*‘ಶಾಖಾಹಾರಿ’ಯಲ್ಲಿ ಮಿಂಚಿದ ವಿನಯ /ಇನ್ನಷ್ಟು ಚಾಲೆಂಜಿಂಗ್ ಪಾತ್ರದ ಕನಸು*
ಹುಬ್ಬಳ್ಳಿ : 2016 ರಲ್ಲಿ ಸುನಿಲ್ ಪುರಾಣಿಕ್ ಅವರ ’ಮಹಾಸತಿ’ ಎಂಬ ಉತ್ತರ ಕರ್ನಾಟಕ ಸೊಗಡಿನ ಧಾರಾವಾಹಿಗೆ ಬಲಗಾಲಿಡುವ ಮೂಲಕ ಕಿರುತರೆಗೆ ಎಂಟ್ರಿ ಕೊಟ್ಟ ಹುಬ್ಬಳ್ಳಿ ಮೂಲದ ಹುಡುಗನೊಬ್ಬ ಇಂದು ಹಿರಿತೆರೆಗೂ ಕಾಲಿಟ್ಟು ವಾಣಿಜ್ಯ ರಾಜಧಾನಿಗೆ ಹೆಸರು ತಂದಿದ್ದಾರೆ.
ಹೌದು. ಹುಬ್ಬಳ್ಳಿ ಗೋಕುಲ ರಸ್ತೆಯ ವಿನಯ್ ಯು.ಜೆ ಅವರೆ ಇತ್ತೀಚೆಗೆ ತೆರೆಕಂಡ ಶಾಖಾಹಾರಿ ಚಿತ್ರದಲ್ಲಿನ ಅವರ ಅಭಿನಯ ಗಮನ ಸೆಳೆದಿದೆಯಲ್ಲದೆ ಕನ್ನಡ ಚಿತ್ರರಂಗಕ್ಕೆ ಒಂದು ಉತ್ತಮ ಸಿನಿಮಾ ಸಾಲಿಗೆ ನಿಂತಿದ್ದು ನಿಜಕ್ಕೂ ಹಿರಿಮೆಯ ವಿಷಯ.
ಸಂದೀಪ ಸುಂಕದ ನಿರ್ದೇಶನದ ಶಾಖಾಹಾರಿ ಸಿನಿಮಾದಲ್ಲಿ ರಂಗಾಯಣ ರಘು ಅವರೊಂದಿಗೆ ಹಲವರು ಹೊಸಬರಿದ್ದರೂ ಅದರಲ್ಲಿನ ಕತೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು ವಿನಯ ಅಭಿನಯವೂ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಕಿರುತೆರೆಯಲ್ಲಿ ಜೀವನದಿ, ಮಹಾದೇವಿ, ಲಕ್ಷ್ಮೀ ಸ್ಟೋರ್ಸ್,
ಕನ್ನಡತಿ, ಧಾರವಾಡದಲ್ಲೊಂದು ಲವ್ ಸ್ಟೋರಿಯಲ್ಲಿ
ನಾಯಕನಾಗಿ ಅಭಿನಯಿಸಿದ್ದಾರೆ.ಧಾರವಾಡದ ಲವ್ ಸ್ಟೋರಿಯ ಚಿತ್ರೀಕರಣ ಹುಬ್ಬಳ್ಳಿಯ ಸುತ್ತಮುತ್ತ ಆಗಿದ್ದು, ಈ ಭಾಗದ ಹಲವು ಕಲಾವಿದರು ಕಿರು ತೆರೆಗೆ ಪರಿಚಯವಾದರು. ಲಾಕ್ ಡೌನ್ ಸಮಯದಲ್ಲಿ ಈ ಧಾರಾವಾಹಿ ಪ್ರಸಾರವಾಗಿ ಮೆಚ್ಚುಗೆ ಪಡೆದಿದ್ದು ಇದೀಗ್ ಯೂಟ್ಯೂಬ್ನಲ್ಲೂ ಈ ಧಾರಾವಾಹಿ ನೋಡಬಹುದು. ರಾಜಾರಾಣಿ ಎಂಬ ರಿಯಾಲಿಟಿ ಶೋದಲ್ಲೂ
ಸಹ ಉತ್ತರ ಕರ್ನಾಟಕ ಶೈಲಿಯ ಮಾತಿನಿಂದ ಪ್ರೇಕ್ಷಕರನ್ನು
ವಿನಯ್ ಗೆದ್ದಿದ್ದಾರೆ.
