*ತಂದೆಯ ಹೆಸರಲ್ಲಿ ಅಭೂತಪೂರ್ವ ಪಂದ್ಯಾವಳಿ ಆಯೋಜಿಸಿದ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರ*
ಹುಬ್ಬಳ್ಳಿ : ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಆವೃತ್ತಿ ಆರಂಭದಿಂದಲೇ ರೋಚಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದು, ಅದೇ ರೀತಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರು ತಮ್ಮ ತಂದೆ ಸಹದೇವ ಯ ಹಿರೇಕೆರೂರ ಇವರ ಸ್ಮರಣಾರ್ಥವಾಗಿ ನೆಹರು ಕ್ರೀಡಾಂಗಣದಲ್ಲಿ ನಡೆದ ಹುಬ್ಬಳ್ಳಿ ಪ್ರೀಮಿಯರ್ ಲೀಗ್ ಸೀಸನ್- 2 (HPL) ಕೂಡ ಹಲವು ತೀವ್ರ ರೋಚಕ ಪಂದ್ಯಗಳು ನಡೆದು ಅಂತಿಮವಾಗಿ ಎಫ್ಎಂ ಇಲೆವೆನ್ ತಂಡ ಒಂದೂವರೆ ಲಕ್ಷ ರೂಪಾಯಿ ನಗದು ಬಹುಮಾನ ಪಡೆದು ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಹೊಸೂರಿನ ಶ್ರೀ ವೀರಮಾರುತಿ ಕ್ರಿಕೆಟ್ ಕ್ಲಬ್, ಹಾಗೂ ಚೇತನ್ ಸಹದೇವ ಹಿರೇಕೆರೂರ ಸ್ಪೋಟ್ಸ್ ಕ್ಲಬ್ ವತಿಯಿಂದ ನಡೆದ ಐದು ದಿನಗಳ ಪಂದ್ಯಾವಳಿಯ ಅಂತಿಮ ಮುಖಾಮುಖಿಯಲ್ಲಿ ವಿಜೇತ ಎಫ್ಎಂ ಇಲೆವೆನ್ ಕಿತ್ತೂರ ಸ್ಟಾರ್ಸ್ ತಂಡವನ್ನು 31ರನ್ನುಗಳಿಂದ ಹಿಮ್ಮೆಟ್ಟಿಸಿ ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ವಿಜೇತ ತಂಡ ನಿಗದಿತ 8ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 90ರನ್ ಗಳಿಸಿದರೆ, ಕಿತ್ತೂರ ಸ್ಟಾರ್ಸ್ 59ಕ್ಕೆ ಆಲೌಟ್ ಆಯಿತು.
ರನ್ನರ್ ಅಪ್ ತಂಡ 75000/ ನಗದು ಪುರಸ್ಕಾರ ಪಡೆಯಿತು.
ಪಂದ್ಯ ಶ್ರೇಷ್ಠ ಅರ್ಜುನ್ ಭೋಸ್ಲೆ. ಆಕ್ಟಿವಾ ಹೊಂಡಾ ಬೈಕ್ ಹಾಗೂ ಬೆಸ್ಟ್ ಬ್ಯಾಸ್ಟ್ ಮ್ಯಾನ್ ಇಂಚಿನ ಟಿವಿ ತಮ್ಮದಾಗಿಸಿಕೊಂಡರು.ಬಸ್ಟ್ ಬೌಲರ್ ಗೌರವಉಮೇಶ್ ಗವನರ್ ಪಾಲಾದರೆ, ಬೆಸ್ಟ್ ಪಿಲ್ಡರ್ ಆಗಿ ದೇವರಾಜ್ ಕೋಟಿ ಹೊರೆ ಹೊಮ್ಮಿದರು.
ದಿ.19ರಿಂದ ಐದು ದಿನಗಳ ರಕಾಲ ನಡೆದ ಪಂದ್ಯಾವಳಿಯಲ್ಲಿ ಭರಪೂರ ಮನರಂಜನೆ ಇತ್ತಲ್ಲದೆ ಶಾಸಕ ಮಹೇಶ ತೆಂಗಿನಕಾಯಿ, ಕಾಂಗ್ರೆಸ್ ಅಧ್ಯಕ್ಷರಾದ ಅನಿಲಕುಮಾರ ಪಾಟೀಲ್, ಅಲ್ತಾಫ್ ಹಳ್ಳೂರ, ಪಾಲಿಕೆ ಮಾಜಿ ಸದಸ್ಯ ಶಿವಣ್ಣ ಹಿರೇಕೆರೂರ, ಸಮತಾ ಸೇನಾ ರಾಜ್ಯಾಧ್ಯಕ್ಷರಾದ ಗುರುನಾಥ್ ಉಳ್ಳಿಕಾಶಿ, ಸಂಭಾಜಿ ಢಳವಿ, ಮರಾಠ ಸಮಾಜದ ಅಧ್ಯಕ್ಷರಾದ ಸುನಿಲ್ ಢಳವಿ ವಕೀಲರಾದ ಎಸ್.ಎಸ್.ಅಕ್ಕಿ, ದೇವೇಂದ್ರ ಹರಿವಾಣ ರಾಜು ಮಾನೆ,ಭಾಷಾ ಠಾಕಿವಾಲೆ ಆಲ್ಬರ್ಟ್ ಮುಕ್ತಿಯಾರ ದೀಪಕ ಬೇವಿನಕಟ್ಟಿ
ಮುಂತಾದವರು ಉದ್ಘಾಟನೆ, ಪ್ರಶಸ್ತಿ ವಿತರಣೆಗೆ ಸಾಕ್ಷಿಯಾದರು.
” ಮಜಹಬ್ ನಹೀಂ ಸಿಖಾತಾ ಆಫೀಸ್ ಮೆ ಬೈರ ರಖನಾ//
ಹಿಂದೀ ಹೈ ಹಮ್ ಹಿಂದೂಸ್ತಾನ ಹಮಾರಾ// ಎಂಬ ಕವಿ ಇಕ್ಬಾಲ್ ಅವರು ತಮ್ಮ ಸಾಲುಗಳಲ್ಲಿ ಹೇಳಿದಂತೆ ಧರ್ಮ ನಮಗೆ ಯಾರಿಗೂ ವೈರತ್ವ ಕಲಿಸಿಯೇ ಇಲ್ಲ.ನಾವೆಲ್ಲರೂ ಭಾರತೀಯರು, ಹಿಂದೂಸ್ತಾನ ನಮ್ಮ ದೇಶ. ಈ ದೇಶದ ಉತ್ಕರ್ಷೆಗೆ ಶ್ರಮಿಸಬೇಕು ಎಂಬ ಮಾತುಗಳಿಂದ ಪ್ರಭಾವಿತರಾಗಿ ಪಾಲಿಕೆ ಸದಸ್ಯರಾಗಿ ಭರವಸೆ ಹುಟ್ಟಿಸಿರುವ ಚೇತನ್ ಹಿರೇಕೆರೂರು ಎರಡನೇ ಪಂದ್ಯಾವಳಿ ಅಭೂತಪೂರ್ವವಾಗಿ ನೆರವೇರಿಸಿದ್ದು ಮೂರನೇ ಪಂದ್ಯಾವಳಿ ಈಗಿನಿಂದಲೇ ಕುತೂಹಲ ಮೂಡಿಸಿದೆ.