ನಾಲ್ಕು ಕ್ಷೇತ್ರದ ಹುರಿಯಾಳು ಘೋಷಿಸಿದ ಎಐಸಿಸಿ*
ಹುಬ್ಬಳ್ಳಿ : ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಬಿಜೆಪಿಗಿಂತ ಮೊದಲೆ ರಾಜ್ಯದ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು , ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಮಾಜಿ ಮೇಲ್ಮನೆ ಸದಸ್ಯ ಮೋಹನ ಲಿಂಬಿಕಾಯಿಯವರನ್ನು ಅಂತಿಮಗೊಳಿಸಿದೆ.

ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮತಿಯ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ನಾಲ್ವರು ಅಭ್ಯರ್ಥಿಗಳ ಪಟ್ಟಿ ಇಂದು ಪ್ರಕಟಿಸಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಶಶಿ ಹುಲಿಕಂತೆಮಠ, ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಶರಣಪ್ಪ ಮಟ್ಟೂರ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಮಾಜಿ ಸದಸ್ಯ ಪುಟ್ಟಣ್ಣ ಅವರಿಗೆ ಟಿಕೆಟ್ ನೀಡಲಾಗಿದೆ.

ಬಿಜೆಪಿಯಿಂದ ಪಶ್ಚಿಮದಿಂದಲೇ ಗೆಲುವು ಸಾಧಿಸಿ ಮೇಲ್ಮನೆಗೆ ಬಲಗಾಲಿಟ್ಟಿದ್ದ ಮೋಹನ ಲಿಂಬಿಕಾಯಿ ಎಲ್ಲ ಜಿಲ್ಲೆಗಳಲ್ಲೂ ತಮ್ಮದೇ ಸಂಪರ್ಕ ಮತ್ತು ನೆಲೆ ಹೊಂದಿದ್ದು ಅಲ್ಲದೇ ಕಳೆದ ಅನೇಕ ತಿಂಗಳುಗಳಿಂದ ಪದವೀಧರರ ನೋಂದಣಿ ಕಾರ್ಯವನ್ನು ದೊಡ್ಡ ಪ್ರಮಾಣದಲ್ಲಿ ನಡೆಸಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದೆಯಲ್ಲದೇ ಗ್ಯಾರಂಟಿಯ ಪೈಕಿ ನಿರುದ್ಯೋಗಿಗಳಿಗೆ ನೀಡಿರುವ ವಿದ್ಯಾನಿಧಿ ಸಹ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಅದರಿಂದ ಮತ ಪರಿವರ್ತನೆಯಾಗುವ ಸಾಧ್ಯತೆ ಅಲ್ಪ ಇರುವ ಅಲ್ಲದೇ ನಾಲ್ಕು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಶಾಸಕರೇ ಇರುವುದರಿಂದ ಟಿಕೆಟ್ಗಾಗಿ ವ್ಯಾಪಕ ಪೈಪೋಟಿಯಿತ್ತು.
ಕಳೆದ ಬಾರಿ ಹುರಿಯಾಳಾಗಿದ್ದ ಕುಬೇರಪ್ಪ, ಅಖಿಲ ಭಾರತ ಶಿಕ್ಷಕ ಸಂಘಟನೆಯ ಮುಖಂಡ ಬಸವರಾಜ ಗುರಿಕಾರ, ಯುವ ಮುಖಂಡ ರಾಜು ಕುನ್ನೂರ, ರವಿಕುಮಾರ ಮಾಳಿಗೇರ, ದೇವಿಕಾ ಬಸವರಾಜ, ಡಾ.ಸಲೀಮ ಸೊನ್ನೆಖಾನ, ರಾಘವೇಂದ್ರ ಬಾಸೂರ, ರಾಜೇಶ್ವರಿ ಪಾಟೀಲ ಅನೇಕರು ಅರ್ಜಿ ಸಲ್ಲಿಸಿದ್ದರು.

ವರಿಷ್ಠರ ಉತ್ತಮ ಸಂಬಂಧ ಹೊಂದಿರುವ ಅಲ್ಲದೇ ಕ್ಷೇತ್ರದ ಮೇಲೆ ಹಿಡಿದ ಹೊಂದಿರುವ ಲಿಂಬಿಕಾಯಿ ಅವರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಈ ಬಾರಿ ಬಿಜೆಪಿ ಪಾಳೆಯಕ್ಕೆ ಆರಂಭಿಕ ಆಘಾತ ನೀಡಿ ಕಮಲ ವಶದಲ್ಲಿರುವ ಈ ಕ್ಷೇತ್ರ ಈ ಬಾರಿ ಮರಳಿ ಪಡೆಯಲು ತಂತ್ರಗಾರಿಕೆ ರೂಪಿಸಿದೆ.
ಬಿಜೆಪಿ ಪಾಳೆಯದಲ್ಲಿ ಆಕಾಂಕ್ಷಿಗಳ ಸಂಖ್ಯೆ 25ರ ಗಡಿ ದಾಟಿದ್ದು ಎರಡು ಬಾರಿ ಆಯ್ಕೆಯಾಗಿರುವ ಹಾಲಿ ಪರಿಷತ್ ಸದಸ್ಯ ಸಂಕನೂರ, ಬಿಜೆಪಿಯಲ್ಲಿ ಹಿರಿತನ ಹೊಂದಿರುವ ರಾಜ್ಯ ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪ್ರಖರ ಹಿಂದುತ್ವದ ಜಯತೀರ್ಥ ಕಟ್ಟಿ, ಕವಿವಿ ಮಾಜಿ ಸಿಂಡಿಕೇಟ್ ಸದಸ್ಯ ಸುಧೀಂದ್ರ ದೇಶಪಾಂಡೆ, ಭಾರತೀಯ ಆಹಾರ ನಿಗಮದ ಸದಸ್ಯ ಗದಗ ಮೂಲದ ರವಿ ದಂಡಿನ, ಪದವೀಧರ ವೇದಿಕೆಯ ಕಿರಣ ಉಪ್ಪಾರ, ಮಾಜಿ ಮೇಯರ್ ಶಿವು ಹಿರೇಮಠ, ಪಾಲಿಕೆ ಹಿರಿಯ ಸದಸ್ಯ ರಾಜಣ್ಣ ಕೊರವಿ, ಮಂಡ್ಯ ವಿವಿ ಸಿಂಡಿಕೇಟ ಸಿಂಡಿಕೇಟ್ ಸದಸ್ಯ ಶರಣಬಸಪ್ಪ ಯತ್ನಳ್ಳಿ,
ಹಂಪಿ ಕನ್ನಡ ವಿವಿ ಸಿಂಡಿಕೇಟ ಮಾಜಿ ಸದಸ್ಯ ಸುಭಾಸ ಸಿಂಗ ಜಮಾದಾರ,ಎಂಸಿಎ ಮಾಜಿ ನಿರ್ದೇಶಕ ವಿರೇಶ ಸಂಗಳದ ವೀರಶೈವ ಲಿಂಗಾಯತ ಮಹಾಸಭಾದ ಮುಖಂಡ ಶಶಿಶೇಖರ ಡಂಗನವರ ಡಂಗನವರ ಮುಂತಾದವರ ದೊಡ್ಡ ಸಾಲೇ ಇದೆ.



