ಹುಬ್ಬಳ್ಳಿ : ಕನ್ನಡ ರಂಗಭೂಮಿಯ ಪ್ರಸಿದ್ಧ ನಟ ಯಶವಂತ ಸರದೇಶಪಾಂಡೆ(60) ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕಿತ್ಸೆ ಫಲಿಸಿದೆ ಮೃತರಾಗಿದ್ದಾರೆ .
ಗುರು ಸಂಸ್ಥೆ ಬ್ಯಾನರ್ ಅಡಿ ಆಲ್ ದಿ ಬೆಸ್ಟ್, ರಾಶಿ ಚಕ್ರ, ಸಹಿ ರೀ ಸಹಿ, ದಿಲ್ ಮಾಂಗೆ ಮೋರ್ ಮುಂತಾದ ನಾಟಕಗಳ ರಾಜ್ಯದಲ್ಲಿ ಅಲ್ಲದೇ ವಿದೇಶದಲ್ಲಿ ಕೂಡ ಪ್ರೇಕ್ಷಕರನ್ನ ನಗೆಗಡಲಲ್ಲಿ ತೇಲಿಸಿದ್ದರು. ಯದ್ವಾ-ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳ ನಟ, ಕೆಲವು ಧಾರಾವಾಹಿಗಳ ಸಂಭಾಷಣಾಕಾರ, ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ, ಅಲ್ಲದೆ ಕಮಲ್ ಹಾಸನ್ – ರಮೇಶ್ ಜೊತೆ ರಾಮಶಾಮಭಾಮ ಚಲನಚಿತ್ರದಲ್ಲಿ ಅಭಿನಯಸಿ ಹೆಚ್ಚು ಜನಪ್ರಿಯವಾದವರು.
’ರಾಶಿ ಚಕ್ರ’ ನಗೆ ನಾಟಕದಲ್ಲಿ ಸುಮಾರು ೨ ಗಂಟೆಗಳ ಕಾಲ ಪ್ರೇಕ್ಷಕರನ್ನು ನಕ್ಕು ನಗಿಸುವ ಏಕವ್ಯಕ್ತಿ ಅಭಿನಯ. ದೃಶ್ಯರೂಪದಲ್ಲಿ ವಿಡಿಯೋ ಪ್ರದರ್ಶನಗಳ ಮೂಲಕ ಮಾಡಿದ ರಂಗ ಕ್ರಾಂತಿ ಮಾಡಿದ ಇವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿಯಲ್ಲಿ ಜನಿಸಿದವರು.
ಹೆಗ್ಗೋಡಿನ ನಿನಾಸಂ ನಾಟಕ ಸಂಸ್ಥೆಯಿಂದ ಡಿಪ್ಲೊಮ ಪಡೆದು ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ನಾಟಕ ರಚನೆ, ಚಲನ ಚಿತ್ರ ಸಂಭಾಷಣೆಯ ವಿಶೇಷ ತರಬೇತಿ ಪಡೆದಿದ್ದರು. ಹುಬ್ಬಳ್ಳಿ ಮುರಾರ್ಜಿ ನಗರ ಬಳಿ ರಂಗ ಕೇಂದ್ರ ಸ್ಥಾಪನೆ ಮಾಡಿದ್ದಾರೆ.
ಅಂಧಯುಗ, ಇನ್ಸ್ಪೆಕ್ಟರ್ ಜನರಲ್, ಮಿಡ್ಸಮರ್ ನೈಟ್ಸ್ಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ಅರವತ್ತಕ್ಕೂ ಹೆಚ್ಚು ನಾಟಕಗಳ ನಿರ್ದೇಶನ ಮಾಡಿದ್ದಾರೆ .
ಮುಂದಿನ ತಿಂಗಳು 18ರಂದು ಖ್ಯಾತ ಕೊಳಲು ವಾದಕ ಪ್ರವೀಣ ಗೋಡ್ಖಿಂಡಿಯವರ ಜತೆ ಕೊಳಲು ಎಂಬ ಕಾಮಿಡಿ ನಾಟಕ ಸಿದ್ಧತೆಯಲ್ಲಿ ಇದ್ದಾಗಲೇ ಇಹ ಲೋಕ ತ್ಯಜಿಸಿದ್ದಾರೆ.
ನಿನ್ನೆ ಬೆಳಗ್ಗೆ ತಾವು ಮಾಡುತ್ತಿರುವ ಈ ಹೊಸ ಪ್ರಯೋಗದ ಕುರಿತು ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು.