*ಧಾರವಾಡ :ಅಂತಿಮ 17 ಅಭ್ಯರ್ಥಿಗಳು ಕಣದಲ್ಲಿ*
ಧಾರವಾಡ: ಧಾರವಾಡ ಚುನಾವಣಾ
ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ
ಅಂತಿಮ 25ಅಭ್ಯರ್ಥಿಗಳಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಸಹಿತ
ಎಂಟು ಅಭ್ಯರ್ಥಿಗಳು ಇಂದು ನಾಮಪತ್ರ ಹಿಂಪಡೆದಿದ್ದು,ಅಂತಿಮವಾಗಿ 17 ಜನ ಅಭ್ಯರ್ಥಿಗಳು ಉಳಿದಿದ್ದಾರೆ.
ಪ್ರಹ್ಲಾದ ಜೋಶಿಯವರ ವಿರುದ್ದ ಲಿಂಗಾಯತ ಸೇರಿದಂತೆ ಅನೇಕ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಭಕ್ತರ ಸಭೆ ನಡೆಸಿ ನಾಮಪತ್ರ ಸಲ್ಲಿಸುವ ಮೂಲಕ ಧಾರವಾಡ ಕ್ಷೇತ್ರದಲ್ಲಿ ರಣ ರೋಚಕ ಹಣಾಹಣಿಯ ಕುತೂಹಲ ಕೆರಳಿಸಿದ್ದ ಸ್ವಾಮೀಜಿ ಇಂದು ದಿಢೀರ್ ಅಗಿ ತಮ್ಮ ನಾಮಪತ್ರ ಹಿಂಪಡೆದಿದ್ದು ಜೋಶಿಯವರ ಅಶ್ವಮೇಧಕ್ಕೆ ಮತ್ತೆ ದಾರಿ ಸರಳವಾದಂತಾಗಿದೆ.
ನಾಮಪತ್ರ ಹಿಂದೆ ಪಡೆದ ನಂತರ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಅವರ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ 20 ದಿನಗಳ ಹಿಂದೆ ಆರಂಭಿಸಿದ ಹೋರಾಟಕ್ಕೆ ಧರ್ಮಯುದ್ದ ಕರೆದಿದ್ದೆ. ನಾಮಪತ್ರ ಸಲ್ಲಿಕೆ ನಂತರ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷದ ನಾಯಕರು ನಮ್ಮ ಜತೆ ಚರ್ಚೆ ಮಾಡಿದ್ದು, ಸಿಎಮ್, ಡಿಸಿಎಂ ಸಹಿತ ಮಾತನಾಡಿದ್ದರು. ಆದರೆ ಎಲ್ಲರಿಗೂ ನೇರ ಉತ್ತರ ಕೊಟ್ಟಿದ್ದೆ. ಆದರೆ ನಮ್ಮ ಗುರುಗಳು ನಾಮಪತ್ರ ವಾಪಸ್ ಪಡೆಯಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪಡೆದಿದ್ದೇನೆ ಎಂದರು.
