನೇ ರಾಂಕ್. ರಮ್ಯಾ ಕಾಕೋಳ (589) ಮತ್ತು ಸಾಗರ ಗೌರನ್ನವರ (589) 10ನೇ ಸ್ಥಾನ ಪಡೆದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಚೌಗಲಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅನಿಲ್ ಕುಮಾರ್ ಚೌಗಲಾ,ಕಾರ್ಯಧ್ಯಕ್ಷೆ ಶ್ರೀದೇವಿ ಅ.ಚೌಗಲಾ, ಕಾಲೇಜಿನ ಪ್ರಾಚಾರ್ಯ ಡಾ. ಆನಂದ ಮುಳಗುಂದ, ಸಂಸ್ಥೆಯ ನಿರ್ದೇಶಕರಾದ ಗಂಗಾಧರ ಕುಮಡೊಳ್ಳಿ, ಡಾ. ರಮೇಶ ಬಂಡಿವಾಡ ಮುಂತಾದವರು ವಿದ್ಯಾರ್ಥಿನಿಗೆ ಚೆಕ್ ನೀಡಿ ಅಭಿನಂದಿಸಿದರು.
ವಿದ್ಯಾಲಕ್ಷ್ಮಿ ಪ್ರಾಥಮಿಕ ಹಂತದಿಂದಲೂ ಓದಿನಲ್ಲಿ ಮುಂದೆ ಇದ್ದ ವಿದ್ಯಾರ್ಥಿನಿ. ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಶೇಕಡಾ 97 ರಷ್ಟು ಅಂಕ ಪಡೆದಿದ್ದಳು. ತಂದೆ ಎಸ್. ಅಖಿಲೇಶ್ವರನ್ ಹಿರಿಯ ಸೆಕ್ಷನ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಹ ತಮಿಳುನಾಡು ರಾಜ್ಯದವರಾದ ಇವರು 2002 ರಿಂದ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ.
ಧಾರವಾಡ ಜಿಲ್ಲೆ ಈ ಬಾರಿ 23ನೇ ಸ್ಥಾನ ಪಡೆದಿದ್ದು,ಪೇಡೆನಗರಿಯ ಕೆ.ಇ. ಬೋರ್ಡ್ ವಿದ್ಯಾರ್ಥಿನಿ ರವಿವಾರ ಲಮಾಣಿ ಕಲಾ ವಿಭಾಗದಲ್ಲಿ 595 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯಳಾಗಿ ಸಾಧನೆ ಪುಟ ಸೇರಿದ್ದಾಳೆ.