*ಕೇಜ್ರಿವಾಲ್ ಸಹಿತ ಘಟಾನುಘಟಿಗಳ ಸೋಲು* / *ಶೂನ್ಯದಿಂದ ಮೇಲೇಳಲು ಕೈ ಪಡೆ*
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ ಪೊರಕೆಯನ್ನೆ ಗುಡಿಸಿ ಹಾಕಿದ ಬಿಜೆಪಿ 27 ವರ್ಷಗಳ ನಂತರ, ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೇರಿದೆ.
ಕಳೆದ ಒಂದು ದಶಕದ ಆಳ್ವಿಕೆಯ ನಂತರ ಆಮ್ ಆದ್ಮಿ ಪಕ್ಷ (ಎಎಪಿ)ಹೀನಾಯವಾಗಿ ಸೋತಿದ್ದು, ಅದರ ನಾಯಕ ಅರವಿಂದ ಕೇಜ್ರಿವಾಲ್,ಮನೀಶ್ ಸಿಸೋಡಿಯಾ ಅನೇಕ ಘಟನಾಘಟಿ ನಾಯಕರು ಮಣ್ಣು ಮುಕ್ಕಿದ್ದಾರೆ. ಆದರೆ ಹಾಲಿ ಸಿಎಂ ಗೆಲುವಿನ ದಡ ತಲುಪಿದ್ದಾರೆ.
ಒಟ್ಟು 70 ಸ್ಥಾನಗಳ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಈವರೆಗೆ ಬಿಜೆಪಿ 48ಸ್ಥಾನಗಳನ್ನು ಗೆದ್ದಿದೆ .ಹಿಂದಿನ ಚುನಾವಣೆಯಲ್ಲಿ 62 ಗೆದ್ದ ಆಮ್ ಆದ್ಮಿ ಪಾರ್ಟಿ 22ರಲ್ಲಿ ಗೆಲುವು ಸಾಧಿಸಿದೆ.
ಕಾಂಗ್ರೆಸ್ ಸತತ ಮೂರನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿದೆ.
. ಮನೀಶ ಸಿಸೋಡಿಯಾ ಮತ್ತು ಪ್ರಮುಖ ಸಚಿವ ಸೌರಭ ಭಾರದ್ವಾಜ ಸೇರಿದಂತೆಎಎಪಿಯ ಎಂಟು ಪ್ರಮುಖ ನಾಯಕರು ಪರಾಭವಗೊಂಡಿದ್ದು ಭದ್ರಕೋಟೆ ಛಿದ್ರ ಗೊಂಡಿದೆ.
*ನಕಾರಾತ್ಮಕ ರಾಜಕಾರಣ ಮಾಡುತ್ತಿದ್ದವರಿಗೆ ಪಾಠ*
ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾದಿ-ಬೀದಿ ರಂಪ ಮಾಡುತ್ತ ನಕಾರಾತ್ಮಕ ರಾಜಕಾರಣ ಮಾಡುತ್ತಿದ್ದವರನ್ನು ದೆಹಲಿ ಮತದಾರರು ಸಂಪೂರ್ಣ ತಿರಸ್ಕರಿಸಿದ್ದಾರೆ ಎಂದು ಹೇಳಿದರು.
ದೆಹಲಿ ವಿಧಾನಸಭೆ ಚುನಾವಣೆ ಕುರಿತು ವಿಶ್ಲೇಷಿಸಿದ ಅವರು
ಜನವಿರೋಧಿ, ಅಭಿವೃದ್ಧಿ ವಿರೋಧಿ, ಢೋಂಗಿ ಭ್ರಷ್ಟಾಚಾರ ವಿರೋಧಿಗಳಿಗೆ ದೆಹಲಿ ಜನ ಮನೆಯ ಹಾದಿ ತೋರಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ, ಶುದ್ಧ ಆಡಳಿತ ಮತ್ತು ನೈಜ ಪ್ರಜಾಪ್ರಭುತ್ವವನ್ನು ಬೆಂಬಲಿಸಿದ್ದಾರೆ ಎಂದರು.