*ಧಮ್ ಇದ್ದರೆ ವಿಜಯೇಂದ್ರ ರಾಜೀನಾಮೆ ನೀಡಲಿ : ಯತ್ನಾಳ್ ಸವಾಲು/ ಮೂರುಸಾವಿರ ಮಠಕ್ಕೆ ಭೇಟಿ ನೀಡಿದ ವಿಜಯಪುರ ಶಾಸಕ*
ಹುಬ್ಬಳ್ಳಿ : ಎಲ್ಲಿಯವರೆಗೂ ಬಿಜೆಪಿ ಒಂದು ಕುಟುಂಬದಿಂದ ಮುಕ್ತಿ ಹೊಂದುವುದಿಲ್ಲವೊ ಅಲ್ಲಿಯವರೆಗೆ ಆ ಪಕ್ಷಕ್ಕೆ ಕಾಲಿಡುವ ಪ್ರಶ್ನೆಯೇ ಇಲ್ಲ ಎಂದು ವಿಜಯಪುರ ಶಾಸಕ, ಬಿಜೆಪಿಯಿಂದ ಉಚ್ಚಾಟನೆ ಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಮೂರುಸಾವಿರ ಮಠದ ಪೀಠಾಧಿಪತಿಗಳ ಭೇಟಿ ಮಾಡಿ ಆಶೀರ್ವಾದ ಪಡೆದು ಮಾತನಾಡಿದ ಅವರು ಯಡಿಯೂರಪ್ಪ ಕುಟುಂಬದ ಹೆಸರು ಹೇಳದೇ ಟಾಂಗ್ ನೀಡಿ,ಆ ಕುಟುಂಬ ಒಳ್ಳೇಯ ರೀತಿ ಇದಿದ್ದರೆ ನಾನು ಗೌರವ ಕೊಡುತ್ತಿದ್ದೆ. ಕುಟುಂಬದಿಂದ ಪಕ್ಷ ಮುಕ್ತವಾದರೆ ಬಿಜೆಪಿಗೆ ಹೋಗುತ್ತೇನೆ. ಬೇಕಾದಲ್ಲಿ ವಿಜಯೇಂದ್ರ ಧಮ್ ರಾಜಿನಾಮೆ ನೀಡಲಿ, ನಾನೂ ರಾಜಿನಾಮೆ ಕೊಡುತ್ತೇನೆ. ಚುನಾವಣೆಗೆ ಹೋಗೋಣ. ನೇರವಾಗಿ ಮಾತನಾಡಲಿ ಹಂದಿಗಳ ಜತೆ
ಮಾತನಾಡಿಸುವುದನ್ನು ಬಿಡಲಿ ಎಂದು ಸವಾಲು ಹಾಕಿದರು.
ಬಸವ ಜಯಮೃತ್ಯುಂಜಯ ಸ್ವಾಮೀಜಿ ನನ್ನ ಪರವಾಗಿ ಮಾತನಾಡಿದ್ದರಲ್ಲಿ ಏನು ತಪ್ಪಿದೆ. ಶ್ರೀಗಳು ಹಿಂದೆ ಲಕ್ಷ್ಮೀ ಹೆಬ್ಬಾಳಕರ್, ವಿನಯ ಕುಲಕರ್ಣಿ ಸೇರಿದಂತೆ ಹಲವರ ಪರ ಮಾತನಾಡಿದ್ದಾರೆ. ಯಾವ ಟ್ರಸ್ಟ್ ಅದು, ಟ್ರಸ್ಟಿನಲ್ಲಿರುವವರು ಯಾರು ಎಂಬುದನ್ನು ಅವರ ಬಗ್ಗೆ ಮಾಹಿತಿ ತೆಗೆಯಿರಿ. ಹುಣಸೀಕಟ್ಟಿ ತಮ್ಮ ಕುಟುಂಬದ ಟ್ರಸ್ಟ್ ಮಾಡಿಕೊಂಡಿದ್ದಾರೆ ಎಂದರು.
ನಾನು ಒಳ್ಳೆಯವರಿಗೆ ಒಳ್ಳೆಯವನು, ದುಷ್ಟರಿಗೆ ದುಷ್ಟ ಎಂದು ಹೇಳಿದ ಅವರು,ಮೂರುಸಾವಿರ ಮಠದ ಪೂಜ್ಯರ ಆಶೀರ್ವಾದ ಪಡೆದು, ಸಿದ್ದೇಶ್ವರ ದೇವಸ್ಥಾನದ ಟ್ರಸ್ಟ್ ವತಿಯಿಂದ ಸಿದ್ದೇಶ್ವರ ಶಿವಾನುಭವ ಮಂಟಪ, ಯಾತ್ರಿನಿವಾಸ ನಿರ್ಮಿಸಿದ್ದು ಆ ಒಂದು ಕಾರ್ಯಕ್ರಮಕ್ಕೆ ಕರೆಯಲು ಆಗಮಿಸಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಅವರು ಹೇಳಿದರು.