*ಆಗ್ರಾದಲ್ಲಿ ನೇಪಾಳ ವಿರುದ್ಧ ಮೂರು ಪಂದ್ಯಗಳ ಸರಣಿ*
ಹುಬ್ಬಳ್ಳಿ : ಆಗ್ರಾದಲ್ಲಿ 26ರಿಂದ ನಡೆಯಲಿರುವ ಭಾರತ ಮತ್ತು ನೇಪಾಳ ದಿವ್ಯಾಂಗ ತಂಡಗಳ ನಡುವೆ ನಡೆಯಲಿರುವ ಟಿ-20 ಸರಣಿಗೆ ಹುಬ್ಬಳ್ಳಿಯ ಮೂಲದ ಕ್ರಿಕೆಟ್ ಪಟು ಆಯ್ಕೆಯಾಗಿದ್ದಾರೆ.
ಹೌದು, ನಗರದ ಭೂಸಪೇಟೆ ಮೂಲದ ಮಹೇಶಕುಮಾರ ಗುರುಶಾಂತಪ್ಪ ಅಗಳಿ ಅವರೇ ಆಯ್ಕೆಯಾದ ಕ್ರೀಡಾಪಟುವಾಗಿದ್ದು ಆಗ್ರಾದಲ್ಲಿ ನಡೆಯುವ ಸರಣಿಗಾಗಿ ಈಗಾಗಲೇ ಪ್ರಯಾಣ ಬೆಳೆಸಿದ್ದಾರೆ. ಪ್ರಸಕ್ತ ರಾಷ್ಟ್ರೀಯ ಟಿ-20 ತಂಡಕ್ಕೆ ಆಯ್ಕೆಯಾದ ಕರ್ನಾಟಕ ರಾಜ್ಯದ ಏಕೈಕ ಆಟಗಾರ ಮಹೇಶ ಎಂಬುದು ವಿಶೇಷವಾಗಿದೆ.
ಮದ್ಯಮ ವೇಗದ ಬೌಲರ್ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸಮನ್ ಆಗಿರುವ ಅಗಳಿ ಈಗಾಗಲೇ ಮಲೇಶಿಯಾ, ಸಿಂಗಪುರ, ಶ್ರೀಲಂಕಾ ಮುಂತಾದ ರಾಷ್ಟ್ರಗಳ ನಡುವೆ ನಡೆದ ದಿವ್ಯಾಂಗ ಕ್ರಿಕೆಟ್ನಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಿದ್ದಾರೆ. ಪ್ರಸಕ್ತ 26,27 ಮತ್ತು 28ರಂದು ಮೂರು ಪಂದ್ಯಗಳಿಗೆ ಆಯ್ಕೆ ಆಗಿದ್ದಾರೆ.ಅಬ್ಬಾಸ ಅಲಿ ಟಿ.20 ತಂಡದ ಕೋಚ್ ಆಗಿದ್ದಾರೆ.
ನೇಪಾಳದೊಂದಿಗೆ ಟೆಸ್ಟ್ ಸರಣಿಯೂ ನಡೆಯಲಿದ್ದು, ಅದರಲ್ಲಿ ಬಾಗಲಕೋಟೆ ಮೂಲದ ಆನಂದ ಮಾದರ ಎಂಬುವವರು ಸ್ಥಾನ ಪಡೆದಿದ್ದಾರೆ.