ಶಾಲಾ-ಕಾಲೇಜು ದಿನಗಳಲ್ಲಿ ಧಾರವಾಡ ರಂಗಾಯಣದಲ್ಲಿ ನಡೆಯುವ ನಾಟಕಗಳನ್ನು ನೋಡುತ್ತಲೇ ತಾನು ದೊಡ್ಡ ಪರದೆಯ ಮೇಲೆ ಕನಸು ಕಾಣುತ್ತಲೇ ಬಂದ ಇವರು ಬಿವಿಬಿಯಲ್ಲಿ ಎಂಜಿನಿಯರಿಂಗ್ ಕಲಿತರೂ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಬಣ್ಣದ ಬದುಕಿನ ಬೆನ್ನು ಹತ್ತಿದವರು.
ಕಿರುತೆರೆಯ ಯಶಸ್ಸು ವಿನಯ್ಗೆ ಸಿನಿಮಾದಲ್ಲಿ ನಟಿಸಬೇಕೆಂಬ ಹಂಬಲಕ್ಕೆ ಇಂಬು ನೀಡಿದ್ದು. ಸಮಾನ ಮನಸ್ಕರ ಬಳಿ ವಿಷಯ ಪ್ರಸ್ತಾಪಿಸಿ. ಅವಕಾಶಕ್ಕೆ ಪ್ರಸ್ತಾಪಿಸಿದ್ದು ಅಲ್ಲದೇ ಕಿರುತೆರೆಯಲ್ಲಿ ನಾಯಕನಾಗಿ ನಟಿಸಿದ್ದರಿಂದ ಬಿಗ್ ಸ್ಕ್ರೀನ್ಗೆ ಸೇರುವುದು ಕಷ್ಟವಾಗಲಿಲ್ಲ. ನಂತರ ಸಂದೀಪ್ ಸುಂಕದ ಅವರ ಪರಿಚಯ ಸಿನಿಮಾಕ್ಕೆ ಪರಿಚಯಿಸಿತು. ಸಂದೀಪ ಹೊಸ ಸಿನಿಮಾದ
ಆಲೋಚನೆಯಲ್ಲಿದ್ದರು. ತಮ್ಮ ಸಿನಿಮಾದಲ್ಲಿನ ಒಂದು ಪಾತ್ರಕ್ಕೆ
ನೀನು ಮ್ಯಾಚ್ ಆಗ್ತೀಯಾ ಎಂದು ಹೇಳಿದರಲ್ಲದೇ ಅವಕಾಶದ ಬಾಗಿಲು ತೆರೆಯಿತು.
ಕನಸು ನನಸಾಯಿತು:
ಬಹುದಿನಗಳ ನನ್ನ ಕನಸು ಸಿನಿಮಾದಲ್ಲಿ ನಟಿಸುವ ಮೂಲಕ ನನಸಾಗಿದೆ.ಶಾಖಾಹಾರಿಯ ಪಾತ್ರ ಜನಮನ ಮುಟ್ಟಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಾಲೆಂಜಿಂಗ್ ಪಾತ್ರ ಮಾಡುವ ಆಸೆ ಎಂಬ ಮನದ ತುಡಿತ ವಿನಯ ಬಿಚ್ಚಿಡುತ್ತಾರೆ.
ಕಿರುತೆರೆಯಿಂದ ಸಿನಿಮಾಗೆ ಬರಬೇಕಾದರೆ ಒಂದಿಷ್ಟು ಕಲಿಕೆ
ಅಗತ್ಯ ಇತ್ತು, ಅದರಲ್ಲಿ ವಿನಯ್ ಪಳಗಿದರು. ಹೀಗಾಗಿ ಸಿನಿಮಾದ
ಎಲ್ಲ ಆಯಾಮ ಇವರಿಗೆ ಪರಿಚಯವಾಯಿತು. ಸಿನಿಮಾದಲ್ಲಿ ಇವರ ನಟನೆ ಉತ್ತಮವಾಗಿ ಮೂಡಿ ಬಂದಿದೆ. ಜನರು ಇವರ ನಟನೆ ಮೆಚ್ಚಿಕೊಂಡದ್ದು ನಮಗೂ ಖುಷಿಯ ಸಂಗತಿ ಎಂದು ನಿರ್ದೇಶಕ ಸುಂಕದ ವಿನಯ ಬೆನ್ನು ತಟ್ಟುತ್ತಾರೆ.
ಉತ್ತರ ಕರ್ನಾಟಕದ ಈ ಪ್ರತಿಭೆಗೆ ಮತ್ತಷ್ಟು ಅವಕಾಶಗಳು ಬರಲಿ,ಜನಮಾನಸದಲ್ಲಿ ನೆಲೆ ನಿಲ್ಲುವ ಪಾತ್ರಗಳ ಮೂಲಕ ಮಿಂಚಲಿ ಎಂಬುದು ’ಕನ್ನಡ ಧ್ವನಿ’ಯ ಹಾರೈಕೆ.
*ವಾರದ ವಿಶೇಷ*