ದಿ ಒವೆಲ್: ಪಂದ್ಯದ ಕೊನೆಯ ದಿನ 35 ರನ್ ಕಲೆ ಹಾಕಿ ಸರಣಿ ತನ್ನದಾಗಿಸಿಕೊಳ್ಳುವ ಆಂಗ್ಲರ ಕನಸನ್ನು ಭಾರತದ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಕನ್ನಡಿಗ ಪ್ರಸಿದ್ಧ ಕೃಷ್ಣ ಹುಸಿಯಾಗಿಸಿ ಆರು ರನ್ ಗಳ ಗೆಲುವು ತಂದು ಕೊಟ್ಟ ಪರಿಣಾಮ ಸರಣಿ ಸಮಬಲ ಕಂಡಿದೆ.
ತೆಂಡೂಲ್ಕರ್ – ಆ್ಯಂಡರ್ಸನ್ ಟೆಸ್ಟ್ ಸರಣಿ 2-2ರಲ್ಲಿ ಸಮವಾಗಿ ಶುಭಮನ್ ಗಿಲ್ ನೇತೃತ್ವದ ಪಡೆ ಕಮಾಲ್ ಮಾಡಿದೆ. ಇಂಗ್ಲಿಷ್ ತಂಡ ಐದನೇ ದಿನದಾಟದಲ್ಲಿ ಎರಡನೇ ಇನಿಂಗ್ಸ್ನಲ್ಲಿ 6 ವಿಕೆಟ್ಗೆ 339 ರನ್ ಆಟ ಮುಂದುವರೆಸಿತು. ಮೊದಲ ಓವರ್ ಪ್ರಸಿದ್ಧ ಕೃಷ್ಣಾ ಬೌಲ್ ಮಾಡಿದರು. ಈ ವೇಳೆ ಜೇಮಿ ಓವರ್ಟನ್ ಎರಡು ಬೌಂಡರಿ ಬಾರಿಸಿ ಅಬ್ಬರಿಸಿದರು. ಆದರೆ ಇನ್ನೊಂದು ತುದಿಯಿಂದ ಬೌಲಿಂಗ್ ಮಾಡಿದ ಸಿರಾಜ್ ಮೊನಚಾದ ದಾಳಿ ನಡೆಸಿದ ಪರಿಣಾಮವಾಗಿ ಜೇಮಿ ಸ್ಮಿತ್ ಧ್ರುವ ಜುರೇಲ್ಗೆ ಕ್ಯಾಚ್ ನೀಡಿದರು.
ಸ್ಮಿತ್ ಔಟ್ ಆಗುತ್ತಿದ್ದಂತೆ ಕ್ರೀಸ್ಗೆ ಬಂದ ಗಸ್ ಅಟ್ಕಿನ್ಸನ್ ಸಿರಾಜ್ ಅವರ ಎಸೆತವನ್ನು ತಪ್ಪಾಗಿ ಕಟ್ ಮಾಡಿದರು. ಚೆಂಡು ರಾಹುಲ್ ಅವರ ಮುಂದೆ ಬಿದ್ದಿದ್ದರಿಂದ ಬಚಾವ್ ಆದರು. ಟೀಮ್ ಇಂಡಿಯಾದ ಬೌಲರ್ಗಳು ಈ ಹಂತದಲ್ಲಿ ಬಿಗುವಿನ ದಾಳಿ ನಡೆಸಿದರು. ಜೇಮಿ ಓವರ್ಟನ್ ಅವರಿಗೆ ಮೊಹಮ್ಮದ್ ಸಿರಾಜ್ ತಮ್ಮ ಕೊನೆಯ ದಿನದಾಟದ ಎರಡನೇ ಓವರ್ನ ಐದನೇ ಎಸೆತದಲ್ಲಿ ಎಲ್ಬಿಡಬ್ಲ್ಯು ಬಲೆಗೆ ಕೆಡವಿದರು. ತನ್ಮಧ್ಯೆ ಪ್ರಸಿದ್ಧ ಜೆ. ಪಾಂಡೆ ಬೌಲ್ಡ್ ಮಾಡಿ ನಾಲ್ಕನೇ ವಿಕೆಟ್ ಪಡೆದರು.
ಅಂತಿಮವಾಗಿ ಸಿರಾಜ್ ಹದಿನೇಳು ರನ್ ಗಳಿಸಿ ಅಪಾಯಕಾರಿಯಾಗಿದ್ದ ಗೌಸ್ ಅಟಕಿನಸನ್ ಕ್ಲೀನ್ ಬೌಲ್ಡ್ ಮಾಡಿ ರೋಚಕ ಜಯ ತಂದುಕೊಟ್ಟರು.ಐದು ವಿಕೆಟ್ ಗೊಂಚಲನ್ನು ಕಿತ್ತು ಸಿರಾಜ್ ಪಂದ್ಯದ ವ್ಯಕ್ತಿಯಾದರೆ, ಬ್ರೂಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ನಾಯಕ ಗಿಲ್, ಕೆ.ಎಲ್.ರಾಹುಲ್, ಯಶಸ್ವಿ ಜೈಸ್ವಾಲ್, ರಿಷಬ್ ಪಂತ್, ವಾಷಿಂಗ್ಟನ್ ಸುಂದರ್, ಜಡೇಜಾ, ಮಹ್ಮದ್ ಸಿರಾಜ್, ಪ್ರಸಿದ್ಧ, ಆಕಾಶ ದೀಪ ಎಲ್ಲರ ಪಾಲಿಗೆ ಈ ಸರಣಿ ಸ್ಮರಣೀಯವಾಗಿದೆ.