ನಮ್ಮ ಧರ್ಮಯುದ್ದ ಮುಂದುವರೆಯುತ್ತದೆ. ಚುನಾವಣೆ ಒಂದು ಹೊರತು ಪಡಿಸಿ ಎಲ್ಲ ವರ್ಗದಲ್ಲಿ ಧರ್ಮಯುದ್ದ ಮುಂದುವರೆಯುತ್ತದೆ..ನಮ್ಮ ಧರ್ಮಯುದ್ಧಲ್ಲಿ ಯಾರೂ ಬೇಡಾ ಅಂತಾ ಹೇಳಿದ್ಧೆವೊ ಅವರ ವಿರುದ್ದ ಹೋರಾಟ ಮುಂದುವರೆಯತ್ತದೆ.ಎರಡು ಪಕ್ಷದವರೂ ಸಪೋರ್ಟ್ ಮಾಡಿ ಅನ್ನೋ ಬೇಡಿಕೆ ಇದೆ.ಹಿಂದೆ ಯಾರ ನನಗೆ ಸಪೋರ್ಟ್ ಮಾಡಿದ್ದರೋ,ಅವರ ಜೊತೆ ನಾನು ಸಭೆ ಮಾಡ್ತೀನಿ. ರಾಜಕೀಯದಲ್ಲಿ ಬದಲಾವಣೆ ಸರ್ವೆ ಸಾಮಾನ್ಯ. ಹೋರಾಟಕ್ಜೆ ಏನೂ ಕಾರಣ ಅನ್ನೋದ ಗೊತ್ತಿದೆ..ನನ್ನ ಹಿಂದಕ್ಕೆ ಸರಿಸೋ ವ್ಯಕ್ತಿ ರಾಜಕೀಯ ರಂಗದಲ್ಲಿ ಇಲ್ಲ ಎಂದಿದ್ದೆ,ಈಗಲೂ ಅದಕ್ಜೆ ಬದ್ದ.ನಾನು ರಾಜಕೀಯ ನಾಯಕರ ಮಾತು ಕೇಳಿ ವಾಪಸ್ ಪಡೆದಿಲ್ಲ. ನನ್ನ ಬಾಯಿ ಯಾರೂ ಕಟ್ಟಿ ಹಾಕಿಲ್ಲ..ನಾನು ಹೋರಾಟದಲ್ಲಿ ಮುಂದುವರೆಯುತ್ತೇನೆ ಎಂದ ದಿಂಗಾಲೇಶ್ವರ ಸ್ವಾಮೀಜಿ .ನನ್ನ ಗುರಿ ಮುಟ್ಟುವರೆಗೂ ಮಾಲೆ ಧರಿಸುವದಿಲ್ಲ.ಧರ್ಮಯುದ್ದದಲ್ಲಿ ಜಯ ಸಿಗೋ ವರೆಗೂ ಮಾಲೆ ಧರಿಸಲ್ಲ.ನಾವ ಗುರಿ ಮುಟ್ಟತೀವಿ ಅನ್ನೋ ವಿಶ್ವಾಸ ನಾಡಿನ ಜನತೆಗೆ ಇದೆ..ನಾನು ಬಿಜೆಪಿ ಕಾಂಗ್ರೆಸ್ ಮೇಲೆ ಆಪಾದನೆ ಮಾಡಲ್ಲ ಎಂದರು.
ನಾನು ಶಸ್ತ್ರತ್ಯಾಗ ಮಾಡಿಲ್ಲ ಎಂದ ದಿಂಗಾಲೇಶ್ವರ ಸ್ವಾಮೀಜಿ ನನ್ನ ಹೋರಾಟ ಮುಂದುವರಿಯಲಿದೆ. ಯತ್ನಾಳ ಬಾಯಿಗೆ ಲಗಾಮ್ ಇಲ್ಲದೇ ಮಾತನಾಡುತ್ತಾನೆ ಅದು ಬ್ರೇನ್ ಲೆಸ್ ಬಾಡಿ ಎಂದರಲ್ಲದೆ ಹಣಕ್ಕಾಗಿ ಚುನಾವಣೆ ಮಾಡೋರು ಇದ್ದಾರೆ ಆದರೆ ನನಗೆ ಹಣದ ಅವಶ್ಯಕತೆ ಇಲ್ಲ ಎಂದರು.
ಕ್ರಮಬದ್ದವಾಗಿ ನಾಮನಿರ್ದೇಶನಗೊಂಡಿದ್ದ ವೀಣಾ ಜನಗಿ,
ಪ್ರವೀಣಕುಮಾರ ಮಾದರ, ರವಿ ಪಟ್ಟಣಶೆಟ್ಟಿ, ರಿಯಾಜ ಶೇಖ,
ದಿಂಗಾಲೇಶ್ವರ ಮಹಾಸ್ವಾಮಿಗಳು, ಶಿವಾನಂದ ಮುತ್ತಣ್ಣವರ,
ರಾಜಶೇಖರಯ್ಯ ಕಂತಿಮಠ ಮತ್ತು ವೆಂಕಟೇಶ ಆಚಾರ್ಯ
ಮಣ್ಣೂರ ಅವರು ತಮ್ಮ ಉಮೇದುವಾರಿಕೆ ವಾಪಸ್ಸು ಪಡೆದಿದ್ದಾರೆ
ಎಂದು ಅವರು ತಿಳಿಸಿದ್ದು ಇದರೊಂದಿಗೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಮತ್ತೆ ನಿಶ್ಚಿತವಾಗಿದೆ.
