ಧಾರವಾಡ: ಇದೇ ತಿಂಗಳು ಜನವರಿ 22ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ಪ್ರಾಣಪ್ರತಿಷ್ಠಾಪನೆ ಹಾಗೂ ಭವ್ಯ ಮಂದಿರ ಉದ್ಘಾಟನೆ ಆಗುತ್ತಿದ್ದು ಇಡೀ ಜಗತ್ತೇ ಕುತೂಹಲದಿಂದ ರಾಮಮಂದಿರ ಉದ್ಘಾಟನೆಯನ್ನ ನೋಡುತ್ತಿದೆ.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯಿಂದ ಪ್ರಭು ಶ್ರೀರಾಮನ ಪೂಜೆಗೆ ಕುರುಬರ ಕಂಬಳಿ ಹೋಗುತ್ತಿದೆ.
ಹೌದು ಇಂತಹೊಂದು ಸಂತಸದ ವಿಷಯ ಧಾರವಾಡ ಜಿಲ್ಲೆಯ ಪಾಲಿಗೆ ಹೆಮ್ಮೆ ಹಾಗೂ ಕೀರ್ತಿಯನ್ನು ತರುವಂತಿದೆ. ಮಂದಿರದ ಉದ್ಘಾಟನೆಗಾಗಿ ಧಾರವಾಡದ ಕಮಲಾಪುರ ಭಾಗದ ಪ್ರಗತಿಪರರು ಹಿರಿಯರು ಆಗಿರುವ ಸುಭಾಷ ಬಸಪ್ಪ ರಾಯಪ್ಪನವರ ಅವರು ಎರಡು ಕಂಬಳಿಗಳನ್ನು ರಾಮಮಂದಿರಕ್ಕೆ ಕೊಟ್ಟಿದ್ದಾರೆ.
ವಿಶ್ವ ಹಿಂದೂ ಪರಿಷತನ ಹಿರಿಯರಾಗಿರುವ
ಡಾ.ಎಸ್. ಆರ ರಾಮನಗೌಡರ ಹಾಗೂ ಮಾಜಿ ಮಹಾಪೌರರಾದ ಈರೇಶ ಅಂಚಟಗೇರಿ ಅವರಿಗೆ ಕಂಬಳಿಗಳನ್ನು ನೀಡಿದ್ದು, ಆ ಕಂಬಳಿಗಳನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಮೂಲಕ ಪೂಜೆಯ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನದ ಆಡಳಿತ ಮಂಡಳಿಗೆ ಶ್ರೀರಾಮನ ಉದ್ಘಾಟನೆ ಪೂಜೆಗೆ ಕಂಬಳಿಗಳನ್ನು ಬಳಸುವುದರಿಂದ ಉತ್ತರ ಕರ್ನಾಟಕದ ಕೊಡುಗೆ ಕೊಟ್ಟಂತೆ ಆಗಿದೆ.
ಈ ಸಂದರ್ಭದಲ್ಲಿ ಸೋಮಶೇಖರಗೌಡ ಪಾಟಿಲ, ಗುರುನಾಥ ಹೊನ್ನನ್ನವರ,
ಈರಪ್ಪ ಗೌಡಪ್ಪನವರ, ಎಲ್ಲಪ್ಪ ಹೊಟ್ಟಿ , ಉಳವಪ್ಪ ಅನಾಡ, ಚಂದ್ರು ಗುಮಗೋಳಮಠ, ಮುರುಗೇಶ ಬಾಳಗಿ,
ಈರಯ್ಯ ರಾಮಯ್ಯನವ,
ಬಸು ಬಾಳಗಿ, ನಿರ್ಮಲ ಕನ್ನಿನಾಯ್ಕರ ಇತರರು ಉಪಸ್ಥಿತರಿದ್ದರು.