*ಅನೇಕರಿಗೆ ಪಾಕೀಟ್ ಹಂಚಿಕೆ /ಮಠಗಳಲ್ಲೇ ಒಡಕು ಹುಟ್ಟಿಸುವ ಯತ್ನ / ನೇಹಾ ಸಾವು ರಾಜಕೀಯಕ್ಕೆ ಬಳಕೆ : ದಿಂಗಾಲೇಶ್ವರ ಸ್ವಾಮೀಜಿ ಗಂಭೀರ ಆರೋಪ*
ಹುಬ್ಬಳ್ಳಿ : ಲಿಂಗಾಯತ ಸ್ವಾಮೀಜಿಗಳ ಹಣೆಗೆ ಭಸ್ಮ ಹಚ್ಚುವ ಕೆಲಸಕ್ಕೆ ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಮುಂದಾಗಿದ್ದು ಮಠಗಳನ್ನೇ ಒಡೆದಾಳುವ ಕೃತ್ಯ ನಡೆಸುತ್ತಿದ್ದು ಅನೇಕ ಸ್ವಾಮೀಜಿಗಳಿಗೆ ಪಾಕೀಟ ಕೊಡುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ತಮ್ಮ ಬಳಿ ವಿಡಿಯೋ ಇರುವುದಾಗಿ ಧರ್ಮಯದ್ದ ಘೋಷಣೆ ಮಾಡಿ ಕಣದಿಂದ ಹಿಂದೆ ಸರಿದಿದ್ದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ನಾನು ಯಾವ ಪಕ್ಷದ ಪರ ಇಲ್ಲ. ಆದರೆ ಜೋಶಿ ಮಠಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆ.ನೇಹಾ ರಕ್ತದ ಮೇಲೆ ಚುನಾವಣೆ ನಡೆಸಲು ಮುಂದಾಗಿದ್ದಾರೆ.ಇದನ್ನು ಜನ ಗಮನಿಸಬೇಕಲ್ಲದೇ .ಲಿಂಗಾಯತರ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವರು ಲಿಂಗಾಯತರ ಅವನತಿಗೆ ಹುಟ್ಟಿರುವ ಶಕ್ತಿ ಎಂದು ಬಹಿರಂಗವಾಗೇ ಕಿಡಿ ಕಾರಿದ್ದಾರೆ.
ಜೋಶಿ ಸಂಸದರಾದ ನಂತರ ಮಠಗಳು,ನಮ್ಮ ಸಮುದಾಯದವರು ಅದಃಪತನವಾಗಿದ್ದಾರೆ.ಅವರನ್ನು ಸೋಲಿಸುವುದೇ ಗುರಿ ಎಂದರಲ್ಲದೇ ಜನ ತಮಗೆ ಹಾಕಿರುವ ಶಾಲುಗಳನ್ನು ಸ್ವಾಮೀಜಿಗಳಿಗೆ ಹಾಕುತ್ತಿದ್ದು,ಮಠಗಳಲ್ಲೇ ಒಡಕು ಹುಟ್ಟಿಸಿ ಗುರು ಶಿಷ್ಯರನ್ನು ಅಗಲಿಸುವ ಯತ್ನ ನಡೆಸಿದ್ದಾರೆಂದರು. ಭದ್ರಾಪುರದಲ್ಲಿ ಹಿರಿಯ ಸ್ವಾಮೀಜಿ ಭೇಟಿ ಮಾಡಿದ್ದಾರೆ. ನಮ್ಮ ಗುರು ಶಿಷ್ಯರನ್ನು ಅಗಲಿಸೋ ಕೆಲಸ ಮಾಡಿದರೆ ನಿಮ್ಮ ದಾಂಪತ್ಯವೂ ಅಗಲುವುದು ನಿಶ್ಚಿತ.ಜೋಶಿ ಅವರ ಸೋಲು ಖಚಿತ,ಸರ್ವೆಯಲ್ಲಿ ಇದು ಬಹಿರಂಗವಾಗಿದೆ ಎಂದರು. ಸ್ವಾಮೀಜಿ ಇಂದಿನ ಹೇಳಿಕೆಯ ಮುಖಾಂತರ ಧರ್ಮ ಯುದ್ಧದಲ್ಲಿ ಪಾಶುಪತಾಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.