ಅಂತಿಮವಾಗಿ ಧಾರವಾಡ ಚುನಾವಣಾ ಕ್ಷೇತ್ರದಿಂದ
ಲೋಕಸಭೆ ಚುನಾವಣೆಗೆ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು
ರಾಜ್ಯ ರಾಜಕೀಯ ಪಕ್ಷಗಳಾದ ಭಾರತೀಯ ಜನತಾ ಪಾರ್ಟಿಯಿಂದ ಪ್ರಲ್ಹಾದ ಜೋಶಿ, ಇಂಡಿಯನ್ ನ್ಯಾ?ನಲ್ ಕಾಂಗ್ರೆಸ್ ಪಕ್ಷದಿಂದ ವಿನೋದ ಅಸೂಟಿ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿ ನಾಕಿ ಭಾರತೀಯ ಏಕತಾ ಪಾರ್ಟಿಯಿಂದ ಜಾವೀದ ಅಹಮದ್
ಬೆಳಗಾಂವಕರ್, ಪ್ರಹಾರ ಜನಶಕ್ತಿ ಪಾರ್ಟಿಯಿಂದ ಟಾಕಪ್ಪ ಯಲ್ಲಪ್ಪ ಕಲಾಲ, ಕರ್ನಾಟಕ ರಾ? ಸಮಿತಿ ಪಕ್ಷದಿಂದ ನಾಗರಾಜ ಕರೆಣ್ಣವರ,ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಬುಗಡಿ ಬಸವಲಿಂಗಪ್ಪ ಈರಪ್ಪ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ ಮಹಮ್ಮದ ಇಸ್ಮಾಯಿಲ್ಮುಕ್ತಿ, ಪ್ರೌಟೀಸ್ಟ್ ಬ್ಲಾಕ್ ಇಂಡಿಯಾ ಪಕ್ಷದಿಂದ ವಿನೋದ ದಶರಥ ಘೋಡಕೆ, ಇಂಡಿಯನ್ ಲೇಬರ್ ಪಾರ್ಟಿ (ಅಂಬೇಡ್ಕರ, ಪುಲೆ)ಯಿಂದವೆಂಕಟೇಶ ಪ್ರಸಾದ ಎಚ್., ಸೋ?ಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್) ಪಕ್ಷದಿಂದ ಶರಣಬಸವ ಗೋನವಾರ ಮತ್ತು ಟಿಪ್ಪು
ಸುಲ್ತಾನ ಪಾರ್ಟಿಯಿಂದ ಬಂಕಾಪುರ ಶೌಖತ್ ಅಲಿ ಅವರು ಸ್ಪರ್ಧಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ಡಾ. ಗುರಪ್ಪ ಹೆಚ್.ಇಮ್ರಾಪೂರ,
ಪ್ರವೀಣ ಹ.ಹತ್ತೆನವರ, ಬಾಳನಗೌಡ್ರ ಮಲ್ಲಿಕಾರ್ಜುನಗೌಡ, ರಾಜು ಅನಂತಸಾ ನಾಯಕವಾಡಿ, ಶಕೀಲ ಅಹ್ಮದ ಡಿ ಮುಲ್ಲಾ ಮತ್ತುಎಸ್.ಎಸ್.ಪಾಟೀಲ್ ಸ್ಪರ್ಧಿಸಿದ್ದಾರೆಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದ್ದಾರೆ
ಬಿಜೆಪಿಯ ಮಾಜಿ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ಸಹ ಸಮಾಜದ ಮತ ಒಡೆಯಬಾರದೆಂಬ ಉದ್ದೇಶದಿಂದ ಕಣದಿಂದ ಹಿಂದಕ್ಕೆ ಸರಿದಿದ್ದಾರೆ.
*ಈಶ್ವರಪ್ಪ ಪಕ್ಷದಿಂದ ವಜಾ*
ಇನ್ನೊಂದೆಡೆ ಶಿವಮೊಗ್ಗದಲ್ಲಿ ಪಕ್ಷೇತರರಾಗಿ ಸೆಡ್ಡು ಹೊಡೆದಿರುವ ಕೆ.ಎಸ್.ಈಶ್ವರಪ್ಪ ಅವರನ್ನು ೬ ವರ್ಷಗಳ ಕಾಲ ಪಕ್ಷದಿಂದ ಹುಬ್ಬಳ್ಳಿಯಲ್ಲಿರುವ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಉಚ್ಛಾಟಿಸಿದ್ದಾರೆ.